ಮದ್ದೂರು (ಅ.14) : TAPCMS ನ ಅಧಿಕಾರ ಹಿಡಿಯುವ ಭರದಲ್ಲಿ ಕಾಂಗ್ರೆಸಿಗರು ತಾವೇ ವಿರೋಧಿಸುತ್ತಿದ್ದ ಬಿಜೆಪಿಯಂದಿಗೆ ಕೈ ಜೋಡಿಸುವ ಮೂಲಕ ಕ್ಷೇತ್ರದಲ್ಲಿ ಪಕ್ಷವನ್ನು ಹೀನಾಯ ಸ್ಥಿತಿಗೆ ನಿಲ್ಲಿಸಿದ್ದಾರೆ ಎಂದು ಶಾಸಕ ಡಿ ಸಿ ತಮ್ಮಣ್ಣ ಬೆಂಬಲಿಗರು ಆರೋಪಿಸಿದ್ದಾರೆ. 

ಪಟ್ಟಣದ ಶಾಸಕರ ನಿವಾಸದಲ್ಲಿ  ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ  ಜೆಡಿಎಸ್ ಬೆಂಬಲಿತ ಸದಸ್ಯರಾದ ಕೊಳಗೆರೆ ಶೇಖರ್ ಎಸ್‌ ಬಿ ಹಿನ್ನೇಗೌಡ ಮಾಜಿ ಅಧ್ಯಕ್ಷ ಶ್ರೀಕಂಠಯ್ಯ ಅವರು ಚುನಾವಣೆಯಲ್ಲಿ ಬಿಜೆಪಿ ಪರ ಕಾಂಗ್ರೆಸ್ ನಾಯಕರು ಕೈ ಜೋಡಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. 

ಶರತ್‌ ಬಚ್ಚೇಗೌಡ ಕಾಂಗ್ರೆಸ್‌ ಸೇರ್ಪಡೆ ನಿರ್ಧಾರ : ಈಗ ಬದಲಾದ ವಿಚಾರ..? ..

ಬಿಜೆಪಿ ಕೋಮುವಾದಿ ಪಕ್ಷ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ  ಕಾಂಗ್ರೆಸ್ ಮುಖಂಡರು ಟಿಎಪಿಸಿಎಂಎಸ್‌ನಲ್ಲಿ ಅಧಿಕಾರ ಹಿಡಿಯಲು ಬಿಜೆಪಿಯೊಂದಿಗೆ ಕೈ ಜೋಡಿಸಿ ಮದ್ದೂರು ಕ್ಷೇತ್ರದಲ್ಲಿ ಪಕ್ಷವನ್ನು ಅಧೋಗತಿಗೆ ತಂದಿದ್ದಾರೆ ಎಂದರು.

ಶಿರಾ ಬೈಎಲೆಕ್ಷನ್ ಅಖಾಡ; ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ..

ಜೆಡಿಎಸ್‌ ನಾಲ್ವರು ಬಿಜೆಪಿಗೆ ಅಧಿಕಾರ ದಕ್ಕಬಾರದು ಎಂಬ ಉದ್ದೇಶದಿಂದ  ಯಾವುದೇ ಅಧಿಕಾರದ ಅಪೇಕ್ಷ ಇರದೇ ಕಾಂಗ್ರೆಸ್‌ಗೆ ಬೆಂಬಲ ನೀಡಲು ನಿರ್ಧರಿಸಿದ್ದರು.  ಬಿಜೆಪಿ ಜೊತೆ ಕಾಂಗ್ರೆಸ್ ಕೈ ಜೋಡಿಸುವ ಬಗ್ಗೆ ಸ್ಥಳೀಯರ ವಿರೋಧವು ಇತ್ತು ಎಂದರು. 

ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿಜೆಪಿಯಿಂದ ಬೆಂಬಲ ಪಡೆಯುವ ನಿಟ್ಟಿನಲ್ಲಿ ಮಾಜಿ ಶಾಸಕ ಚಲುವರಾಯಸ್ವಾಮಿ ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈ ಜೋಡಿಸುವಂತೆ ಸೂಚಿಸಿದ್ದಾರೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಶ್ಚಾತಾಪ ಪಡಲಿದೆ ಎಂದರು.