'ಕತ್ತಿ ಹೇಳಿಕೆ ರಾಜಕಾರಣಿಗಳು ತಲೆ ತಗ್ಗಿಸುವಂಥದ್ದು'

ಬಡ ಜನರಿಗೆ 5 ಕೆಜಿ ಅಕ್ಕಿ ನೀಡಲು ಆಗದಿದ್ರೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಕೊಡಲಿ| ಕೇವಲ ಮೂರು ಕೆಜಿ ಸರ್ಕಾರಕ್ಕೆ ಬಾರಿ ಹೊರೆಯಾಗುತ್ತದೆಯೇ? ಕೂಡಲೇ ಮುಖ್ಯಮಂತ್ರಿ ನೀತಿಯನ್ನು ಬದಲಾಯಿಸಬೇಕು|  ಇಲ್ಲವಾದರೆ ಇದಕ್ಕೆ ತಕ್ಕ ದಂಡ ಕಟ್ಟಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಎಚ್‌.ಕೆ. ಪಾಟೀಲ| 

Congress Leader HK Patil React on Minister Umesh Katti Statement grg

ಗದಗ(ಏ.29): ಸಚಿವ ಉಮೇಶ್‌ ಕತ್ತಿ ಹೇಳಿಕೆ ಅತ್ಯಂತ ದುರ್ದೈವಕರ, ನಾವು ರಾಜಕಾರಣಿಗಳು, ಅಧಿಕಾರದಲ್ಲಿರುವವರು ತಲೆ ತಗ್ಗಿಸುವಂತಹ ಹೇಳಿಕೆಯಾಗಿದೆ ಎಂದು ಕಾಂಗ್ರೆಸ್‌ ಹಿರಿಯ ಶಾಸಕ ಎಚ್‌.ಕೆ. ಪಾಟೀಲ ಹೇಳಿದ್ದಾರೆ.

ರೈತನ ಜತೆ ಸಚಿವ ಉಮೇಶ ಕತ್ತಿ ಮಾತನಾಡಿದ ಆಡಿಯೋ ವೈರಲ್‌ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರದ ನೀತಿಗಳೇ ಹಾಗಿವೆ. ಇಷ್ಟು ಕಠಿಣ ಪ್ರಸಂಗದಲ್ಲಿ ಜನ ಸಾಗುತ್ತಿದ್ದಾರೆ. ಬಡ ಜನರು ತತ್ತರಿಸಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಉಚಿತವಾಗಿ ಸಿಗುವ ಅಕ್ಕಿಯನ್ನು 7ರಿಂದ 5 ಕೆಜಿ ತಂದಿದ್ದಾರೆ. ಮತ್ತೆ ಈಗ 2 ಕೆಜಿ ಮಾಡಲು ಹೊರಟಿದ್ದಾರೆ. ಅದರ ಬಗ್ಗೆ ಯಾರಾದರೂ ಕೇಳಿದರೆ ಸತ್ತು ಹೋಗಿ ಎನ್ನುತ್ತಾರೆ. ಇದು ಸರ್ಕಾರ ತನ್ನ ನೈಜ ಬಣ್ಣವನ್ನು ತೋರಿಸುತ್ತಿದೆ ಎಂದು ಸರ್ಕಾರದ ನೀತಿಯನ್ನು ಖಂಡಿಸಿದ್ದಾರೆ.

ಪಡಿತರ ಅಕ್ಕಿ ಕೇಳಿದ ವ್ಯಕ್ತಿಗೆ ಸತ್ತು ಹೋಗಿ ಎಂದ ಆಹಾರ ಸಚಿವ ಉಮೇಶ್ ಕತ್ತಿ!

ಬಡ ಜನರಿಗೆ 5 ಕೆಜಿ ಅಕ್ಕಿ ನೀಡಲು ಆಗದಿದ್ರೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಕೊಡಲಿ. ಕೇವಲ ಮೂರು ಕೆಜಿ ಸರ್ಕಾರಕ್ಕೆ ಬಾರಿ ಹೊರೆಯಾಗುತ್ತದೆಯೇ? ಕೂಡಲೇ ಮುಖ್ಯಮಂತ್ರಿ ನೀತಿಯನ್ನು ಬದಲಾಯಿಸಬೇಕು. ಇಲ್ಲವಾದರೆ ಇದಕ್ಕೆ ತಕ್ಕ ದಂಡ ಕಟ್ಟಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

Latest Videos
Follow Us:
Download App:
  • android
  • ios