'ಪೇಜಾವರ ಶ್ರೀಗಳು ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು'
ಶ್ರೀಗಳ ಅಗಲಿಕೆಯಿಂದ ನಾನು ಬಹಳಷ್ಟು ನೋವು ಅನುಭವಿಸಿದ್ದೇನೆ: ಎಸ್.ಆರ್. ಪಾಟೀಳ| ಶ್ರೀಗಳೊಂದಿಗೆ ನನ್ನದು ನಿಕಟ ಸಂಪರ್ಕ ಇತ್ತು| ಶ್ರೀಗಳು ಮೇಲಿಂದ ಮೇಲೆ ಬಾಗಲಕೋಟೆಗೆ ಬಂದಾಗ ಅವರ ದರ್ಶನ ಆಶೀರ್ವಾದ ಪಡೆಯುತ್ತಿದ್ದೆ| ನಡೆದಾಡುವ ದೇವರು ಸಿದ್ದಲಿಂಗ ಸ್ವಾಮೀಜಿ ನಂತರ ಪೇಜಾವರ ಶ್ರೀ ಬಹಳಷ್ಟು ಹೆಸರು ಪಡೆದ ಯತಿಗಳಾಗಿದ್ದರು|
ಬಾಗಲಕೋಟೆ(ಡಿ.29): ಪೇಜಾವರ ಶ್ರೀಗಳ ನಿಧನ ಕೇವಲ ಕರ್ನಾಟಕ ಅಷ್ಟೇ ಅಲ್ಲ, ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿದೆ. ಶ್ರೇಷ್ಠ ಯತಿಗಳಾಗಿ ಸರ್ವ ಧರ್ಮ ಏಳ್ಗೆಗೆಗೆ ಸಮನ್ವಯ ಸಾಧಿಸಲು ಬದುಕಿನುದ್ದಕ್ಕೂ ಹೋರಾಟ ಮಾಡಿದ್ದರು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್.ಪಾಟೀಲ್ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಭಾನುವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಪೇಜಾವರ ಶ್ರೀಗಳು ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದರು. ಶ್ರೀಗಳ ಅಗಲಿಕೆಯಿಂದ ರಾಷ್ಟ್ರದ ಧಾರ್ಮಿಕ ಕ್ಷೇತ್ರಕ್ಕೆ ದೊಡ್ಡ ಆಘಾತವಾಗಿದೆ ಎಂದು ಹೇಳಿದ್ದಾರೆ.
ವಿಶ್ವಸಂತ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅಸ್ತಂಗತ
ಶ್ರೀಗಳ ದೈವಾದೀನರಾಗಿದ್ದರಿಂದ ನಾನು ಬಹಳಷ್ಟು ನೋವು ಅನುಭವಿಸಿದ್ದೇನೆ. ಶ್ರೀಗಳೊಂದಿಗೆ ನನ್ನದು ನಿಕಟ ಸಂಪರ್ಕ ಇತ್ತು. ಶ್ರೀಗಳು ಮೇಲಿಂದ ಮೇಲೆ ಬಾಗಲಕೋಟೆಗೆ ಬಂದಾಗ ಅವರ ದರ್ಶನ ಆಶೀರ್ವಾದ ಪಡೆಯುತ್ತಿದ್ದೆ, ನಡೆದಾಡುವ ದೇವರು ಸಿದ್ದಲಿಂಗ ಸ್ವಾಮೀಜಿ ನಂತರ ಪೇಜಾವರ ಶ್ರೀ ಬಹಳಷ್ಟು ಹೆಸರು ಪಡೆದ ಯತಿಗಳಾಗಿದ್ದರು ಎಂದು ತಿಳಿಸಿದ್ದಾರೆ.
ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತ್ಯಸಂಸ್ಕಾರ
ಆರಾಧ್ಯ ದೈವ ಶ್ರೀ ಕೃಷ್ಣ ಪೇಜಾವರ ಶ್ರೀಗಳ ಆತ್ಮಕ್ಕೆ ಶಾಂತಿ ಕರುಣಿಸಲಿ. ನಾಡಿನ, ರಾಷ್ಟ್ರದುದ್ದಕ್ಕೂ ಇರುವ ಅಸಂಖ್ಯಾತ ಭಕ್ತರಿಗೆ ಪೇಜಾವರ ಶ್ರೀ ಅಗಲಿಕೆಯ ನೋವು ಸಹಿಸುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಸ್. ಆರ್. ಪಾಟೀಲ್ ಕಂಬನಿ ಮಿಡಿದಿದ್ದಾರೆ.