Asianet Suvarna News Asianet Suvarna News

Tumakur : ಕಾಂಗ್ರೆಸ್‌ ಮುಖಂಡ ಜೆಡಿಎಸ್‌ಗೆ ಸೇರ್ಪಡೆ

ತಾಲೂಕಿನಲ್ಲಿ ಹತ್ತಾರು ಸಾಮಾಜಿಕ ಸೇವೆ ಮಾಡುತ್ತಾ ತಾಲೂಕಿನ ಜನರಿಗೆ ಚಿರಪರಿಚಿತರಾಗಿರುವ ಹಾಲಿ ಕಾಂಗ್ರೆಸ್‌ ಮುಖಂಡ ಹಾಗೂ ಸಮಾಜ ಸೇವಕ ಕೆ.ಟಿ. ಶಾಂತಕುಮಾರ್‌ ಸೇರಿದಂತೆ ಅವರ ಅಭಿಮಾನಿಗಳು ಸದ್ಯದಲ್ಲಿಯೇ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆಂದು ಜೆಡಿಎಸ್‌ ತಾಲೂಕು ಕಾರ್ಯಾಧ್ಯಕ್ಷ ಎಂ.ಎಸ್‌. ಶಿವಸ್ವಾಮಿ ತಿಳಿಸಿದರು.

Congress leader joins JDS snr
Author
First Published Jan 8, 2023, 6:33 AM IST

 ತಿಪಟೂರು :  ತಾಲೂಕಿನಲ್ಲಿ ಹತ್ತಾರು ಸಾಮಾಜಿಕ ಸೇವೆ ಮಾಡುತ್ತಾ ತಾಲೂಕಿನ ಜನರಿಗೆ ಚಿರಪರಿಚಿತರಾಗಿರುವ ಹಾಲಿ ಕಾಂಗ್ರೆಸ್‌ ಮುಖಂಡ ಹಾಗೂ ಸಮಾಜ ಸೇವಕ ಕೆ.ಟಿ. ಶಾಂತಕುಮಾರ್‌ ಸೇರಿದಂತೆ ಅವರ ಅಭಿಮಾನಿಗಳು ಸದ್ಯದಲ್ಲಿಯೇ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆಂದು ಜೆಡಿಎಸ್‌ ತಾಲೂಕು ಕಾರ್ಯಾಧ್ಯಕ್ಷ ಎಂ.ಎಸ್‌. ಶಿವಸ್ವಾಮಿ ತಿಳಿಸಿದರು.

ನಗರದ ಕೌಸ್ತುಭ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಪಕ್ಷದಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ಪಂಚರತ್ನ ರಥಯಾತ್ರೆಯು ತಿಪಟೂರು ತಾಲೂಕಿಗೂ ಆಗಮಿಸಲಿದ್ದು ಅಂದು ಕಾಂಗ್ರೆಸ್‌ ಮುಖಂಡ ಕೆ.ಟಿ ಶಾಂತಕುಮಾರ್‌ ಮತ್ತಿತರರು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಅವರನ್ನು ಅದ್ದೂರಿಯಿಂದ ಸ್ವಾಗತಿಸಲು ನಮ್ಮ ಪಕ್ಷದ ಕಾರ್ಯಕರ್ತರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದರು..

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಪಕ್ಷದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಜಗದೀಶ್‌ ಮಲ್ಲೇನಹಳ್ಳಿ, ತಾ. ಉಪಾಧ್ಯಕ್ಷ ಹಾಲ್ಕುರಿಕೆ ಉಮಾಮಹೇಶ್‌, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಯೋಗಾನಂದ್‌, ಯುವ ಜನತಾ ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ಸ್ವಾಮಿ, ನೊಣವಿನಕೆರೆ ಹೋಬಳಿ ಘಟಕದ ಅಧ್ಯಕ್ಷ ತಿಮ್ಮೇಗೌಡ ಮಾದಿಹಳ್ಳಿ, ಗ್ರಾ.ಪಂ ಸದಸ್ಯ ಬೆಸಗಿ ನಟರಾಜು ಮತ್ತಿತರರಿದ್ದರು.

ಸಿದ್ದು ಆಪ್ತನ ಮನೆಗೆ ಗಣಿದಣಿ

ಕೊಪ್ಪಳ  : ಮಾಜಿ ಸಿಎಂ ಸಿದ್ದರಾಮಯ್ಯನ ಆಪ್ತ ತಾಲೂಕಿನ ವನಬಳ್ಳಾರಿಯ ಕುರುಬ ಸಮಾಜದ ಮುಖಂಡ ಹನುಮಂತ ಅರಸನಕೇರಿ ಅವರ ನಿವಾಸಕ್ಕೆ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ ಅವರು ಮಂಗಳವಾರ ಸಂಜೆ ದಿಢೀರ್‌ ಭೇಟಿ ನೀಡುವ ಮೂಲಕ ರಾಜಕೀಯ ಸಂಚಲನ ಮೂಡಿಸಿದರು.

ಗಂಗಾವತಿ(Gangavati)ಗೆ ತೆರಳುವ ಮಾರ್ಗ ಮಧ್ಯೆ ಹನುಮಂತ ಅರಸನಕೇರಿ ಅವರ ನಿವಾಸಕ್ಕೆ ಭೇಟಿ ನೀಡಿದ ಜನಾರ್ದನ ರೆಡ್ಡಿ(janardanareddy) ಅವರನ್ನು ಕಂಬಳಿ ಹೊದಿಸಿ, ಕನಕದಾಸರ ಮೂರ್ತಿ ನೀಡಿ ಸನ್ಮಾನಿಸಲಾಯಿತು. ಬಳಿಕ ಜನಾರ್ದನರೆಡ್ಡಿ ಮಾತನಾಡಿ, ನೀವು(ಹನುಮಂತ ಅರಸನಕೇರಿ ಅವರಿಗೆ) ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನಿಸಿದರು. ಬರದೆ ಇದ್ದರೂ ಪರವಾಗಿಲ್ಲ, ನಿಮ್ಮ ಮನೆಯಲ್ಲಿ ಒಂದು ಮತವನ್ನಾದರೂ ನಮ್ಮ ಪಕ್ಷಕ್ಕೆ ನೀಡಿ ಎನ್ನುವ ಮೂಲಕ ಬಹಿರಂಗ ಆಹ್ವಾನ ನೀಡಿದರು.

Ballari: ಜನಾರ್ಧನ ರೆಡ್ಡಿಯ ಕೆಆರ್‌ಪಿಪಿ ಪಕ್ಷದ ಬಾವುಟ ಲೋಕಾರ್ಪಣೆ: ಪ್ರಚಾರ ಕಾರ್ಯ ಆರಂಭಿಸಿದ ಲಕ್ಷ್ಮೀ ಅರುಣಾ

ಇತ್ತೀಚೆಗೆ ಹನುಮಂತ ಅರಸನಕೇರಿ ಅವರ ಅಣ್ಣನ ಮಕ್ಕಳ ಮದುವೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಆಗ ಸಿದ್ದರಾಮಯ್ಯ ಅವರು ಜಿಲ್ಲೆಯ ಐದು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದು ಕಾಂಗ್ರೆಸ್‌ ನಾಯಕರಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಹನುಮಂತ ಅರಸನಕೇರಿ ಅವರ ನಿವಾಸಕ್ಕೆ ಜನಾರ್ದನ ರೆಡ್ಡಿ ಅವರು ಸಹ ಭೇಟಿ ನೀಡಿ ಸಂಚಲನ ಮೂಡಿಸಿದ್ದಾರೆ.

ಜನಾರ್ದನ ರೆಡ್ಡಿಗೆ ಬೆಂಬಲ: ಬಿಜೆಪಿಯಲ್ಲಿ ಮುಂದುವರೆದ ರಾಜೀನಾಮೆ ಪರ್ವ..!

ಹನುಮಂತ ಅರಸನಕೇರಿ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹರಿಬಿಟ್ಟು, ನಾನು ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳುವುದಿಲ್ಲ, ರಾಜಕೀಯದಿಂದ ಅಂತರ ಕಾಯ್ದುಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದರು. ಇದೀಗ ರೆಡ್ಡಿ ಅವರ ಭೇಟಿಯಿಂದ ರಾಜಕೀಯ ವಲಯದಲ್ಲಿ ನಾನಾ ಚರ್ಚೆಗೆ ಇಂಬು ನೀಡಿದೆ. ಜನಾರ್ದನ ರೆಡ್ಡಿ ಅವರು ಹನುಮಂತ ಅರಸನಕೇರಿ ಅವರನ್ನು ಪಕ್ಷಕ್ಕೆ ಸೆಳೆಯಲು ಯತ್ನಿಸುವುದಕ್ಕಾಗಿಯೇ ಅವರ ಮನೆಗೆ ಭೇಟಿ ನೀಡಿದ್ದಾರೆ ಎಂದೇ ಹೇಳಲಾಗುತ್ತಿದೆ.

Follow Us:
Download App:
  • android
  • ios