ಮಾಗಡಿ (ನ.10):  ತೀವ್ರ ಕುತೂ​ಹಲ ಕೆರ​ಳಿ​ಸಿದ್ದ ಪುರಸಭೆ ಚುನಾವಣೆಯಲ್ಲಿ ಅಧ್ಯ​ಕ್ಷ​ರಾಗಿ ಬಿಜೆಪಿ ಸದ​ಸ್ಯೆ ಭಾಗ್ಯಮ್ಮ ಹಾಗೂ ಉಪಾ​ಧ್ಯ​ಕ್ಷ​ರಾ​ಗಿ ಜೆಡಿಎಸ್‌ ​ಸ​ದ​ಸ್ಯ ರೆಹಮತ್‌ ​  ನಡೆದ ಚುನಾ​ವ​ಣೆ​ಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷೆ ಸ್ಥಾನಕ್ಕೆ ಭಾಗ್ಯಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರೆಹಮತ್‌ ಅವ​ರ​ನ್ನು ಹೊರತುಪಡಿಸಿ ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಶ್ರೀನಿ​ವಾಸ ಪ್ರಸಾದ್‌ ಘೋಷಿಸಿದರು. ಪುರಸಭೆಗೆ ಕಳೆದ ನ. 12ರಂದು ಚುನಾವಣೆ ನಡೆದು 23 ಸ್ಥಾನ​ಗ​ಳ ಪೈಕಿ ಜೆಡಿಎಸ್‌ - 12, ಕಾಂಗ್ರೆಸ್‌ - 10 ಹಾಗೂ ಬಿಜೆಪಿ -1 ಸ್ಥಾನ​ಗ​ಳಲ್ಲಿ ಗೆಲುವು ಸಾಧಿ​ಸಿತ್ತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾ​ಧ್ಯಕ್ಷ ಸ್ಥಾನ ಬಿಸಿ​ಎಗೆ ಮೀಸ​ಲಾ​ಗಿ​ತ್ತು.

ಫಲಿತಾಂಶ ಕುತೂಹಲಕ್ಕೆ ತೆರೆ : ಮೊದಲ ಸ್ಥಾದಲ್ಲಿ ಕೈ ಪಡೆ ವಿಜಯ - 2ನೇ ಸ್ಥಾನದಲ್ಲಿ JDS .

ಸದಸ್ಯರ ಪ್ರವಾಸ:  ಜೆಡಿಎಸ್‌ನ 12 ಸದಸ್ಯರು ಹಾಗೂ ಶಾಸಕ ಎ.ಮಂಜುನಾಥ್‌ ಅವರ 1 ಮತ ಸೇರಿ 13 ರೊಂದಿಗೆ ಸ್ವಷ್ಟಬಹುಮತವಿತ್ತು. ಸದಸ್ಯರ ಕುದುರೆ ವ್ಯಾಪಾರ ನಡೆಯಬಹುದು ಎನ್ನುವ ಕಾರ​ಣಕ್ಕೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಲಾಗಿತ್ತು. ಸ್ಪಷ್ಟಬಹುಮತ ಹೊಂದಿದ್ದ ಜೆಡಿಎಸ್‌ ಪಕ್ಷ ಪುರಸಭೆಯ ಅಧಿಕಾರವನ್ನು ಸುಲಭವಾಗಿ ಹಿಡಿಯಬಹುದು ಎನ್ನುವ ಅಭಿಪ್ರಾಯ ಎಲ್ಲರಲ್ಲಿತ್ತು. ವಿಜಯಲಕ್ಷ್ಮೀ ರೂಪೇಶ್‌ ಕುಮಾರ್‌ ಅವರನ್ನು ಅಧ್ಯಕ್ಷರ​ನ್ನಾಗಿ ಮಾಡಲು ಶಾಸಕರು ಸೇರಿದಂತೆ ಎಲ್ಲರ ಒಲವಿತ್ತು.

ಆದರೆ, ಜೆಡಿಎಸ್‌ ಪಕ್ಷದ ಕೆಲವು ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಜೆಡಿಎಸ್‌ನಲ್ಲಿ ಒಮ್ಮತ್ತದ ಅಭಿಪ್ರಾಯ ಮೂಡಿರಲಿಲ್ಲ. ಈ ಮಧ್ಯೆ ಇಬ್ಬರು ಜೆಡಿಎಸ್‌ ಸದಸ್ಯರು ಕಾಂಗ್ರೆಸ್‌ ಸಂಪರ್ಕದಲ್ಲಿದ್ದರು. ಕಾಂಗ್ರೆಸ್‌ ನಾಯ​ಕರು ಬಿಜೆಪಿ ಮುಖಂಡ ಎ.ಎಚ್‌.ಬಸವರಾಜು ಅವರ ಜೊತೆ ಬಿಜೆಪಿಗೆ ಅಧ್ಯಕ್ಷ ಸ್ಥಾನ ಕೊಡುತ್ತೇವೆ ಎಂದು ಮಾತುಕತೆ ಸಹ ನಡೆಸಿದ್ದರು.

ಇದರ ಸುಳಿವು ಅರಿತ ಶಾಸಕ ಎ.ಮಂಜುನಾಥ್‌ ಅವರು ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥ ನಾರಾ​ಯಣ ಹಾಗೂ ಬಿಜೆಪಿಯ ಮುಖಂಡ ಎ.ಎಚ್‌.ಬಸವರಾಜ… ಅವರ ಜೊತೆಯಲ್ಲಿ ಮಾತುಕತೆ ನಡೆಸಿ ಅಂತಿಮವಾಗಿ ಅಧ್ಯಕ್ಷ ಸ್ಥಾನ ಬಿಜೆಪಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಹಂಚಿ​ಕೊ​ಳ್ಳುವ ತೀರ್ಮಾ​ನಿ​ಸಿ​ದರು. ಕೇವಲ ಒಂದು ಸ್ಥಾನ ಹೊಂದಿರುವ ಬಿಜೆಪಿಯ ಭಾಗ್ಯಮ್ಮ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿ​ದ್ದಾ​ರೆ.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಭಾಗ್ಯಮ್ಮ ನಾಮ ಪತ್ರ ಸಲ್ಲಿಸಿದ್ದರು. 10 ಸದಸ್ಯರ ಬಲವುಳ್ಳ ಕಾಂಗ್ರೆಸ್‌ ಸದ​ಸ್ಯರು ನಾಮಪತ್ರ ಸಲ್ಲಿಸದೆ ಅವರಿಗೆ ಬೆಂಬಲ ಸೂಚಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ನೂತನ ಅಧ್ಯಕ್ಷ ಉಪಾ​ಧ್ಯ​ಕ್ಷ​ರನ್ನು ಬಿಜೆಪಿ ಹಾಗೂ ಜೆಡಿ​ಎಸ್‌ ಮುಖಂಡರು ಅಭಿ​ನಂದಿ​ಸಿ​ದ​ರು.

ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದು, ಪಟ್ಟಣದ ಅಭಿವೃದ್ಧಿಯ ದೃಷ್ಟಿಯಿಂದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆದೇಶದ ಮೇರೆಗೆ ಬಿಜೆಪಿಯ ಭಾಗ್ಯಮ್ಮ ಅವರಿಗೆ ಬೆಂಬಲ ನೀಡಲಾಗಿದೆ. ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಉದ್ದೇಶವಿದೆ. ಭಾಗ್ಯಮ್ಮ ಅವಿರೊಧವಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲಾ 23 ಸದಸ್ಯರಿಗೂ ಅಭಿನಂದನೆ ಸಲ್ಲಿಸುತ್ತೇನೆ.

- ಎ.ಮಂಜು​ನಾಥ್‌ , ಶಾಸ​ಕರು ,ಮಾ​ಗಡಿ ಕ್ಷೇತ್ರ.