Asianet Suvarna News Asianet Suvarna News

ಚುನಾವಣಾ ಫಲಿತಾಂಶ : ಸಮಬಲ ಸಾಧಿಸಿದ ಕಾಂಗ್ರೆಸ್‌-ಜೆಡಿಎಸ್‌

ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮಯಬಲ ಸಾಧಿಸಿದೆ. 

Congress JDS Equal in TAPCMS Election snr
Author
Bengaluru, First Published Nov 10, 2020, 1:59 PM IST

ದೊಡ್ಡಬಳ್ಳಾಪುರ (ನ.10):  ಇಲ್ಲಿನ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ- ಟಿಎಪಿಎಂಸಿಎಸ್‌ಗೆ  ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಎ-ತರಗತಿಯ ಎಲ್ಲ 4 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದುಕೊಂಡಿದೆ.

 ಬಿ-ತರಗತಿಯ 9 ಸ್ಥಾನಗಳ ಪೈಕಿ 2ರಲ್ಲಿ ಕಾಂಗ್ರೆಸ್‌, 5ರಲ್ಲಿ ಜೆಡಿಎಸ್‌, 1ರಲ್ಲಿ ಬಿಜೆಪಿ ಹಾಗೂ 1 ಸ್ಥಾನ ಜೆಡಿಎಸ್‌ ಬಂಡಾಯ ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ. ಈ ಮೂಲಕ 13 ಸದಸ್ಯ ಬಲದ ಸಹಕಾರ ಸಂಸ್ಥೆಯಲ್ಲಿ ಕಾಂಗ್ರೆಸ್‌ 6, ಜೆಡಿಎಸ್‌ (ಅಪ್ಪಯ್ಯಣ್ಣ ಬಣವೂ ಸೇರಿ) 6 ಹಾಗೂ ಬಿಜೆಪಿ 1 ಸ್ಥಾನ ಪಡೆದಂತಾಗಿದೆ.

ಬಿಜೆಪಿಗೆ ಜಾಕ್ ಪಾಟ್‌ : ಗೆದ್ದು ಬೀಗಿದ ಮುಖಂಡಗೆ ಮಹತ್ವದ ಸ್ಥಾನ ...

ಎ-ತರಗತಿಯಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳಾದ ಎಂ.ವೆಂಕಟೇಶ್‌-16, ಡಿ.ಸಿದ್ದರಾಮಯ್ಯ-16, ಜಿ.ಮಾರೇಗೌಡ-14 ಮತ್ತು ಎಂ.ಗೋವಿಂದರಾಜು-12 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಬಿ-ತರಗತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳಾದ ಎನ್‌.ರಂಗಪ್ಪ-1382, ಎಸ್‌.ದಯಾನಂದ್‌-904, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಾದ ಕೆ.ಸಿ.ಲಕ್ಷ್ಮೇನಾರಾಯಣ-1000, ವಿ.ಆಂಜನಗೌಡ-1661, ಗೋವಿಂದರಾಜ್‌-872, ಚಂದ್ರಕಲಾ-1219, ಲಕ್ಷ್ಮೇ- 1230, ಬಿಜೆಪಿ ಬೆಂಬಲಿತ ಟಿ.ವಿ.ಲಕ್ಷ್ಮೇ ನಾರಾಯಣ್‌-1377, ಜೆಡಿಎಸ್‌ ಎಚ್‌.ಅಪ್ಪಯ್ಯಣ್ಣ ಬಣದ ಅಭ್ಯರ್ಥಿ ಎಂ.ಆನಂದ್‌-1035 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

Follow Us:
Download App:
  • android
  • ios