ಬೆಳ್ತಂಗಡಿ (ಅ.14): ಮಾಜಿ ಶಾಸಕ ವಸಂತ ಬಂಗೇರ ಅವರ ಆಪ್ತ, ಕಾಂಗ್ರೆಸ್‌ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ನಾರಾವಿ ಶ್ರೀನಿವಾಸ ಕಿಣಿ,  ಶಾಸಕ ಹರೀಶ ಪೂಂಜ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. 

ಬಂಟ್ವಾಳದ ಬಂಟರ ಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್‌ನ ಗ್ರಾಮೀಣ ಬ್ಲಾಕ್‌ ಮಾಜಿ ಅಧ್ಯಕ್ಷ ಕಿಣಿ ಬಿಜೆಪಿಯ ತತ್ವ, ಸಿದ್ಧಾಂತವನ್ನು ಮೆಚ್ಚಿ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ.

'ಯಡಿಯೂರಪ್ಪ ಏಟು ತಿನ್ನಲ್ಲ, ಕೇಸು ಹಾಕಿಸಿಕೊಳ್ಳಲ್ಲ, ನಾವು ಏಟು ತಿಂದು-ಕೇಸು ಹಾಕಿಸಿಕೊಂಡಿದ್ದೇವೆ' ...

ಈಗಾಗಲೇ ರಾಜ್ಯ ರಾಜಕೀಯದಲ್ಲಿ ಚುನಾವಣೆ ಅಬ್ಬರ ಜೋರಾಗಿದೆ.  ಇದೇ ವೇಳೆ ಪಕ್ಷಾಂತರ ಪರ್ವವೂ ಕೂಡ ಹೆಚ್ಚಾಗಿದ್ದು, ಕಾಂಗ್ರೆಸ್ ಮುಖಂಡರೋರ್ವರು ಬಿಜೆಪಿ ಸೇರಿದ್ದಾರೆ. 

ಇನ್ನು ವಿವಿಧ ಕ್ಷೇತ್ರಗಳಲ್ಲಿಯೂ ಕೂಡ ಪಕ್ಷಾಂತರ ಹಾಗೂ ರಾಜಕೀಯ ಚಟುವಟಿಕೆ ಭಿರುಸುಗೊಂಡಿದೆ.