'ಈ ಬಾರಿ ಸಿದ್ದರಾಮಯ್ಯ ಸೋಲು ಖಚಿತ'

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದ ಅಂತರ ಎಲ್ಲರಿಗೂ ಗೊತ್ತಿದೆ| ಕಡಿಮೆ ಅಂತರದಲ್ಲಿ ನಾವು ಕ್ಷೇತ್ರವನ್ನು ಕಳೆದುಕೊಂಡಿದ್ದೇವೆ| ಖಂಡಿತವಾಗಿಯೂ ಸಿದ್ದರಾಮಯ್ಯ ಅವರನ್ನು ಅಷ್ಟೇ ಅಲ್ಲ, ಕಾಂಗ್ರೆಸ್‌ದಿಂದ ಯಾರೇ ಸ್ಪರ್ಧೆ ಮಾಡಿದರೂ ಅವರ ಸೋಲು ಖಚಿತ: ಎಸ್‌.ಟಿ.ಪಾಟೀಲ| 

BJP Leader ST Patil Talks Over Siddaramaiah grg

ಗುಳೇದಗುಡ್ಡ(ಮಾ.18): ಕಾರ್ಯಕರ್ತರ ಶ್ರಮದಿಂದ ಬಾದಾಮಿ ವಿಧಾನಸಭಾ ಮತಕ್ಷೇತ್ರದಲ್ಲಿ ಪಕ್ಷ ಬಲಿಷ್ಠವಾಗಿದೆ. ಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಈ ಕ್ಷೇತ್ರದಿಂದಲೇ ಮತ್ತೆ ಸ್ಪರ್ಧಿಸುವುದಾಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಖಂಡಿತವಾಗಿಯೂ ಅವರನ್ನು ಅಷ್ಟೇ ಅಲ್ಲ, ಕಾಂಗ್ರೆಸ್‌ದಿಂದ ಯಾರೇ ಸ್ಪರ್ಧೆ ಮಾಡಿದರೂ ಅವರ ಸೋಲು ಖಚಿತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಟಿ.ಪಾಟೀಲ ಹೇಳಿದ್ದಾರೆ.

ಅವರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹುಲ್ಲಿಕೇರಿ, ಕಟಗೇರಿ ಹಾಗೂ ಗುಳೇದಗುಡ್ಡ ನಗರ ಈ ಮೂರು ಶಕ್ತಿ ಕೇಂದ್ರಗಳ ಸಂಘಟನಾ ಸಭೆಯಲ್ಲಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಗೆದ್ದ ಅಂತರ ಎಲ್ಲರಿಗೂ ಗೊತ್ತಿದೆ. ಕಡಿಮೆ ಅಂತರದಲ್ಲಿ ನಾವು ಕ್ಷೇತ್ರವನ್ನು ಕಳೆದುಕೊಂಡಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಈ ಕ್ಷೇತ್ರದಿಂದಲೇ ಮತ್ತೆ ಸ್ಪರ್ಧಿಸುವುದಾಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ಖಂಡಿತವಾಗಿಯೂ ಅವರನ್ನು ಅಷ್ಟೇ ಅಲ್ಲ, ಕಾಂಗ್ರೆಸ್‌ದಿಂದ ಯಾರೇ ಸ್ಪರ್ಧೆ ಮಾಡಿದರೂ ಅವರ ಸೋಲು ಖಚಿತ. ಮತಕ್ಷೇತ್ರದಲ್ಲಿ ನಮ್ಮ ಪಕ್ಷದ ಸದಸ್ಯರು, ಗ್ರಾಪಂ, ತಾಪಂ ಹಾಗೂ ಜಿಪಂನಲ್ಲಿ ಗೆದ್ದಿದ್ದಾರೆ. ಇದಕ್ಕೆ ನಮ್ಮ ಕಾರ್ಯಕರ್ತರೇ ಕಾರಣ. ಅವರ ಪರಿಶ್ರಮದಿಂದ ಮುಂದಿನ ದಿನಗಳಲ್ಲಿ ಮತಕ್ಷೇತ್ರ ನಮ್ಮದಾಗುತ್ತದೆ ಎಂದರು.

ಬಾಗಲಕೋಟೆ: ಮಹಾರಾಷ್ಟ್ರಕ್ಕೆ ಕನ್ಯೆ ನೋಡಲು ಹೋಗಿ ಬಂದವರಿಗೆ ವಕ್ಕರಿಸಿದ ಕೊರೋನಾ..!

ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಮತಕ್ಷೇತ್ರದಲ್ಲಿ ಅಧಿಕಾರಿಗಳಿಂದ ನಮ್ಮ ಕಾರ್ಯಕರ್ತರ ಕೆಲಸಗಳು ಆಗುತ್ತಿಲ್ಲ. ನಮ್ಮ ಸರ್ಕಾರವಿದ್ದರೂ ನಮ್ಮ ಕ್ಷೇತ್ರದಲ್ಲಿ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ಧಮಕಿ ಹಾಕಿ ಕೆಲಸ ತೆಗೆದುಕೊಳ್ಳಬೇಕಾಗಿದ ಸ್ಥಿತಿ ಬಂದೊದಗಿದೆ ಎಂದು ತಮ್ಮ ಮನದಾಳದ ನೋವನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ಎಂ.ಕೆ.ಪಟ್ಟಣಶೆಟ್ಟಿ, ಭೀಮನಗೌಡ ಪಾಟೀಲ, ಮಹಾಂತೇಶ ಮಮದಾಪೂರ, ಶಿವಪುತ್ರಪ್ಪ ಸುಂಕದ ಹಾಗೂ ಇತರರು ಮಾತನಾಡಿದರು. ರವೀಂದ್ರ ಪಟ್ಟಣಶೆಟ್ಟಿ, ಸಂಪತ್‌ಕುಮಾರ ರಾಠಿ, ಎಫ್‌.ಆರ್‌.ಪಾಟೀಲ, ಕಮಲಕಿಶೋರ ಮಾಲಪಾಣಿ, ವಸಂತ ದೊಂಗಡೆ, ಭಾಗ್ಯಾ ಉದ್ನೂರ, ಸಾವಿತ್ರಿ ಜೋಗೂರು, ಯಮನಪ್ಪ ಬಂಡಿವಡ್ಡರ, ಸಿದ್ದಣ್ಣ ಶಿವನಗುತ್ತಿ, ಪ್ರಮೋದ ಕವಡಿಮಟ್ಟಿವೇದಿಕೆ ಮೇಲಿದ್ದರು. ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು, ಶಕ್ತಿಕೇಂದ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಭುವನೇಶ ಪೂಜಾರ ನಿರೂಪಿಸಿದರು. ರಾಮು ಮಿಣಜಗಿ ವಂದಿಸಿದರು.
 

Latest Videos
Follow Us:
Download App:
  • android
  • ios