BSY ಸರ್ಕಾರಕ್ಕೆ ಬೇಳೂರು ಗೋಪಾಲಕೃಷ್ಣ ಸವಾಲ್ : ಸರ್ವನಾಶದ ಎಚ್ಚರಿಕೆ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಸವಾಲು ಹಾಕಿದ್ದಾರೆ. ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಶಿವಮೊಗ್ಗ (ಆ.16): ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿರ್ಬಂಧ ಹೇರಲು ಚಿಂತನೆ ನಡೆಸಿರುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಒಂದು ವೇಳೆ ಕಡಿವಾಣ ಹಾಕಲು ಮುಂದಾದಲ್ಲಿ ಗಣಪತಿಯ ಶಾಪ ತಟ್ಟಿಯಡಿಯೂರಪ್ಪ ನೇತೃತ್ವದ ಸರ್ಕಾರ ಸರ್ವನಾಶ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಂತೂ ಗಣಪತಿ ಹಬ್ಬ ಅದ್ದೂರಿಯಾಗಿ ಆಚರಣೆ ಮಾಡಿಯೇ ಮಾಡುತ್ತೇನೆ. ಯಾರು ಬಂದು ತಡೆಯುತ್ತಾರೋ ನೋಡೋಣ ಎಂದು ತಿಳಿಸಿದರು.
ಕಾಂಗ್ರೆಸ್‌ನಲ್ಲಿಯೇ ಅಖಂಡಗೇ ಖೆಡ್ಡಾ, ಪುಲಿಕೇಶಿನಗರ ಪಾರಮ್ಯಕ್ಕೆ ಇಳಿದಿದ್ದ ಡಿಕೆಶಿ ಶಿಷ್ಯ!? .
ಹಿಂದೂಗಳಿಗೆ ಗಣೇಶ ಹಬ್ಬ ಪವಿತ್ರವಾದ್ದು. ಅದನ್ನು ಹೀಗೆ ಮಾಡಿ, ಹಾಗೇ ಮಾಡಿ ಎನ್ನುವುದಕ್ಕೆ ಯಾರಿಗೂ ಅಧಿಕಾರ ಇಲ್ಲ ಎಂದರು.