40 ವರ್ಷ ಕಾಂಗ್ರೆಸ್‌ನಲ್ಲಿದ್ದ ಹಿರಿಯ ಮುಖಂಡ ಬಿಜೆಪಿಗೆ ಸೇರ್ಪಡೆ

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ನೇತೃತ್ವದಲ್ಲಿ ಬಿಜೆಪಿಗೆ ಸೇರಿದ ಕಾಂಗ್ರೆಸ್‌ ಕಾರ್ತಕರ್ತರು| ಸರಿಯಾಗಿ ನಡೆಸಿಕೊಳ್ಳದೇ ನನ್ನನ್ನು ನಿರ್ಲಕ್ಷ್ಯ ಮಾಡಿದ್ದು, ನನಗೂ ಹಾಗೂ ನಮ್ಮ ಗ್ರಾಮದ ನೂರಾರು ಅಭಿಮಾನಿಗಳಿಗೆ ತುಂಬಾ ನೋವುಂಟು ಮಾಡಿದೆ. ಅದಕ್ಕಾಗಿಯೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದೇನೆ:ಎಂ.ಎಸ್‌. ತಿಮ್ಮನಗೌಡ್ರ|       

Congress Leader MS Timmanaga Goudar Joined BJP in Naragund in Gadag

ನರಗುಂದ(ಮಾ.15): ತಾಲೂಕಿನ ಖಾನಾಪುರ ಗ್ರಾಮದ ಹಿರಿಯ ಮುಖಂಡ ಎಂ.ಎಸ್‌. ತಿಮ್ಮನಗೌಡ್ರ, ಗ್ರಾಪಂ ಅಧ್ಯಕ್ಷ ವೆಂಕನಗೌಡ ಮಲ್ಲನಗೌಡ್ರ, ಸದಸ್ಯ ಮೈಲಾರಪ್ಪ ಮುದ್ಗಣಕಿ, ಶಾಂತವ್ವ ಮಾದರ, ಸೇರಿದಂತೆ ನೂರಾರು ಕಾಂಗ್ರೆಸ್‌ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ನೇತೃತ್ವದಲ್ಲಿ ಬಿಜೆಪಿಗೆ ಇತ್ತೀಚೆಗೆ ಸೇರ್ಪಡೆಗೊಂಡರು.

ಪಕ್ಷದ ಧ್ವಜ ನೀಡಿ ಸ್ವಾಗತಿಸಿದ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಹಿರಿಯ ಕಾಂಗ್ರೆಸ್‌ ಹಿರಿಯ ಮುಖಂಡ ಎಂ.ಎಸ್‌. ತಿಮ್ಮನಗೌಡ್ರ ಮತ್ತು ಅವರ ಅಭಿಮಾನ ಬಳಗದವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಸಂತೋಷ ತಂದಿದೆ ಎಂದರು.

ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರ್ಪಡೆಗೊಂಡ ಹಿರಿಯ ರಾಜಕಾರಣಿ ಎಂ.ಎಸ್‌. ತಿಮ್ಮನಗೌಡ್ರ ಮಾತನಾಡಿ, 40 ವರ್ಷದಿಂದ ನಾನು ಮಾಜಿ ಸಚಿವ ಬಿ.ಆರ್‌. ಯಾವಗಲ್ಲ ಅವರ ಹಿಂದೆ ಇದ್ದು ಕೆಲಸ ಮಾಡಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ನಮ್ಮನ್ನು ಪಕ್ಷದಲ್ಲಿ ನಿರ್ಲಕ್ಷ್ಯ ಮಾಡಿದ್ದರಿಂದ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ತೀರ್ಮಾನ ಮಾಡಿದ್ದೆ. ಆದರೆ ನಮ್ಮ ಬೆಂಬಲಿಗರ ಕೋರಿಕೆಯಂತೆ ಬಿಜೆಪಿ ಸೇರ್ಪಡೆಯ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದರು.

ಬಜೆಟ್‌ ಸಮರ್ಥಿಸಿಕೊಳ್ಳಲು ಬಂದು, ಅಸಹಾಯಕತೆ ವ್ಯಕ್ತಪಡಿಸಿದ ಬಿಜೆಪಿ

ಗ್ರಾಪಂ ಅಧ್ಯಕ್ಷ ವೆಂಕನಗೌಡ ಮಲ್ಲನಗೌಡ್ರ, ಗ್ರಾಪಂ ಮಾಜಿ ಅಧ್ಯಕ್ಷ ಪ್ರೇಮಾ ತಿಮ್ಮನಗೌಡ್ರ, ಗುರಪ್ಪ ಆದಪ್ಪನವರ, ಎಂ.ಎಸ್‌. ಪಾಟೀಲ, ಮಲ್ಲಪ್ಪ ಮೇಟಿ, ಪಿ.ಎಲ್‌. ತಿರಕನಗೌಡ್ರ, ಬಿ.ಬಿ. ಐನಾಪುರ, ಬಸನಗೌಡ ಪಾಟೀಲ, ಬಾಬು ಹಿರೇಹೊಳಿ, ಉಮೇಶಗೌಡ ಪಾಟೀಲ, ಎಸ್‌.ಬಿ. ಕರಿಗೌಡರ, ನಿಂಗಣ್ಣ ಗಾಡಿ, ಮಂಜು ಮೆಣಸಗಿ, ಅನಿಲ ಧರಿಯಣ್ಣವರ ಉಪಸ್ಥಿತರಿದ್ದರು.

40 ವರ್ಷಗಳ ಸುದೀರ್ಘವಾಗಿ ಒಂದೇ ಪಕ್ಷದಲ್ಲಿ, ಬಿ.ಆರ್‌. ಯಾವಗಲ್ಲ ಅನುಯಾಯಿಯಾಗಿ ನಾನು ಸಾಕಷ್ಟು ಶ್ರಮಿಸಿದ್ದೇನೆ, ಪಕ್ಷಕ್ಕಾಗಿ ದುಡಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ನನಗೆ ಪಕ್ಷದಲ್ಲಿ ಯಾವುದೇ ರೀತಿಯ ಸ್ಥಾನಮಾನ, ಗೌರವ ಕೊಡದೇ, ಸರಿಯಾಗಿ ನಡೆಸಿಕೊಳ್ಳದೇ ನನ್ನನ್ನು ನಿರ್ಲಕ್ಷ್ಯ ಮಾಡಿದ್ದು, ನನಗೂ ಹಾಗೂ ನಮ್ಮ ಗ್ರಾಮದ ನೂರಾರು ಅಭಿಮಾನಿಗಳಿಗೆ ತುಂಬಾ ನೋವುಂಟು ಮಾಡಿದೆ. ಅದಕ್ಕಾಗಿಯೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದೇನೆ ಎಂದು ಹಿರಿಯ ಮುಖಂಡ ಎಂ.ಎಸ್‌. ತಿಮ್ಮನಗೌಡ್ರ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios