ಬೆಂಗಳೂರು (ಸೆ.01): ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಜನವರಿಯಿಂದ ಜುಲೈವರೆಗಿನ ಸಾವು ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದ್ದು, ವಿಶೇಷವಾಗಿ ಕೊರೋನಾ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸಲಾಗುತ್ತಿದೆ ಎಂಬ ಸಂಶಯವನ್ನು ಹಿರಿಯ ಕಾಂಗ್ರೆಸ್‌ ಮುಖಂಡ ಎಚ್‌.ಕೆ. ಪಾಟೀಲ್‌ ವ್ಯಕ್ತಪಡಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಜನವರಿಯಿಂದ ಜುಲೈವರೆಗೆ ನಗರದಲ್ಲಿ 49,135 ಸಾವಿನ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಗೆ 37,001 ಜನರು ಮೃತಪಟ್ಟಿದ್ದರು. ನಗರದಲ್ಲಿ ಮಾರ್ಚಿಂದ ಆಗಸ್ಟ್‌ವರೆಗೆ ಕೋವಿಡ್‌ನಿಂದ 1886 ಜನರು ಸಾವಿಗೀಡಾಗಿದ್ದಾರೆ ಎಂದು ಸರ್ಕಾರ ಹೇಳಿದೆ.

ಕೋವಿಡ್ ಸೋಂಕಿತರ ಸೇವೆಗೆ ನಾವ್ ರೆಡಿ, ಅವಕಾಶ ಕೊಡಿ'..!..

ಈ ಅಂಕಿ-ಅಂಶಗಳೇ ಅಂತಿಮವಾಗಿದ್ದರೆ ಕೊರೋನೇತರ ಸಾವುಗಳ ಸಂಖ್ಯೆ 10,250 ಹೆಚ್ಚುವರಿ ಆದಂತಾಗಿದೆ. 49 ಸಾವಿರ ಸಾವುಗಳ ಪೈಕಿ 1886 ಕೊರೋನಾ ಸಾವಾಗಿದ್ದರೆ, 47,114 ಕೊರೋನೇತರ ಕಾರಣಗಳಿಂದ ಮೃತ ಪಟ್ಟಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಾವು ಹೆಚ್ಚಾಗಲು ಹಾಗೂ ಸಾವಿನ ಸಂಖ್ಯೆ ಮುಚ್ಚಿಡಲು ಕಾರಣವೇನು, ಕೊರೋನಾ ಸಾವಿನ ಸಂಖ್ಯೆ ಕಡಿಮೆ ಪ್ರಮಾಣ ತೋರಿಸಲು ದುರುದ್ದೇಶದ ಪ್ರಯತ್ನ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದರು.

40 ಸಿಬ್ಬಂದಿಗೆ ವೈರಸ್‌: ನೋಟು ಪ್ರಿಂಟ್‌ ಸ್ಥಗಿತ!...

ರಾಜ್ಯ ಸರ್ಕಾರ ಜನೆವರಿಯಿಂದ ಈವರೆಗೆ ಸಾವಿನ ಸಂಖ್ಯೆಗಳ ಲೆಕ್ಕಪರಿಶೋಧನೆ ಮತ್ತು ಸಾವಿನ ಕಾರಣಗಳ ವೈದ್ಯಕೀಯ ಪರಿಶೋಧನೆ ಮಾಡಿಯೇ ಇಲ್ಲ. ಇದರಿಂದಾಗಿ ವಾಸ್ತವಿಕವಾಗಿ ಸಾವು ಯಾವ ಕಾರಣದಿಂದ ಸಂಭವಿಸಿದೆ ಎಂಬುದನ್ನು ವೈಜ್ಞಾನಿಕವಾಗಿ ಪರಿಗಣಿಸಲು ಆಗಿಲ್ಲ. ಇದರ ಜೊತೆಗೆ ಸಾವಿನ ಕಾರಣಗಳ ವೈದ್ಯಕೀಯ ಪ್ರಮಾಣಿಕರಣ ಮಾಡಬೇಕಿತ್ತು.ಒಂದು ವೇಳೆ ಕೊರೋನಾ ಸಾವಿನ ಸಂಖ್ಯೆ ಕೇವಲ 1886 ಮಾತ್ರವಾಗಿದ್ದರೆ, 10,250 ಸಾಮಾನ್ಯ ಸಾವಿನ ಸಂಖ್ಯೆ ಹೆಚ್ಚಳ ಅತ್ಯಂತ ಗಂಭೀರವಾದದ್ದೇ ಎಂಬ ಬಗ್ಗೆ ಸರ್ಕಾರ ವಿವರಣೆ ನೀಡಬೇಕು ಎಂದು ಒತ್ತಾಯಿಸಿದರು.