Asianet Suvarna News Asianet Suvarna News

ಮೋದಿಗೆ ತಕ್ಕ ಪಾಠ ಕಲಿಸಲು ಜನ ತುದಿಗಾಲ ಮೇಲೆ ನಿಂತಿದ್ದಾರೆ: ಎಸ್‌.ಆರ್‌. ಪಾಟೀಲ

* ಕೇಂದ್ರ, ರಾಜ್ಯ ಸರ್ಕಾರ ತಿರಸ್ಕರಿಸಲಿರುವ ಮತದಾರ
* ದೇಶದ ಒಳಿತಿಗಾಗಿ ಅತ್ಯುತ್ತಮ ಆಡಳಿತ ಬಿಜೆಪಿಯಿಂದ ಸಿಗುತ್ತೆ ಎಂಬ ಭರವಸೆ ಸುಳ್ಳಾಗಿದೆ
* ಬಿಜೆಪಿ ಆಡಳಿತ ನಡೆಸುವಲ್ಲಿ ಸಂಪೂರ್ಣ ವೈಫಲ್ಯತೆ ಕಂಡಿದೆ

Congress Leader SR Patil Slam BJP Government grg
Author
Bengaluru, First Published Jun 12, 2021, 3:04 PM IST

ಬಾಗಲಕೋಟೆ(ಜೂ.12): ಮುಂಬರುವ ರಾಜ್ಯ ಹಾಗೂ ಕೇಂದ್ರದ ಮೋದಿ ಸರ್ಕಾರವನ್ನು ತಿರಸ್ಕರಿಸಲು ದೇಶದ ಮತದಾರರು ತುದಿಗಾಲ ಮೇಲೆ ನಿಂತಿದ್ದಾರೆ. ಖಂಡಿತವಾಗಿಯೂ ಎರಡು ಸರ್ಕಾರಗಳು ನಿರ್ಗಮಿಸಲಿವೆ ಎಂದು ವಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವಿರೋಧಿ ಸರ್ಕಾರಗಳನ್ನು ಜನತೆ ಯಾವತ್ತು ಕ್ಷಮಿಸುವುದಿಲ್ಲ. ನಿಶ್ಚಿತವಾಗಿಯೂ ದೇಶದ ಜನ ಬಿಜೆಪಿಗೆ ಪಾಠ ಕಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಚುನಾವಣೆಗಳು ಬಂದಾಗ ಬಿಜೆಪಿಗೆ ಪಾಠ ಕಲಿಸಿ ಜನತೆ ಮನೆಗೆ ಕಳುಹಿಸುತ್ತಾರೆಂದು ಹೇಳಿದ್ದಾರೆ. 

ಸಿಎಂ ಬದಲಾವಣೆ: ನಳಿನ್‌ ಕುಮಾರ್‌ ಕಟೀಲ್ ಹೇಳಿದ್ದಿಷ್ಟು

ದೇಶದ ಒಳಿತಿಗಾಗಿ ಅತ್ಯುತ್ತಮ ಆಡಳಿತ ಬಿಜೆಪಿಯಿಂದ ಸಿಗುತ್ತೆ ಎಂಬ ಭರವಸೆ ಸುಳ್ಳಾಗಿದೆ. ರಾಜ್ಯದಲ್ಲಿ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಆಡಳಿತ ನಡೆಸುವಲ್ಲಿ ಸಂಪೂರ್ಣ ವೈಫಲ್ಯತೆ ಕಂಡಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 17 ಶಾಸಕರನ್ನು ಮುಂಬೈ ಕರೆದುಕೊಂಡು ಹೋಗಿ ನೂರಾರು ಕೋಟಿ ಹಣ ವ್ಯಯ ಮಾಡಿ ಸರ್ಕಾರ ಮಾಡಿದರು ಸಹ ಜನರಿಗೆ ಏನು ಉಪಯೋಗವಾಗಲಿಲ್ಲವೆಂದು ದೂರಿದರು.

ಕಾರಜೋಳ ವಿರುದ್ಧ ಕಿಡಿ:

ಮುತ್ಸದ್ದಿ ರಾಜಕಾರಣಿ ಎಂದು ಕರೆಸಿಕೊಳ್ಳುವ ಡಿಸಿಎಂ ಗೋವಿಂದ ಕಾರಜೋಳ ಅವರು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಬಾರದು. ನಮಗೆ ಅಧಿಕಾರಕ್ಕೆ ಬರಬೇಕಾದಂತಹದ್ದೇನು ಇಲ್ಲ. ನೀವೆ ಅಧಿಕಾರದಲ್ಲಿರಿ. ಆದರೆ, ಒಳ್ಳೆಯ ಆಡಳಿತ ನಿಮ್ಮಿಂದ ಸಿಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
 

Follow Us:
Download App:
  • android
  • ios