ವಿದ್ಯುತ್ ಸಮಸ್ಯೆ ಶೀಘ್ರ ಬಗೆಹರಿಯಲಿದೆ: ಟಿ.ಬಿ.ಜಯಚಂದ್ರ
ರಾಜ್ಯದಲ್ಲಿ ವಿದ್ಯುತ್ ಕೊರತೆ ಹಿನ್ನೆಲೆ, ಪಂಜಾಬ್ ಮತ್ತು ಛತ್ತೀಸ್‌ಗಡ ರಾಜ್ಯಗಳಿಂದ ಪ್ರತಿ ಯೂನಿಟ್ ಗೆ 10.50 ರು. ನೀಡಿ ವಿದ್ಯುತ್ ಖರೀದಿಸುವ ಮಹತ್ವದ ನಿರ್ಧಾರ ಸರ್ಕಾರ ಕೈಗೊಂಡಿದೆ. ನಾಲ್ಕೈದು ದಿನಗಳಲ್ಲಿ ರಾಜ್ಯದ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು
ಶಿರಾ: ರಾಜ್ಯದಲ್ಲಿ ವಿದ್ಯುತ್ ಕೊರತೆ ಹಿನ್ನೆಲೆ, ಪಂಜಾಬ್ ಮತ್ತು ಛತ್ತೀಸ್‌ಗಡ ರಾಜ್ಯಗಳಿಂದ ಪ್ರತಿ ಯೂನಿಟ್ ಗೆ 10.50 ರು. ನೀಡಿ ವಿದ್ಯುತ್ ಖರೀದಿಸುವ ಮಹತ್ವದ ನಿರ್ಧಾರ ಸರ್ಕಾರ ಕೈಗೊಂಡಿದೆ. ನಾಲ್ಕೈದು ದಿನಗಳಲ್ಲಿ ರಾಜ್ಯದ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು
ರಂಗಾಪುರ ಗ್ರಾಮದಲ್ಲಿ 32 ಲಕ್ಷ ರು. ವೆಚ್ಚದ ಜಲಜೀವನ್ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಮಳೆಯ ಅಭಾವದ ಜೊತೆಗೆ ರಾಜ್ಯದಲ್ಲಿ ಉಷ್ಣ ವಾತಾವರಣ ಕಡಿಮೆ ಇರುವ ಕಾರಣ ಸೌರವಿದ್ಯುತ್ ಉತ್ಪಾದನೆ ಕೂಡ ಕಡಿಮೆಯಾಗಿದೆ. ವಿದ್ಯುತ್ ಅಭಾವಕ್ಕೆ ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಹು ಮಹತ್ವದ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಜೀವ ಜಲ ನೀಡಲಾಗುತ್ತಿದ್ದು, ಜನತೆ ಇದರ ಸದುಪಯೋಗಪಡಿಸಿಕೊಳ್ಳಿ. ನೀರಿನಲ್ಲಿ ಫ್ಲೋರೈಡ್ ಅಂಶ ಮುಕ್ತವಾಗಿದ್ದರೆ ಕುಡಿಯಲು ಯೋಗ್ಯವಾಗಿರುತ್ತದೆ. ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಶುದ್ಧ ನೀರು ಕುಡಿಯುವುದರಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು ಎಂದರು.
ಬರಗೂರು ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಭೀಮಣ್ಣ, ಪಿಡಿಒ ನಾಗರಾಜ್, ಸದಸ್ಯರಾದ ರಂಗಪುರ ಮಂಜುನಾಥ್, ಕಂಬಿ ಮಂಜುನಾಥ್, ನಾಗರಾಜ್, ಮಾಜಿ ಅಧ್ಯಕ್ಷೆ ಲಕ್ಷ್ಮೀನರಸಮ್ಮ, ಮಾಜಿ ಉಪಾಧ್ಯಕ್ಷ ರಂಗಪುರ ತಿಪ್ಪೇಸ್ವಾಮಿ, ಶ್ರೀನಿವಾಸ್, ರಂಗಧಾಮ, ಭಾಸ್ಕರ್, ಕೆ ನರಸಪ್ಪ, ಫಕ್ರುದ್ದೀನ್ ಸಾಬ್, ಸದಾಶಿವ, ಅಭಿಯಂತರ ನಾಗೇಂದ್ರಪ್ಪ, ಗುತ್ತಿಗೆದಾರ ನರಸಿಂಹಯ್ಯ ಬಿಲ್ ಕಲೆಕ್ಟರ್ ಲಕ್ಷ್ಮಣ ಇದ್ದರು.