ಮಾಜಿ ಸಿಎಂ ಹೆಚ್ ಡಿಕೆ ವಿರುದ್ದ ಧಿಕ್ಕಾರ ಕೂಗಿ ಕೈ-ಕಮಲ ಸದಸ್ಯರ ಆಕ್ರೋಶ
ಹೈಡ್ರಾಮಕ್ಕೆ ಸಾಕ್ಷಿಯಾಯ್ತು ಚನ್ನಪಟ್ಟಣ ನಗರಸಭೆ. ಪೋಲಿಸರ ಸರ್ಪಗಾವಲಿನಲ್ಲಿ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ಹೆಚ್ ಡಿ ಕುಮಾರಸ್ವಾಮಿ
ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್
ರಾಮನಗರ (ಆ.16): ಚುನಾವಣೆ ಆರಂಭಕ್ಕೂ ಮುನ್ನವೇ ಬೊಂಬೆ ನಗರಿ ಚನ್ನಪಟ್ಟಣದಲ್ಲಿ ಚುನಾವಣೆಯ ಕಾವು ಜೋರಾಗಿದೆ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಕೈ- ಕಮಲ ನಾಯಕರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ದೊಡ್ಡ ಹೈಡ್ರಾಮಕ್ಕೆ ಸಾಕ್ಷಿಯಾಯಿತು ಚನ್ನಪಟ್ಟಣ ನಗರಸಭೆ. ರಾಮನಗರ ಜಿಲ್ಲೆ ಚನ್ನಪಟ್ಟಣ ನಗರಸಭೆಯಲ್ಲಿ ಇಂದು ದೊಡ್ಡ ಹೈಡ್ರಾಮವೇ ನಡೆಯಿತು, ಕಸ ಸ್ವಚ್ಚತಾ ವಾಹನಗಳಿಗೆ ಚಾಲನೆ ನೀಡಲು ಕ್ಷೇತ್ರದ ಶಾಸಕರು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿರವರು ಇಂದು ಬೆಳಿಗ್ಗೆ ನಗರಸಭೆಗೆ ಆಗಮಿಸಿದ್ರು, ಈ ವೇಳೆ ಇಂದಿನ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ನೀಡಿಲ್ಲ ಎಂದು ಕೈ-ಕಮಲ ಸದಸ್ಯರು ಕುಮಾರಸ್ವಾಮಿ ವಿರುದ್ದ ಧಿಕ್ಕಾರ ಕೂಗಿ ಕಪ್ಪು ಪಟ್ಟಿ ಪ್ರದರ್ಶಿಸಿದ ಘಟನೆ ನಡೆಯಿತು. ಈ ವೇಳೆ ಮಾತಾನಾಡಿದ ಕುಮಾರಸ್ವಾಮಿ ನಗರಸಭೆ ಇಂದ ಖರೀದಿಸಿದ್ದ ವಾಹನಗಳನ್ನು ಸಾರ್ವಜನಿಕ ಸೇವೆಗೆ ಇಂದು ನೀಡಲು ನೀವು ಬರಬೇಕು ಎಂದು ನಗರಸಭೆ ಅಧ್ಯಕ್ಷರು ಮನವಿ ಮಾಡಿದ್ರು, ಹಾಗಾಗಿ ನಾನು ಬಂದೆ ಎಲ್ಲಾ 31 ಸದಸ್ಯರಿಗೂ ಪೋನ್ ಮೂಲಕ ತಿಳಿಸಿದ್ದಾರೆ.
ದೊಡ್ಡ ಮಟ್ಟದ ಶಿಷ್ಟಾಚಾರ ಏನು ಇಲ್ಲಿ ಉಲ್ಲಂಘನೆ ಮಾಡಿಲ್ಲ, ರಾಜಕಾರಣ ಮಾಡಬೇಕು ಅಂತಾನೆ ಯಾರೋ ಒಂದಿಬ್ರೂ ಸದಸ್ಯರು ಇಲ್ಲಿ ಶೋ ಆಪ್ ಮಾಡೋಕೆ ಬಂದಿದ್ದಾರಲ್ಲ ಅವರಿಗೆ ನಗರದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ಸುಗಮವಾಗಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗೊಂದಲ ಉಂಟುಮಾಡುವ ಕೆಲಸ ಮಾಡಿದ್ದಾರೆ ಎಂದರು, ಕೊನೆಗೆ ಪೋಲಿಸರ ಸರ್ಪಗಾವಲಿನಲ್ಲಿ ಸ್ವಚ್ಚತಾ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು.
ಅಂದಹಾಗೆ 31 ಸದಸ್ಯರನ್ನೊಳಗೊಂಡ ಚನ್ನಪಟ್ಟಣ ನಗರಸಭೆ ಜೆಡಿಎಸ್ ತೆಕ್ಕೆಯಲ್ಲಿದೆ. ನಗರಸಭೆಯ ಯಾವುದೇ ಕಾರ್ಯಕ್ರಮಕ್ಕೂ ಕೈ-ಕಮಲ ಸದಸ್ಯರನ್ನು ಪರಿಗಣಿಸುತ್ತಿಲ್ಲ. ಇಂದಿನ ಸ್ವಚ್ಚತಾ ವಾಹನಗಳ ಚಾಲನೆ ನೀಡುವ ಕಾರ್ಯಕ್ರಮಕ್ಕೆ ನಮಗೆ ಆಹ್ವಾನಿಸಿರಲಿಲ್ಲ. ಈ ಬಗ್ಗೆ ಕೇಳಲು ಹೋದಾಗ ಕಾರ್ಯಕ್ರಮಕ್ಕೆ ಬರುವಂತೆ ಮೇಸೆಜ್ ಮಾಡಿದ್ದೇನೆ ಎಂದು ಉತ್ತರ ಕೊಟ್ಟಿದ್ದರು.
ಜೆಡಿಎಸ್ ಸ್ವತಂತ್ರ ಸರ್ಕಾರ ರಚಿಸಲು ಆಶೀರ್ವದಿಸಿ: ಎಚ್.ಡಿ.ಕುಮಾರಸ್ವಾಮಿ
ನಮ್ಮನ್ನು ಎಳೆದಾಡಿದ್ರು, ನಮಗೆ ವಿಧಿಯಿಲ್ಲದೇ ಈ ಬಗ್ಗೆ ಶಾಸಕರ ಬಳಿ ಕೇಳಲು ಹೋದಾಗ ನೀವೆಲ್ಲಾ ಬಿಜೆಪಿ ಅವ್ರೂ ಡ್ರಾಮ ಮಾಡೋಕೆ ಬಂದಿದ್ದೀರಾ, ನಾನು ಸಿಎಂ ಆಗಿದ್ದ ವೇಳೆ ನೀಡಿದ್ದ ಅನುದಾನವನ್ನು ಬಿಜೆಪಿ ಹಗರಣ ಮಾಡಿಕೊಂಡ್ರು, ನಿಮ್ಮದು ಏನಾದ್ರು ಇದ್ರೆ ಇದೇ 20 ರಂದು ಸಭೆ ಕರೀತಿನಿ ಅಲ್ಲಿ ಬಂದು ಹೇಳಿ ಎಂದು ನಮ್ಮ ಬಗ್ಗೆ ತುಂಬಾ ಲಘುವಾಗಿ ಮಾತನಾಡಿದ್ದಾರೆ. ಈ ವಿಚಾರವಾಗಿ ಜನಪ್ರತಿನಿಧಿಗಳ ಕ್ಷಮೆ ಕೋರಬೇಕು ಎಂದು ನಗರಸಭೆ ಸದಸ್ಯರು ಆಗ್ರಹಿಸಿದರು.
ಜಾಹೀರಾತುಗಳ ಮೇಲೆ ನಡೆಯುತ್ತಿರುವ, ಟೈಂ ಪಾಸ್ ಸರ್ಕಾರ: ಎಚ್‌ಡಿಕೆ
ಒಟ್ಟಾರೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಚನ್ನಪಟ್ಟಣ ರಣಾಂಗಣವಾಗ್ತಿದ್ದು, ಮುಂದಿನ ದಿನಗಳಲ್ಲಿ ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ.