ಬಿಜೆಪಿ ಸರ್ಕಾರ ಬರೀ ಸುಳ್ಳಿನ ಸರಮಾಲೆಯಲ್ಲೇ ದುರಾಡಳಿತ ನಡೆಸ್ತಿದೆ:ಲಾಡ್
* ಬಿಜೆಪಿ ಸರ್ಕಾರದಿಂದ ದುರಾಡಳಿತ
* ಭಾರತದಲ್ಲಿ ಜನತೆಗೆ ವ್ಯಾಕ್ಸಿನ್ ಇನ್ನೂ ಸರಿಯಾಗಿ ತಲುಪಿಲ್ಲ
* ಬೇರೆ ದೇಶಗಳಿಗೆ ವ್ಯಾಕ್ಸಿನ್ ರಫ್ತು ಮಾಡುವ ಅವಶ್ಯಕತೆ ಇದೆಯಾ?
ಕೂಡ್ಲಿಗಿ(ಜು.12): ಕೋವಿಡ್ ಹೆಸರಿನಲ್ಲಿ ಸರಿಯಾದ ಲೆಕ್ಕ ಹಾಗೂ ಮಾಹಿತಿ ನೀಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಬಿಜೆಪಿ ಸರ್ಕಾರ ಬರೀ ಸುಳ್ಳಿನ ಸರಮಾಲೆಯಲ್ಲಿಯೇ ದುರಾಡಳಿತ ನಡೆಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಸಹಾಯಹಸ್ತ ಕಾರ್ಯಕ್ರಮದ ಬಳ್ಳಾರಿ ಜಿಲ್ಲಾ ಗ್ರಾಮಾಂತರ ಉಸ್ತುವಾರಿ ಸಂತೋಷ ಲಾಡ್ ಆರೋಪಿಸಿದ್ದಾರೆ.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಕಾಂಗ್ರೆಸ್‌ನ ಆರೋಗ್ಯ ಸಹಾಯಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕೋವಿಡ್ ಮಹಾಮಾರಿ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ. ಇದಕ್ಕೆ ವ್ಯಾಕ್ಸಿನ್ ನೀಡುವಲ್ಲಿ ಕೊರತೆ ಇರುವ ಕೂಗು ಆ ಪಕ್ಷದವರಿಂದಲೇ ಕೇಳುತ್ತಿದ್ದು, ಅತಿ ಹೆಚ್ಚು ತಯಾರಾಗಿರುವ ಭಾರತದಲ್ಲಿ ಜನತೆಗೆ ವ್ಯಾಕ್ಸಿನ್ ಇನ್ನೂ ಸರಿಯಾಗಿ ತಲುಪಿಲ್ಲ. ಬೇರೆ ದೇಶಗಳಿಗೆ ವ್ಯಾಕ್ಸಿನ್ ರಫ್ತು ಮಾಡುವ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿದರು.
'ಕಾಂಗ್ರೆಸ್‌ನಲ್ಲಿ ಒಡಕು ತರುತ್ತಿರುವ ಸಂತೋಷ ಲಾಡ್'
ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ, ಸಂಡೂರು ಶಾಸಕ ಈ. ತುಕಾರಾಂ, ಹರಪನಹಳ್ಳಿಯ ವೀಣಾ ಮಹಾಂತೇಶ, ಕೆಪಿಸಿಸಿ ಸದಸ್ಯ ಲೋಕೇಶ ವಿ. ನಾಯಕ, ಕಾಂಗ್ರೆಸ್ ಮುಖಂಡರಾದ ಗುಜ್ಜಲ್ ರಘು, ಜಿಂಕಲ್ ನಾಗಮಣಿ, ಶಿವಯೋಗಿ, ಎಂ.ಎಂ.ಜೆ. ಹರ್ಷವರ್ಧನ್, ಅಕ್ಷಯ ಲಾಡ್, ಎಂ.ಬಿ. ಪಾಟೀಲ್, ಆಶಾಲತಾ, ಕಾವಲ್ಲಿ ಶಿವಪ್ಪ ನಾಯಕ, ನೇತ್ರಾವತಿ, ಲಕ್ಷ್ಮಣ, ಇಮಾಮ್ ಜಿ., ಇಸ್ಮಾಯಿಲ್ ಮುಂತಾದವರು ಉಪಸ್ಥಿತರಿದ್ದರು.
ಸಂತೋಷ್ ಲಾಡ್, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಮಯೂರ ಅವರು ಬೈಕ್‌ನಲ್ಲಿ ಕುಳಿತು ಜಿಟಿ ಜಿಟಿ ಮಳೆಯಲ್ಲೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಯುವಕರ ಮನ ಸೆಳೆದರು.