'ಬಿಜೆಪಿ ಸರ್ಕಾರವೋ..ಸಿಡಿ ಸರ್ಕಾರವೋ'

ಸದ್ಯದ ಸಿಡಿ ಪ್ರಕರಣಗಳನ್ನು ಗಮನಿಸಿದರೆ ಮುಂಬೈನಲ್ಲಿಯೇ ಸಿಡಿಗಳು ತಯಾರಾಗಿರಬಹುದು| ಸಿಡಿ ಪ್ರಕರಣದಲ್ಲಿ ಬಿಜೆಪಿಯವರು ಇದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವರೇ ಹೇಳಿದ್ದಾರೆ| ಸುಮ್ಮನೆ ಈ ಪ್ರಕರಣದಲ್ಲಿ ಕಾಂಗ್ರೆಸ್‌ ನವರು ಇದ್ದಾರೆ ಎಂದು ಹೇಳುವುದು ಸರಿಯಲ್ಲ: ಎಸ್‌.ಆರ್‌.ಪಾಟೀಲ| 

Congress Leader SR Patil Talks Over CD Case grg

ಬಾಗಲಕೋಟೆ(ಮಾ.21): ಮಾಜಿ ಸಚಿವರೊಬ್ಬರ ಸಿಡಿ ಪ್ರಕರಣ ಹಾಗೂ ಬಿಜೆಪಿ ಸರ್ಕಾರದ ಆರು ಸಚಿವರು ನ್ಯಾಯಾಲಯದಿಂದ ತಂದಿರುವ ತಡೆಯಾಜ್ಞೆಯನ್ನು ಗಮನಿಸಿದರೆ, ಇದು ಬಿಜೆಪಿ ಸರ್ಕಾರವೋ ಅಥವಾ ಸಿಡಿ ಸರ್ಕಾರವೋ ಅನ್ನುವ ಹಾಗಾಗಿದೆ ಎಂದು ವಿಧಾನ ಪರಿಷತ್‌ನ ಪ್ರತಿಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಸಿಡಿ ಪ್ರಕರಣಗಳನ್ನು ಗಮನಿಸಿದರೆ ಮುಂಬೈನಲ್ಲಿಯೇ ಸಿಡಿಗಳು ತಯಾರಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 17 ಶಾಸಕರು ಮುಂಬೈಗೆ ತೆರಳಿದ್ದರು. ಅವರು ಸಹ ಕುಟುಂಬದಿಂದ ಬಹಳ ದಿನ ದೂರವಿದ್ದರು ಆ ಸಂದರ್ಭದಲ್ಲಿ ಏನೇನಾಗಿದಿಯೋ ಯಾರು ಕಂಡಿದ್ದಾರೆ ಎಂದರು.

ಎಸ್‌ಐಟಿ ಅವರ ಬಳಿ 200 ಸಿಡಿಗಳ ರಾಶಿಯೇ ಇದೆ ಎಂದು ಪತ್ರಿಕೆಯಲ್ಲಿ ಓದಿದ್ದೇನೆ. ಸಿಡಿ ಪ್ರಕರಣದಲ್ಲಿ ಬಿಜೆಪಿಯವರು ಇದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವರೇ ಹೇಳಿದ್ದಾರೆ. ಸುಮ್ಮನೆ ಈ ಪ್ರಕರಣದಲ್ಲಿ ಕಾಂಗ್ರೆಸ್‌ ನವರು ಇದ್ದಾರೆ ಎಂದು ಹೇಳುವುದು ಸರಿಯಲ್ಲ. ಎಸ್‌ಐಟಿ ತನಿಖೆಯಿಂದ ಸಾಕ್ಷಾಧಾರಗಳ ಸಮೇತ ಯಾರು ಇದರ ಹಿಂದೆ ಇದ್ದಾರೆ. ದೂರು ದಾಖಲಿಸಿಕೊಳ್ಳುವ ಅಧಿಕಾರ ಎಸ್‌ಐಟಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇನ್ನಷ್ಟು ಪರಿಣಾಮಕಾರಿಯಾಗಿ ತನಿಖೆಯಾಗುವುದು ಅವಶ್ಯವಿದೆ ಎಂದರು.

'ಈ ಬಾರಿ ಸಿದ್ದರಾಮಯ್ಯ ಸೋಲು ಖಚಿತ'

ಬರುವ ಚುನಾವಣೆಯಲ್ಲಿ ಇಂತಹವರನ್ನು ಅಭ್ಯರ್ಥಿಗಳನ್ನು ಹಾಕಿ ಹೇಗೆ ಚುನಾವಣೆ ಎದುರಿಸುತ್ತಾರೆ ಬಿಜೆಪಿಯವರು ಎಂದು ನನಗೆ ಆಶ್ಚರ್ಯ ಆಗುತ್ತಿದೆ. ಸರ್ಕಾರಕ್ಕೆ ಇಷ್ಟೆಲ್ಲ ಅವಾಂತರವಾಗಿ ಕೆಟ್ಟಹೆಸರು ಬಂದ ಸಂದರ್ಭದಲ್ಲಿ ಮತದಾರರು ಯೋಗ್ಯವಾದ ನಿರ್ಧಾರ ಕೈಗೊಳ್ಳಿದ್ದಾರೆ ಎಂದರು.

ಯಂತ್ರಗಳ ದುರ್ಬಳಿಕೆ ಮಾಡಿ ಹಣದ ಹೊಳೆ ಹರಿಸಿದರೂ ಜನತೆ ಈ ಬಾರಿ ಬಿಜೆಪಿಯÜನ್ನು ಧೂಳಿಪಟ ಮಾಡಲಿದೆ. ಸದ್ಯದ ಸ್ಥಿತಿಗತಿ ನೋಡಿದರೆ ಮತ್ತೆ ನಾವು ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ ಎಂದು ತಿಳಿಸಿದರು.
 

Latest Videos
Follow Us:
Download App:
  • android
  • ios