ಶಿರಾ (ಫೆ.25):  ವಿಷಕಾರಿ ಮೇವು ಸೇವಿಸಿ ಶಿರಾ ತಾಲೂಕಿನ ಕುಂಟನಹಳ್ಳಿಯ ಚಿತ್ತಣ್ಣ ಎಂಬುವರ 200 ಕುರಿ ಸಾವು ಪ್ರಕರಣ ಸೇರಿದಂತೆ ಇಂತಹ ಎಲ್ಲ ಆಕಸ್ಮಿಕ ಜಾನುವಾರು ಸಾವು ಪ್ರಕರಣಗಳಿಗೆ ಕೂಡಲೇ ರಾಜ್ಯ ಸರ್ಕಾರ ಕನಿಷ್ಠ 5000 ರು.ನಿಂದ 10,000 ಸಾವಿರ ರು. ಪರಿಹಾರ ನೀಡಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯಗೆ ಆಹ್ವಾನಿಸಿದ BJP ಶಾಸಕ : 10 ಎಕರೆ ಜಮೀನು ನೀಡುವುದಾಗಿ ಹೇಳಿಕೆ ...

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಈ ಹಿಂದೆ ನಮ್ಮ ಸರ್ಕಾರ (ಕಾಂಗ್ರೆಸ್‌ ಸರ್ಕಾರ) ಇದ್ದಾಗ ಇಂತಹ ಆಕಸ್ಮಿಕ ದುರಂತಗಳನ್ನು ತಡೆದುಕೊಳ್ಳುವ ಶಕ್ತಿ ಬಡ ಪಶುಪಾಲಕರಿಗೆ, ರೈತರಿಗೆ ಇರಲಿ ಎಂದು ‘ಅನುಗ್ರಹ’ ಯೋಜನೆ ಜಾರಿಗೆ ತಂದಿದ್ದೆವು ಅದನ್ನು ಈ ಸರ್ಕಾರ ನಿಲ್ಲಿಸಿದೆ ಎಂದು ಉಲ್ಲೇಖಿಸಿದ್ದಾರೆ. 

ಅಲ್ಲದೇ ಏಕಾಏಕಿ ಈ ಯೋಜನೆಯನ್ನು ನಿಲ್ಲಿಸಿ ಪಶು ಪಾಲಕರ ವಿರೋಧಿ ನಿಲುವು ತೆಗೆದುಕೊಂಡಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.