Karnataka Politics: 'ಸಿಎಂ ಬೊಮ್ಮಾಯಿ ಜಾತಿವಾದಿಗಳ ಶಿಷ್ಯ'
* ಕುಕನೂರಲ್ಲಿ ಈಶ್ವರಪ್ಪ ಹೇಳಿಕೆ ಖಂಡಿಸಿ ಪ್ರತಿಭಟನೆ
* ಜಾತಿ, ಮತ, ಧರ್ಮ ಎಂದು ಇಡೀ ರಾಷ್ಟ್ರದ ಏಕತೆ ಹಾಳು ಮಾಡುತ್ತಿರುವ ಬಿಜೆಪಿ
* ಈಶ್ವರಪ್ಪ ಅವರ ಪ್ರತಿಕೃತಿ ದಹನ
ಕುಕನೂರು(ಫೆ.23): ಸಿಎಂ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್. ಬೊಮ್ಮಾಯಿ(Basavaraj Bommai) ರಾಷ್ಟ್ರೀಯವಾದಿ ಎಂ.ಎನ್. ರಾಯ್ ಅವರ ಶಿಷ್ಯರಾಗಿದ್ದರು. ಆದರೆ ಅವರ ಮಗ ಬಸವರಾಜ ಬೊಮ್ಮಾಯಿ(Basavaraj Rayareddy) ಜಾತಿವಾದಿಗಳ ಶಿಷ್ಯರಾಗಿದ್ದಾರೆ ಎಂದು ಟೀಕಿಸಿದರು.
ಪಟ್ಟಣದಲ್ಲಿ ಸೋಮವಾರ ಸಚಿವ ಈಶ್ವರಪ್ಪ(KS Eshwarappa) ಕೇಸರಿ ಧ್ವಜ(Saffron Flag) ಹೇಳಿಕೆ ಖಂಡಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್(Congress) ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ(Protest) ವೇಳೆ ಮಾತನಾಡಿದರು.
ರೈತರಿಗೆ ಸಿಹಿ ಸುದ್ದಿ, ಈ ಬಾರಿ ಬಜೆಟ್‌ನಲ್ಲಿ ನವಲಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಹಣ
ಬಿಜೆಪಿಯು ಜಾತಿ, ಮತ, ಧರ್ಮ ಎಂದು ಇಡೀ ರಾಷ್ಟ್ರದ ಏಕತೆ ಹಾಳು ಮಾಡುತ್ತಿದೆ. ಕೇಸರಿ ಧ್ವಜ ಕೆಂಪು ಕೋಟೆ ಮೇಲೆ ಹಾರಿಸುತ್ತೇವೆ ಎನ್ನುವ ಈಶ್ವರಪ್ಪ ಅವರ ಹೇಳಿಕೆ ಏನಿದು? ಸಂವಿಧಾನ, ರಾಷ್ಟ್ರಧ್ವಜ(National Flag), ರಾಷ್ಟ್ರೀಯತೆ(Nationality) ಮೇಲೆ ಪ್ರಮಾಣವಚನ ಸ್ವೀಕರಿಸಿ ಸಚಿವರಾದ ಅವರು ಇಂತಹ ಮಾತುಗಳನ್ನಾಡಬಾರದು ಎಂದರು.
ಪ್ರತಿಕೃತಿ ದಹನ:
ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಿಂದ ವೀರಭದ್ರಪ್ಪ ವೃತ್ತದ ವರೆಗೆ ಪ್ರತಿಭಟನೆ ಜರುಗಿತು. ಸಚಿವ ಈಶ್ವರಪ್ಪ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ವೀರಭದ್ರಪ್ಪ ವೃತ್ತದಲ್ಲಿ ಸಚಿವ ಈಶ್ವರಪ್ಪ ಅವರ ಪ್ರತಿಕೃತಿ ದಹಿಸಿದರು. ಆನಂತರ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಸಚಿವ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಡಲು ಮನವಿ ಸಲ್ಲಿಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು, ವಕ್ತಾರ ಸಂಗಮೇಶ ಗುತ್ತಿ, ಪ್ರಮುಖರಾದ ಖಾಸಿಂಸಾಬ್ ತಳಕಲ್, ಕೆರೆಬಸಪ್ಪ ನಿಡಗುಂದಿ, ಯಂಕಣ್ಣ ಯರಾಶಿ, ನಾರಾಯಣಪ್ಪ ಹರಪನಹಳ್ಳಿ, ಮಂಜುನಾಥ ಕಡೆಮನಿ, ಗುದ್ನೇಶ ನೋಟಗಾರ, ಸಿರಾಜ್ ಕರಮುಡಿ, ರೆಹೆಮಾನಸಾಬ್ ಮಕ್ಕಪ್ಪನವರ್, ಮಂಜುನಾಥ ಯಡಿಯಾಪೂರ, ಸಂತೋಷ ಬೆಣಕಲ್ ಇತರರಿದ್ದರು.
ಸಚಿವ ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ
ಕೊಪ್ಪಳ: ಕೆಂಪುಕೋಟೆಯ ಮೇಲೆ ಭಗವಾ ಧ್ವಜ ಹಾರಬಹುದು ಎಂದು ಹೇಳಿಕೆ ನೀಡುವ ಮೂಲಕ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯ ಮಾತುಗಳನ್ನಾಡಿದ್ದಾರೆ. ಹೀಗಾಗಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾದ್ಯಂತ ತಾಲೂಕು ಕೇಂದ್ರಗಳಲ್ಲಿ ಸೋಮವಾರ ಪ್ರತಿಭಟನೆಯನ್ನು ನಡೆಸಿದೆ.
ಕೊಪ್ಪಳದಲ್ಲಿ(Koppal) ಜಿಲ್ಲಾ ಮತ್ತು ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಚಿವ ಈಶ್ವರಪ್ಪ ಅವರ ರಾಷ್ಟ್ರ ವಿರೋಧಿ ಹೇಳಿಕೆ ವಿರುದ್ಧ ಪ್ರತಿಭಟಿಸಿ, ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ ಮಾತನಾಡಿ, ಕೂಡಲೇ ಸಚಿವ ಈಶ್ವರಪ್ಪ ಅವರನ್ನು ವಜಾಗೊಳಿಸಬೇಕು. ರಾಷ್ಟ್ರಧ್ವಜ ಬದಲಿಸುವ ಅವರ ಹೇಳಿಕೆ ವಾಪಸ್ ಪಡೆದು ರಾಜ್ಯದ ಜನರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
Koppal: ದೇಣಿಗೆಯಿಂದ ಕಿಷ್ಕಿಂಧೆ ಪೌರಾಣಿಕ ದೇಗುಲಗಳ ಜೀರ್ಣೋದ್ಧಾರ: ಸಚಿವ ರಾಮುಲು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ ಮಾತನಾಡಿ, ಈಶ್ವರಪ್ಪ ಅವರಿಗೆ ಏನನ್ನು ಮಾತನಾಡುತ್ತೇನೆ ಎಂಬ ಪ್ರಜ್ಞೆ ಕಳೆದುಕೊಂಡಿದ್ದು, ಅವರನ್ನು ರಾಜ್ಯಪಾಲರೇ ವಜಾಗೊಳಿಸಿ ಮಾನಸಿಕ ಚಿಕಿತ್ಸೆಗೆ ಕಳಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಕಿಶೋರಿ ಬಿ. ಮಾತನಾಡಿ, ಸಚಿವ ಈಶ್ವರಪ್ಪ ಕ್ಷಣಕ್ಕೊಂದು ಹೇಳಿಕೆ ಕೊಡುವ ಬಾಯಿಬಡುಕ ಮನುಷ್ಯ ಎಂದರು.
ಜಿಲ್ಲಾ ಮಾಧ್ಯಮ ಮಂಜುನಾಥ್ ಜಿ. ಗೊಂಡಬಾಳ, ಎಸ್‌ಸಿ ಘಟಕ ಅಧ್ಯಕ್ಷ ಗಾಳೆಪ್ಪ ಪೂಜಾರ, ಜಿಲ್ಲಾ ಯುವ ಅಧ್ಯಕ್ಷ ಗವಿಸಿದ್ದನಗೌಡ ಪಾಟೀಲ್, ಎನ್‌ಎಸ್‌ಯುಐ ಅಧ್ಯಕ್ಷ ನವೀನ ಮಾದಿನೂರ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ, ಮುತ್ತುರಾಜ ಕುಷ್ಟಗಿ, ಅಕ್ಬರ ಪಾಶಾ ಪಲ್ಟನ, ಮಾನವಿ ಪಾಶಾ, ಕಾವೇರಿ ರಾಗಿ, ಶಿವು ಪಾವಲಿಶೆಟ್ಟರ, ಅಶೋಕ ಗೋರಂಟ್ಲಿ, ಶ್ರೀನಿವಾಸ ಪಂಡಿತ್, ಹೊನ್ನೂರಸಾಬ್ ಭೈರಾಪೂರ, ಗಂಗಾಧರ ಕಬ್ಬೇರ, ಮಾಧ್ಯಮ ವಕ್ತಾರ ರವಿ ಕುರಗೋಡ ಇತರರು ಇದ್ದರು.