ಅಣ್ಣ ರಮೇಶ್ ಪರವಾಗಿ ಬೆಂಬಲ ನೀಡಲು ಇದೀಗ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ನಿಂತಿದ್ದಾರೆ.  ಎಚ್‌ಡಿ ಕೆ ಹೇಳಿಕೆ ಸತ್ಯ. ಪ್ರಕರಣದ ಬಗ್ಗೆ ಸತ್ಯತೆ ಹೊರಬರಲಿ ಎಂದರು. 

 ಬೆಳಗಾವಿ (ಮಾ.13):  ಮಾಜಿ ಸಚಿವರ ಸಿ.ಡಿ. ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿರುವುದು ಸ್ವಾಗತಾರ್ಹ. ಆದರೆ, ಯಾವುದೇ ಪ್ರಕರಣದಲ್ಲಿ ಎಸ್‌ಐಟಿ ವರದಿಯನ್ನಷ್ಟೇ ನೀಡುತ್ತದೆ. ಎಫ್‌ಐಆರ್‌ ದಾಖಲಾದರೆ ಮಾತ್ರ ಅಪರಾಧಿಗಳಿಗೆ ಶಿಕ್ಷೆ ನೀಡಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಐಟಿ ರಚನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿ ಕೆಲ ಮುಖಂಡರು ವ್ಯಕ್ತಪಡಿಸಿರುವ ಅಭಿಪ್ರಾಯ ಸರಿ ಇದೆ. ಸಿ.ಡಿ. ಪ್ರಕರಣದಿಂದ ಜಾರಕಿಹೊಳಿ ಕುಟುಂಬದ ಗೌರವಕ್ಕೆ ಸ್ಪಲ್ಪಮಟ್ಟಿಗೆ ಧಕ್ಕೆಯಾಗಿರಬಹುದು. 

HDK ಆಯ್ತು : ಜಾರಕಿಹೊಳಿ ಬೆಂಬಲಕ್ಕೆ ನಿಂತ ರೇವಣ್ಣ

ಆದರೆ, ನಮ್ಮೊಂದಿಗೆ ಅಪಾರ ಬೆಂಬಲಿಗರಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಲಿ. ಸತ್ಯಾಸತ್ಯತೆ ಹೊರಬರಲಿ. ಆಗ ಎಲ್ಲವೂ ಸ್ಪಷ್ಟವಾಗಲಿದೆ ಎಂದರು.