‘ನನ್ನನ್ನು ಹುಲಿ ಅಂಥಾನೂ ಒಪ್ಪಿದ್ದಾರೆ, ಆನೆ ಅಂಥಾನೂ ಒಪ್ಪಿದ್ದಾರೆ’
ಚಕ್ರವರ್ತಿ ಸೂಲಿಬೆಲೆ ಪರವಾಗಿ ನಿಂತು ಸಾಕಾಗಿ ಹೋಗಿದೆ/ ಮಾಜಿ ಸಚಿವ ರಮಾನಾಥ ರೈ ಹೇಳಿಕೆ/ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೂ ಟಾಂಗ್ ನೀಡಿದ ರೈ/ ನಾನು ಆನೆಯೂ ಹೌದು..ಹುಲಿಯೂ ಹೌದು
ಮಂಗಳೂರು[ಅ. 02] ಸೂಲಿಬೆಲೆಗೆ ಅವರ ಪರವಾಗಿ ನಿಂತು ಸಾಕಾಗಿ ಹೋಗಿದೆ.ಅವರು ಹೇಳಿದ ಒಂದು ಮಾತು ಕೂಡ ಅನುಷ್ಠಾನ ಆಗಿಲ್ಲ. ಸೂಲಿಬೆಲೆ ಹೇಳಿದ್ದೆಲ್ಲವೂ ಸುಳ್ಳು ಎನ್ನುವುದು ಜನರ ಮನಸ್ಸಿಗೆ ಬಂದಿದೆ. ಅವರು ಹೇಳಿದ್ದು ಯಾವುದೂ ಕೈಗೂಡಲೇ ಇಲ್ಲ. ವಾಸ್ತವಿಕವಾಗಿ ಅವರ ಮಾತುಗಳು ಸುಳ್ಳು ಅನ್ನೋದು ಜನಜನಿತವಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ತನ್ನದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.
ಸೂಲಿಬೆಲೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದು ನನ್ನ ಮಾತು ಸುಳ್ಳಾಯ್ತು ಅನ್ನೋ ಕಾರಣಕ್ಕೆ. ಇದರಿಂದ ಅವರ ಆತ್ಮಸಾಕ್ಷಿಗೆ ನೋವಾಗಿ ಮನಸ್ಸಿಗೆ ಬಂದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಪಕ್ಷಾಂತರದಿಂದ ಸರ್ಕಾರ ಆಗಿದೆ. ಹೊಸ ಸರ್ಕಾರ ರಚನೆಯಾದ ಬಳಿಕ ನೆರೆ ಬಂದಿದೆ. ಆದ್ರೆ ಕೇಂದ್ರ ಸರ್ಕಾರ ಇದಕ್ಕೆ ಸ್ಪಂದಿಸ್ತಿಲ್ಲ, ಇದೊಂದು ನಿಷ್ಕ್ರಿಯ ಸರ್ಕಾರ ಎಂದು ವಾಗ್ದಾಳಿ ಮಾಡಿದರು.
ಯಡಿಯೂರಪ್ಪರನ್ನ ಹೊಗಳಿ, ಕಟೀಲ್‌ಗೆ ಬೈದ ಬಿಜೆಪಿ ನಾಯಕ ಪಕ್ಷದಿಂದ ಉಚ್ಛಾಟನೆ...
ರಮಾನಾಥ್ ರೈಗೆ ಆನೆ ಅಂತ ನಳೀನ್ ಕುಮಾರ್ ಟಾಂಗ್ ನೀಡಿದಕ್ಕೂ ರೈ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದರು. ನನ್ನನ್ನ ಈ ಹಿಂದೆ ಹುಲಿ ಅಂತಾನೂ ಒಪ್ಪಿದ್ದಾರೆ, ಆನೆ ಅಂತಾನೂ ಒಪ್ಪಿದ್ದಾರೆ. ಅದಕ್ಕಾಗಿ ಅವರು ಒಪ್ಪಿದ್ದಾರೆ ಅಂತಷ್ಟೇ ಹೇಳ್ತೇನೆ ಎಂದು ಹೇಳಿ ವಿಷಯಕ್ಕೆ ಅಂತ್ಯ ಹಾಡಿದರು.