ಬೆಳಗಾವಿ (ಅ.29):  ಬರುವ ದಿನಗಳಲ್ಲಿ ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. 

ಆದರೆ, ಅವರು ಕೊಡಲಿಲ್ಲ ಅಂದರೆ ಮುಂದಿನ ಕಾಂಗ್ರೆಸ್‌ ಸರ್ಕಾರ ಬರುತ್ತೆ. ನಾವು ಆಗ ಮೀಸಲಾತಿ ನೀಡಿಯೇ ನೀಡ್ತೀವಿ ಎಂದು ಕಾಂಗ್ರೆಸ್‌ ಶಾಸಕಿ ಲಕ್ಷ್ಮೇ ಹೆಬ್ಬಾಳಕರ್‌ ಅವರು ಬಿಜೆಪಿ ಶಾಸಕ ಮುರುಗೇಶ ನಿರಾಣಿ ಅವರಿಗೆ ಸವಾಲೆಸೆದರು.

 ಪಂಚಮಸಾಲಿ ಮೀಸಲಾತಿ ಹೋರಾಟದ ವೇದಿಕೆಯಲ್ಲಿದ್ದ ನಿರಾಣಿ ಅವರನ್ನುದ್ದೇಶಿಸಿ ಶಾಸಕಿ ಹೆಬ್ಬಾಳಕರ ಅವರು, ಇದು ಅಣ್ಣನಿಗೆ ತಂಗಿಯ ಸವಾಲು, ನೀನು ಮಾಡಿಸಿದರೆ ಬೆಳಗಾವಿಯಿಂದ ಕುಂದಾ ತಗೊಂಡು ನಿನ್ನ ಮನೆಗೆ ಬರ್ತಿನಿ. ನಾನು ಮಾಡಿಸಿದರೆ ನನಗೆ 4 ಬಂಗಾರದ ಬಳೆ ನೀನು ಮಾಡಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ ಸವಾಲ್‌ ಹಾಕಿದರು. 

‘2ಎ’ಗಾಗಿ ಪಂಚಮಸಾಲಿಗಳ ಉಪವಾಸ: ನಿರಾಣಿ, ಸಚಿವ ರಮೇಶ್‌, ಸಿಸಿಪಾಟೀಲ ಭಾಗಿ! ...

ಇದಕ್ಕೆ ಶಾಸಕ ಮುರಗೇಶ ನಿರಾಣಿ, ನಮ್ಮ ಸಮಾಜದ ಬೆಂಕಿ ಚೆಂಡು ಅಂತಾ ಇಬ್ಬರನ್ನು ಕರೀತಿವಿ, ಅವರು ಲಕ್ಷ್ಮೀ ಹೆಬ್ಬಾಳಕರ ಹಾಗೂ ವೀಣಾ ಕಾಶಪ್ಪನವರ. ಇದರಲ್ಲಿ ರಾಜಕೀಯ ಬೇಡ, ಪಕ್ಷಾತೀತವಾಗಿ ಈ ಬೇಡಿಕೆ ಈಡೇರಿಕೆಗೆ ನಾವೆಲ್ಲರೂ ಹೋರಾಟ ಮಾಡುತ್ತೇವೆ ಎಂದರು.