ಬಿಜೆಪಿ ದೊಡ್ಡ ನಾಯಕರು ಅಫೀಮು ಇಲ್ಲದೇ ಹೊರಗೆ ಬರುವುದೇ ಇಲ್ಲ ಎಂದು ಗಂಭೀರ ಆರೋಪ ಮಾಡಲಾಗಿದೆ. 

ಬೆಳಗಾವಿ (ಸೆ.14) : ಬಿಜೆಪಿ ದೊಡ್ಡ ನಾಯಕರು ಅಫೀಮು ತೆಗೆದುಕೊಳ್ಳದೆ ಹೊರಗೆ ಬರುವುದಿಲ್ಲ ಎಂದು ಕಾಂಗ್ರೆಸ್‌ ಎಂಲ್ಸಿ ಬಿ.ಕೆ.ಹರಿಪ್ರಸಾದ್‌ ಗಂಭೀರ ಆರೋಪ ಮಾಡಿದರು. 

ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾನು ಇಡೀ ರಾಷ್ಟ್ರದಲ್ಲಿ ಕೆಲಸ ಮಾಡಿರುವೆ. ನಾನು ಹೆಸರು ಹೇಳಲು ಹೋಗುವುದಿಲ್ಲ. ಅವೆಲ್ಲವೂ ನಮಗೆ ಗೊತ್ತಿದೆ. ಯಾವುದೇ ಸಮುದಾಯದವರನ್ನು ಟಾರ್ಗೆಟ್‌ ಮಾಡುವುದು ತಪ್ಪು. 

ವೀರೇನ್‌ ಸ್ನೇಹ ಕೊನೆಗೂ ಒಪ್ಪಿದ ರಾಗಿಣಿ, ಸಂಜನಾ! ...

ಯಾವುದೇ ಕಾನೂನು ಬಾಹಿರ ಕೆಲಸಗಳು ಆದರೂ ಅಲ್ಪಸಂಖ್ಯಾತರನ್ನು ಟಾರ್ಗೆಟ್‌ ಮಾಡುವುದು ಬಿಜೆಪಿಯವರಿಗೆ ಫ್ಯಾಶನ್‌ ಆಗಿ ಬಿಟ್ಟಿದೆ. ಕಾನೂನು ಬಾಹಿರವಾಗಿ ಯಾರೇ ಕೆಲಸ ಮಾಡಿದರೂ ಕಠಿಣ ಕ್ರಮವಾಗಲಿ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಡ್ರಗ್ ಮಾಫಿಯಾ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿರುವ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.