ಹಾಸನ (ಮಾ.13):  ರಮೇಶ್‌ ಜಾರಕಿಹೊಳಿ ನಾಯಕ ಸಮುದಾಯದಲ್ಲಿ ಕಷ್ಟಪಟ್ಟು ಬೆಳೆದಿದ್ದಾರೆ. ಪಕ್ಷಕ್ಕಿಂತ ಮನುಷ್ಯತ್ವ ಇರಬೇಕು. ಅದನ್ನು ಬಿಟ್ಟು ರಾಜಕೀಯಕ್ಕಾಗಿ ಕೀಳುಮಟ್ಟಕ್ಕೆ ಇಳಿಯಬಾರದು ಎಂದು ರೇವಣ್ಣ ಹೇಳಿದರು.

ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ವೈಯಕ್ತಿಕ ವಿಚಾರವನ್ನು ರಾಜಕೀಯಕ್ಕೆ ತಂದು ಒಬ್ಬ ವ್ಯಕ್ತಿಯನ್ನು ತೇಜೋವಧೆ ಮಾಡುವುದು ಸರಿಯಲ್ಲ. ಒಬ್ಬ ಮನುಷ್ಯ ನೋವಿನಲ್ಲಿದ್ದಾಗ ಧೈರ್ಯ ಹೇಳುವುದರಲ್ಲಿ ತಪ್ಪೇನಿಲ್ಲ  ಎಂದರು.

ಜಾರಕಿಹೊಳಿ ರಾಸಲೀಲೆ ಸಿ.ಡಿ. ಕೇಸ್ ವಾಪಸ್ ಪಡೆದಿದ್ಯಾಕೆ? ಕಾರಣ ಕೊಟ್ಟ ಕಲ್ಲಹಳ್ಳಿ ...

 ರಾಜಕಾರಣ ಇಂದು ಇರುತ್ತದೆ, ನಾಳೆ ಇರುವುದಿಲ್ಲ. ಇಂತಹ ವಿಚಾರಗಳನ್ನು ಬಳಸಿಕೊಂಡು ಅವರ ವ್ಯಕ್ತಿತ್ವ ಮತ್ತು ಕುಟುಂಬಕ್ಕೆ ಮಸಿ ಬಳಿಯುವ ಕೆಲಸ ಮಾಡಬಾರದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಬಿ.ವಿ. ಕರೀಗೌಡ ಉಪಸ್ಥಿತರಿದ್ದರು.

ಮಾಜಿ ಸಿಎಂ ಯಡಿಯೂರಪ್ಪನವರು ಯಾವ ಹೊಸ ಯೋಜನೆಗಳನ್ನು ನೀಡುವುದು ಬೇಡ. ಸಮ್ಮಿಶ್ರ ಸರ್ಕಾರದ ಯೋಜನೆಗಳು ಮತ್ತು ಕುಮಾರ ಸ್ವಾಮಿ ಮತ್ತು ಸಿದ್ದರಾಮಯ್ಯ ನೀಡಿದ್ದ ಯೋಜನೆಗಳಿಗೆ ಚಾಲನೆ ನೀಡಬೇಕು.