ನಾಯಕತ್ವದ ಮೇಲೆ ಅಸಮಾಧಾನ: ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಮುಖಂಡರು

ಕಾಂಗ್ರೆಸ್ ನಾಯಕರ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಮುಖಡರುಗಳು ಕೈ ತೊರೆದು ಬಿಜೆಪಿ ಸೇರ್ಪಡೆಗೊಂಡರು.

Bantwal Congress Leaders Joins BJP rbj

ಬಂಟ್ವಾಳ, (ಡಿ.5): ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಹಳ್ಳಿಗಳಲ್ಲಿ ಚುನಾವಣೆ ಕಾವು ಜೋರಾಗಿದೆ. ಇದರ ಮಧ್ಯೆ ಪಕ್ಷಾಂತರಗಳು ಸಹ ಅಷ್ಟೇ ಬಿರುಸುಗೊಂಡಿವೆ.

ಇದರ ಮಧ್ಯೆ ಕಾಂಗ್ರೆಸ್ ನಾಯಕರ ನಡುವಿನ ಹೊಂದಾಣಿಕೆ ಕೊರತೆಯಿಂದ ಅಸಮಾಧಾನಗೊಂಡು ಮುಖಂಡರು ಬಿಜೆಪಿಗೆ ಜೈ ಎಂದಿದ್ದಾರೆ. ಪಂಚಾಯತ್ ಮಾಜಿ ಸದಸ್ಯ ಡಿ.ಕೆ‌.ಹಂಝ ಸಹಿತ ಹಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.

ಇಂದು (ಶನಿವಾರ) ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ  ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಮ್ಮುಖದಲ್ಲಿ ತಾಪಂ ಮಾಜಿ ಸದಸ್ಯ ಹಂಝ ಮಂಚಿ, ಜಗದೀಶ್ ಶೆಟ್ಟಿ ಮವಂತೂರು, ಚಂದ್ರಹಾಸ ಕರ್ಕೆರ ಅರಳ, ಮುಸ್ತಫ ಮೂಲರಪಟ್ಣ ಮತ್ತು ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.

ಅಚ್ಚರಿ ಬೆಳವಣಿಗೆ: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ, ಸೋನಿಯಾ ಗಾಂಧಿಗೆ ಪತ್ರ ರವಾನೆ...! 

ಕೇಂದ್ರದಿಂದ ತೊಡಗಿ ಗ್ರಾಮ ಪಂಚಾಯತ್ ಹಂತದವರೆಗೂ ಬಿಜೆಪಿ ಪರ ಒಲವು ಇದೆ, ರಾಷ್ಟ್ರೀಯ ಚಿಂತನೆಗಳ ಮೂಲಕ ದೇಶಕ್ಕಾಗಿ ಕೆಲಸ ಮಾಡುವ ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬರುವ ಎಲ್ಲರಿಗೂ ಸ್ವಾಗತ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದ 39 ಗ್ರಾಮ ಪಂಚಾಯತ್ ಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದರು ರಾಜೇಶ್ ನಾಯ್ಕ್ ಹೇಳಿದರು.

Latest Videos
Follow Us:
Download App:
  • android
  • ios