ಕಾಂಗ್ರೆಸ್‌ನಲ್ಲಿಯೇ ಅಖಂಡಗೇ ಖೆಡ್ಡಾ, ಪುಲಿಕೇಶಿನಗರ ಪಾರಮ್ಯಕ್ಕೆ ಇಳಿದಿದ್ದ ಡಿಕೆಶಿ ಶಿಷ್ಯ!?
ಅಖಂಡ ಶ್ರೀನಿವಾಸ್ ಕಾಂಗ್ರೆಸ್ ನಿಂದಲೇ ಖೆಡ್ಡಾ? ಅಸಮಾಧಾನಗೊಂಡಿದ್ದ ಅಖಂಡ ಶ್ರೀನಿವಾಸ ಮೂರ್ತಿ/ ಡಿ.ಕೆ ಶಿವಕುಮಾರ್ ಅಧ್ಯಕ್ಷರಾಗ್ತಿದ್ದ ಹಾಗೆ ಅಖಂಡ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ರು ಕಾರ್ಪೋರೇಟರ್ ಸಂಪತ್ ಕುಮಾರ್/ ಪುಲಕೇಶಿ ನಗರ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲು ಮುಂದಾದ್ರಾ ಡಿಕೆಶಿ ಶಿಷ್ಯ?
ಬೆಂಗಳೂರು(ಆ. 15) ಕಾಂಗ್ರೆಸ್ ನಿಂದಲೇ ಅಖಂಡ ಶ್ರೀನಿವಾಸ್ ಮೂರ್ತಿ ಖೆಡ್ಡಾ ತೋಡಲಾಗಿತ್ತಾ? ಹೀಗೊಂದು ಪ್ರಶ್ನೆ ಬೆಂಗಳೂರು ಗಲಭೆ ನಂತರ ಉದ್ಭವವಾಗಿದೆ.
ಡಿ.ಕೆ ಶಿವಕುಮಾರ್ ಅಧ್ಯಕ್ಷರಾಗುತ್ತದ್ದ ಹಾಗೆ ಅಖಂಡ ವಿರುದ್ಧ ಕಾರ್ಯಾಚರಣೆಗೆ ಕಾರ್ಪೋರೇಟರ್ ಸಂಪತ್ ಕುಮಾರ್ ಇಳಿದಿದ್ದರು ಎಂಬ ಮಾಹಿತಿ ಹರಿದಾಡುತ್ತಿದೆ. ಪುಲಕೇಶಿ ನಗರ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲು ಡಿಕೆ ಶಿವಕುಮಾರ್ ಶಿಷ್ಯ ಕಸರತ್ತು ಆರಂಭಿಸಿದ್ದರು ಎಂಬುದು ಸ್ಥಳೀಯ ವಲಯದಿಂದ ಬಂದ ಮಾತು.
ಮಾಜಿ ಶಾಸಕ ಪ್ರಸನ್ನ ಕುಮಾರ್ ಅವರನ್ನು ಕಾಂಗ್ರೆಸ್‌ಗೆ ಕರೆತರಲು ಅಲ್ಲಂ ವೀರಭದ್ರಪ್ಪ ಸಮಿತಿ ಶಿಫಾರಸ್ಸಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗ್ರೀನ್ ಸಿಗ್ನಲ್ ನೀಡಿದ್ದರು. ಇದರಿಂ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದು ಶಾಸಕನಾಗಿದ್ದ ಅಖಂಡ ಶ್ರೀನಿವಾಸ್ ಮೂರ್ತಿಗೆ ಕ್ಷೇತ್ರ ಕಳೆದುಕೊಳ್ಳುವ ಭಯ ಆವರಿಸಿತ್ತು. ಸಂಪತ್ ಕುಮಾರ್ ಕಾರ್ಯಾಚರಣೆ ಅಖಂಡ ಸಹ ಪ್ರತಿತಂತ್ರ ರೂಪಿಸಿದ್ದರು.
ಮೂರು ಕೋಟಿ ನಷ್ಟವಾದರೂ ದೂರು ಕೊಡಲು ಶಾಸಕ ಹಿಂದೇಟು
ಡಿ.ಕೆ ಶಿವಕುಮಾರ್ ಮೇಲೆ ಅಸಮಾಧಾನ ಗೊಂಡು ಜಮೀರ್ ಅಹಮದ್, ಸಿದ್ದರಾಮಯ್ಯ ಬಳಿ ಅಖಂಡ ಶ್ರೀನಿವಾಸ್ ಮೂರ್ತಿ ಅವಲೊತ್ತುಕೊಂಡಿದ್ದರು.
ಪುಲಕೇಶಿ ನಗರ ಕ್ಷೇತ್ರದ ಮೇಲೆ ಪರಮೇಶ್ವರ ಕಣ್ಣು: ಇದು ಮತ್ತೊಂದು ಆಂಗಲ್ ನಲ್ಲಿ ಸುದ್ದಿಯನ್ನು ಹೇಳುತ್ತದೆ. ಪರಮೇಶ್ವರ್ ಅವರನ್ನೇ ಸತ್ಯ ಶೋಧನಾ ಸಮಿತಿಗೆ ಅಧ್ಯಕ್ಷರನ್ನಾಗಿ ಡಿಕೆಶಿ ನೇಮಿಸಿದ್ದಾರೆ.
ಮೈತ್ರಿ ಸರ್ಕಾರದ ಪತನದ ಬಳಿಕ ಪಕ್ಷದ ಚಟುವಟಿಕೆಯಿಂದ ದೂರವೇ ಉಳಿದಿದ್ದ ಪರಮೇಶ್ವರ್ ಅವರಿಗೇ ಡಿಕೆಶಿ ಜವಾಬ್ದಾರಿ ವಹಿಸಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ. ಡಿ.ಜೆ ಹಳ್ಳಿ ಕೆ.ಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಗೆದಷ್ಟು ಕಾಂಗ್ರೆಸ್ ನ ರಾಜಕಾರಣದ ಒಳ ಹೊರಗುಗಳು ತೆರೆದುಕೊಳ್ಳುತ್ತ ಹೋಗುತ್ತದೆ.
"