'ಕಾಂಗ್ರೆಸ್‌ ಪರಿ​ಕ​ಲ್ಪ​ನೆ ಈಗ ಬಿಜೆಪಿಗೆ ಹೋಗಿದೆ'

ಕಾಂಗ್ರೆಸ್ ಪರಿಕಲ್ಪನೆ ಈಗ ಬಿಜೆಪಿಯಲ್ಲಿ . ಇದೇನಿದು ರಾಜಕೀಯ... ಕೈ ಪಕ್ಷದ ಪರಿಕಲ್ಪನೆಯಲ್ಲಿ ಮುಂದುವರಿಯಲು ಸಜ್ಜಾಗಿದೆ ಕಮಲ ಪಾಳಯ?

Congress Leader DK Suresh Slams BJP Leaders  snr

ರಾಮ​ನ​ಗರ (ಡಿ.05):  ಮಹಾತ್ಮ ಗಾಂಧೀಜಿ ಗ್ರಾಮ ಸ್ವರಾಜ್ಯವೇ ಬೇರೆ, ಸಾವರ್ಕರ್‌ ಗ್ರಾಮ ಸ್ವರಾಜ್ಯವೇ ಬೇರೆ ಎಂದು ಸಂಸದ ಡಿ.ಕೆ.ಸುರೇಶ್‌ ಅವರು ಬಿಜೆಪಿಯವರ ಗ್ರಾಮ ಸ್ವರಾಜ್ಯ ಸಮಾವೇಶದ ವಿರುದ್ಧ ಲೇವಡಿ ಮಾಡಿದರು.

ತಾಲೂಕಿನ ವಡ್ಡರದೊಡ್ಡಿ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಗ್ರಾಪಂ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೂಟಗಲ್ ಹೋಬಳಿ ಕಾಂಗ್ರೆಸ್‌ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ಗಾಂಧೀಜಿ ಪರಿ​ಕ​ಲ್ಪ​ನೆಯ ಗ್ರಾಮ ಸ್ವರಾಜ್ಯ ಅನು​ಷ್ಠಾ​ನಕ್ಕೆ ಪ್ರಯ​ತ್ನಿ​ಸು​ತ್ತಿದೆ. ಆದರೆ, ಬಿಜೆ​ಪಿ​ ಸರ್ಕಾರ ಸಾರ್ವ​ಕರ್‌ ಪರಿ​ಕ​ಲ್ಪ​ನೆಯ ಗ್ರಾಮ ಸ್ವರಾಜ್ಯವನ್ನು ಕಾರ್ಯ​ರೂ​ಪಕ್ಕೆ ತರಲು ಹೊರ​ಟಿದೆ ಎಂದು ಟೀಕಿ​ಸಿ​ದ​ರು.

ನಾಯಕತ್ವದ ಮೇಲೆ ಅಸಮಾಧಾನ: ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಮುಖಂಡರು .

ಪ್ರತಿ ಗ್ರಾಪಂಗೆ ವಾರ್ಷಿಕ ಒಂದೂವರೆ ಕೋಟಿ ನೀಡುವುದಾಗಿ ಉಪ ಮುಖ್ಯಮಂತ್ರಿಗಳು ಇತ್ತೀಚಿಗೆ ಹೇಳಿಕೊಂಡಿದ್ದಾರೆ. ಆದರೆ, ಕೆಲವು ಗ್ರಾಪಂಗಳು ಈಗಾಗಲೇ ಎರಡು ಕೋಟಿಗೂ ಹೆಚ್ಚು ಅನುದಾನ ತಂದು ಕೆಲಸ ಮಾಡಿವೆ. ಇದರ ಅರಿವೇ ಇಲ್ಲದ ಡಿಸಿಎಂ ಪ್ರಚಾರಕ್ಕಾಗಿ ಬಾಯಿ ಉಪಚಾರದ ಮಾತುಗಳನ್ನು ಆಡುತ್ತಿದ್ದಾರೆ. ಇವರಿಗೆ ನಾಚಿಕೆ ಹಾಗೂ ಯೋಗ್ಯತೆ ಎರಡೂ ಇಲ್ಲ ಎಂದರು.

ಎಷ್ಟುವಿಶೇಷ ಅನುದಾನ ನೀಡಿದ್ದೀರಿ?:

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿ​ಕಾ​ರ​ದ​ಲ್ಲಿದೆ. ಕೇಂದ್ರ ಸರ್ಕಾರ ಆರೂ​ವರೆ ವರ್ಷ​ಗಳ ಅಡ​ಳಿ​ತ​ದಲ್ಲಿ ಪಂಚಾ​ಯತ್‌ ರಾಜ್‌ ವ್ಯವ​ಸ್ಥೆ​ಯ​ನ್ನು ಬಲಿ​ಷ್ಠ​ಗೊ​ಳಿ​ಸಲು ಯಾವ ಕಾರ್ಯ​ಕ್ರಮ ನೀಡಿ​ದ್ದೀರಿ. ಆರ್ಥಿಕ ಶಕ್ತಿ ತುಂಬಲು ಎಷ್ಟುವಿಶೇಷ ಅನು​ದಾನ ನೀಡಿ​ದ್ದೀರಿ ಎಂದು ಪ್ರಶ್ನಿ​ಸಿ​ದರು.

ಹಳ್ಳಿ​ಗ​ಳಲ್ಲಿ ಕೋಟ್ಯಂತರ ಮಂದಿಗೆ ಉದ್ಯೋಗ ಸೃಷ್ಟಿಸುತ್ತಿರುವ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಇದೇ ಬಿಜೆಪಿಯವರು ಟೀಕಿಸಿದ್ದರು. ಇದೀಗ ಅದನ್ನು ಅಪ್ಪಿಕೊಂಡು, ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ, ಅದು ತಮ್ಮದೇ ಯೋಜನೆ ಎಂಬಂತೆ ಬಿಂಬಿಸಲು ಹೊರಟಿರುವ ಅವರಿಗೆ ನಾಚಿಕೆಯಾಗಬೇಕು ಎಂದು ಸುರೇಶ್‌ ಛೇಡಿಸಿದರು.

ಕಾಂಗ್ರೆಸ್‌ ಎಂದು ಭೂಮಿ ಕಿತ್ತುಕೊಂಡಿಲ್ಲ:

ಕಾಂಗ್ರೆಸ್‌ ಯಾವಾಗಲೂ ಭೂಮಿ ಕೊಡುವ ಕೆಲಸ ಮಾಡಿದೆಯೇ ಹೊರತು, ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ ಎಂದು ಎನ್‌ಡಿಎ ಸರ್ಕಾರದ ಭೂ ಕಾಯ್ದೆ ತಿದ್ದುಪಡಿ ಹಾಗೂ ಇನ್ನಿತರೆ ಕಾಯ್ದೆಗಳನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.

ಜೆಡಿಎಸ್‌ನಲ್ಲಿ ಒಬ್ಬನೇ ಒಬ್ಬ ಕಾರ‍್ಯಕರ್ತನಿಗೆ ಅಧಿಕಾರ ಕೊಡಿಸಲಿಲ್ಲ:

ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ ಮಾತ​ನಾಡಿ, ಜೆಡಿ​ಎಸ್‌ನಲ್ಲಿ 20 ವರ್ಷ ಶಾಸ​ಕ​ನಾ​ಗಿದ್ದೆ. ಒಬ್ಬನೇ ಒಬ್ಬ ಕಾರ್ಯ​ಕ​ರ್ತ​ನಿಗೆ ಅಧಿ​ಕಾರ ಕೊಡಿ​ಸಲು ಸಾಧ್ಯ​ವಾ​ಗ​ಲಿಲ್ಲ. ನಾನೇನು ಹಣ ಅಥವಾ ಅಧಿ​ಕಾ​ರದ ಆಸೆ​ಯಿಂದ ಕಾಂಗ್ರೆಸ್‌ ಸೇರ​ಲಿಲ್ಲ. ಈ ಪಕ್ಷಕ್ಕೆ ಸೇರಿದ ನಂತರ ನಂಬಿದ ಕಾರ್ಯ​ಕ​ರ್ತ​ರಿಗೆ ಅಧಿ​ಕಾರ ಕೊಡಿ​ಸಿದ ತೃಪ್ತಿ​ಯಿದೆ ಎಂದರು.

ಜೆಡಿ​ಎಸ್‌ ಸ್ವತಂತ್ರ​ವಾಗಿ ಎಂದೂ ಅಧಿ​ಕಾ​ರಕ್ಕೆ ಬರು​ವು​ದಿಲ್ಲ. ಆ ಪಕ್ಷಕ್ಕೆ ಶಕ್ತಿ ತುಂಬಲು ನೀಡುವ ಪ್ರತಿ​ಯೊಂದು ಮತವೂ ವ್ಯರ್ಥ. ನೀವು ಮಾಜಿ ಸಿಎಂ ಕುಮಾ​ರ​ಸ್ವಾಮಿ ಮನೆ ಬಾಗಿ​ಲಿಗೆ ಹೋಗು​ತ್ತೀರಿ, ಕುಮಾ​ರ​ಸ್ವಾ​ಮಿ​ರ​ವರು ಸಿಎಂ ಯಡಿ​ಯೂ​ರ​ಪ್ಪ​ನ​ವರ ಮನೆ ಬಾಗಿ​ಲಿಗೆ ಹೋಗು​ತ್ತಾರೆ. ಜೆಡಿ​ಎಸ್‌ ಕಾರ್ಯ​ಕ​ರ್ತರು ಇನ್ನೆಷ್ಟುದಿನ​ಗಳ ಕಾಲ ಅವರ ಮನೆಯ ಚಾಕರಿ ಮಾಡು​ತ್ತೀರಿ ಎಂದು ಪ್ರಶ್ನಿ​ಸಿ​ದರು.

ಕೊರೋ​ನಾ​ದಂತಹ ಸಂಕ​ಷ್ಟದ ಕಾಲ​ದ​ಲ್ಲಿಯೂ ಜನರ ಕಷ್ಟಸುಖಕ್ಕೆ ಸ್ಪಂದಿ​ಸ​ಲಿಲ್ಲ. ಜನ​ಪ್ರ​ತಿ​ನಿ​ಧಿ ಎನಿ​ಸಿ​ಕೊಂಡ​ವರ ಕರ್ತ​ವ್ಯ ಮತ್ತೇನು. ಸಂಸದ ಡಿ.ಕೆ.​ಸು​ರೇಶ್‌ ಅವ​ರಂತೆ ಜನ​ರಿಗೆ ಸ್ಪಂದಿ​ಸಲು ​ಜೆ​ಡಿ​ಎಸ್‌ ನಾಯ​ಕ​ರಿಗೆ ಏಕೆ ಸಾಧ್ಯ​ವಾ​ಗ​ಲಿ​ಲ್ಲ ಎಂದು ಬಾಲ​ಕೃಷ್ಣ ಪ್ರಶ್ನೆ ಮಾಡಿ​ದರು.

ಜಿಪಂ ಅಧ್ಯಕ್ಷ ಎಚ್‌.ಎನ್‌.ಅಶೋಕ್‌, ಮಾಜಿ ಅಧ್ಯಕ್ಷ ಕೆ.ರಮೇಶ್‌, ತಾಪಂ ಮಾಜಿ ಅಧ್ಯಕ್ಷರಾದ ಕಾಂತರಾಜ್‌ ಪಟೇಲ…, ಗಾಣಕಲ… ನಟರಾಜ್‌, ಡಿ.ಎಂ.ಮಹದೇವಯ್ಯ, ಕೂಟಗಲ… ತಾಪಂ ಸದಸ್ಯ ಎಸ್‌.ಪಿ.ಜಗದೀಶ್‌, ಮಹಿಳಾ ಮುಖಂಡರಾದ ಜಯಮ್ಮ, ಮಂಜುಳಾ ಮರಿದೇವರು, ಅಂಬುಜಾ ಮತ್ತಿತರರು ಉಪಸ್ಥಿತರಿದ್ದರು.

ನರೇಗಾದಿಂದಾಗಿ ಗ್ರಾಪಂ ಗಳಿಗೆ ಹೆಚ್ಚಿನ ಮಹತ್ವ ಬಂದಿದ್ದು, ಗ್ರಾಮ ವಿಕೇಂದ್ರೀಕರಣ ಹಾಗೂ ಗ್ರಾಮ ಸ್ವರಾಜ್ಯ ಕಾಂಗ್ರೆಸ್‌ ನ ಕೂಸಾಗಿದೆ. ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಇದನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ ಪ್ರಮುಖರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿದು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಗ್ರಾಪಂಗಳಲ್ಲಿಯೂ ಚುಕ್ಕಾಣಿ ಹಿಡಿಯುವಂತಾಗಬೇಕು.

- ಡಿ.ಕೆ.​ಸು​ರೇಶ್‌ ,ಸಂಸ​ದರು.

ಜೆಡಿ​ಎಸ್‌ ನಲ್ಲಿ ಕಾರ್ಯ​ಕ​ರ್ತ​ರಿಗೆ ಎಂದಿಗೂ ಅಧಿ​ಕಾರ ಸಿಗು​ವು​ದಿಲ್ಲ. ಹೊಸ ಹೊಸ ಕಾರು​ಗ​ಳನ್ನು ಗಿಫ್ಟ್‌ ​ಮಾ​ಡು​ತ್ತಿ​ರುವ ಅದ್ಯಾರೊ ಗುತ್ತಿ​ಗೆ​ದಾ​ರ​ನಿಗೆ ವಿಧಾನ ಪರಿ​ಷತ್‌ ಸದ​ಸ್ಯ​ರ​ನ್ನಾಗಿ ಮಾಡು​ತ್ತೇನೆಂದು ಭರ​ವಸೆ ನೀಡಿದ್ದಾರಂತೆ. ಕ್ಷೇತ್ರ​ದಲ್ಲಿ ಅಭಿ​ವೃದ್ಧಿ ಕಾರ್ಯ​ಗ​ಳಿಗೆ ಚಾಲನೆ ನೀಡ​ಬೇ​ಕಾ​ದರೆ ಅಧಿ​ಕಾ​ರಿ​ಗಳು ಹಾಗೂ ಗುತ್ತಿ​ಗೆ​ದಾ​ರರು ಮೊದಲು ಅಕ್ಕ​ನನ್ನು ಭೇಟಿ ಮಾಡಿ ಅನು​ಮತಿ ಪಡೆ​ಯ​ಬೇಕು. ಆ ಪಕ್ಷ​ದಲ್ಲಿ ಕಾರ್ಯ​ಕ​ರ್ತ​ರಿಗೆ ಎಳ್ಳಷ್ಟುಬೆಲೆ ಇಲ್ಲ. ಇನ್ನಾ​ದರೂ ಮುಗ್ಧ​ತೆ​ಯಿಂದ ಹೊರ​ಬನ್ನಿ.

- ಎಚ್‌.ಸಿ.​ಬಾ​ಲ​ಕೃಷ್ಣ, ಮಾಜಿ ಶಾಸ​ಕರು.

Latest Videos
Follow Us:
Download App:
  • android
  • ios