ಬೇಲೂರು (ಅ.30):  ಬಿಜೆಪಿ ಸರ್ಕಾರದ ಕಾರ್ಯವೈಖರಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಮನಸೋತು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಕೆ.ಸುರೇಶ್‌ (ಹುಲ್ಲಳ್ಳಿ ಸುರೇಶ್‌) ಹೇಳಿದರು.

ತಾಲೂಕಿನ ಮಾದಿಹಳ್ಳಿ ಹೋಬಳಿ ಆಂದಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗುಳವಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಕರು ಹಾಗೂ ಹಿರಿಯ ಮುಖಂಡರು ನಮ್ಮ ಬಿಜೆಪಿ ಪಕ್ಷದ ಅಭಿವೃದ್ಧಿ ಹಾಗೂ ರೈತಪರ ನಿಲುವುಗಳನ್ನು ಕಂಡು ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷವನ್ನು ತೊರೆದು ಸೇರ್ಪಡೆಯಾಗುತ್ತಿದ್ದಾರೆ ಎಂದರು.

'ಸಿದ್ದರಾಮಯ್ಯ, ದೇವೇಗೌಡ್ರೇ ಪ್ರಚಾರಕ್ಕೆ ಹೋದ್ಮೇಲೆ ನಾನು ಹೋಗದಿದ್ರೆ ತಪ್ಪಾಗುತ್ತೆ'

ನಂತರ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಅಭಿವೃದ್ಧಿಗೆ ತನುಮನ ಧನವನ್ನು ಅರ್ಪಿಸುವುದಾಗಿ ಭರವಸೆ ಸುರೇಶ್‌ ನೀಡಿದರು. ಮತ್ತು ಮುಂಬರುವ ಚುನಾವಣೆಗಳಲ್ಲಿ ಭಾರತೀಯ ಜನತಾ ಪಾರ್ಟಿಗೆ ಸಂಪೂರ್ಣ ಬೆಂಬಲ ನೀಡಿ ಗೆಲುವು ಸಾದಿಸುತ್ತೇವೆ ಎಂದು ಮುಗುಳವಳ್ಳಿ ಗ್ರಾಮಸ್ಥರು ವಿಶ್ವಾಸ ವ್ಯಕ್ತಪಡಿಸಿದರು.

ಮಂಡಲ ಅಧ್ಯಕ್ಷ ಅಡಗೂರು ಆನಂದ್‌, ಕೋಗಿಲಮನೆ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಸೋಮಶೇಖರ್‌ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಜಿಲ್ಲಾ ಪದಾ​ಧಿಕಾರಿಗಳು, ಬೇಲೂರು ಮಂಡಲದ ಪದಾ​ಧಿಕಾರಿಗಳು, ಮುಖಂಡರಾದ ತಾರಾನಾಥ್‌, ಲತೇಶ್‌, ದಾಸಯ್ಯ, ಗೀರೀಶ್‌, ದಿನೇಶ್‌, ಚನ್ನೇಗೌಡ, ಭರತ್‌, ಪ್ರತಾಪ್‌, ಪ್ರಕಾಶ್‌, ಸೋಮಣ್ಣ, ರಾಮಚಂದ್ರ, ಅಬುಲಿ, ಕಾಸೀಂ, ಸುರೇಶ್‌, ಮೋಹನ್‌, ಸುರೇಶ್‌ ಜೋಸ್ವ, ದಿಲೀಪ್‌, ಚೇತನ್‌, ಶಿವಪ್ಪ, ಪ್ರಸನ್ನ, ಶಶಿಧರ್‌, ಮಂಜು, ರುದ್ರೇಶ್‌, ಸುರೇಶ್‌,   ಮಹೇಶ್‌, ಭರತ್‌, ಪ್ರಕಾಶ್‌, ವಿನಯ್‌, ಕುಮಾರ್‌, ಪ್ರಣೀತ್‌, ಪವನ್‌, ಕಿರಣ್‌, ಪರಮೇಶ್‌, ಪೂರ್ಣೇಶ್‌, ಹಾಗೂ ಹಿರಿಯರು, ಕಾರ್ಯಕರ್ತರು ಇನ್ನಿತರರು ಉಪಸ್ಥಿತರಿದ್ದರು.