Shivamogga: ಸಾಗರ ಕೋರ್ಟ್ ಗೆ ವಿವಾದಾತ್ಮಕ ಸಾಹಿತಿ ಭಗವಾನ್ ಹಾಜರು

ಸಾಗರದ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎದುರು ಭಗವಾನ್ ಹಾಜರಾಗಿದ್ದಾರೆ.‌ ರಾಮ ಮಂದಿರ ಏಕೆ ಬೇಡ? ಕೃತಿ ವಿವಾದ ಹಿನ್ನಲೆ 5 ಜಿಲ್ಲಾ ಮತ್ತು ಸತ್ರ  ನ್ಯಾಯಾಲಯದಿಂದ ವಿವಾದಾತ್ಮಕ ಸಾಹಿತಿ ಭಗವಾನ್ ಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

Conditional bail granted for Writer K S Bhagawan gow

ಶಿವಮೊಗ್ಗ(ಡಿ.20): ಸಾಗರದ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎದುರು ಭಗವಾನ್ ಹಾಜರಾಗಿದ್ದಾರೆ.‌ ರಾಮ ಮಂದಿರ ಏಕೆ ಬೇಡ? ಕೃತಿ ವಿವಾದ ಹಿನ್ನಲೆ 5 ಜಿಲ್ಲಾ ಮತ್ತು ಸತ್ರ  ನ್ಯಾಯಾಲಯದಿಂದ ವಿವಾದಾತ್ಮಕ ಸಾಹಿತಿ ಭಗವಾನ್ ಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಭಗವಾನ್ ವಿರುದ್ದ ಸಾಗರ ಜೆ ಎಂ ಎಪ್ ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ರಾಮ ಮಂದಿರದ ಬಗ್ಗೆ ವಿವಾದಾತ್ಮಕ ಕೃತಿ ಬರೆದಿದ್ದ ಮೈಸೂರಿನ ಸಾಹಿತಿ ಭಗವಾನ್ ವಿರುದ್ದ ಇಕ್ಕೇರಿಯ ಮಹಾಬಲೇಶ್ವರ ಎಂಬುವವರು  ಸಾಗರ JMFC ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿ ನ್ಯಾಯಾಲಯ ಭಗವಾನ್ ವಿರುದ್ದ IPC ಸೆಕ್ಷನ್ 295(a) ರಡಿಯಲ್ಲಿ ಧಾರ್ಮಿಕ ಬಾವನೆಗೆ ದಕ್ಕೆ ಸಂಬಂದ ಕ್ರಿಮಿನಲ್ ಪ್ರಕರಣ ದಾಖಲು ಮಾಡಿತ್ತು. ಇದೇ ನ.2 ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗಲು ಮೈಸೂರು SP ಮೂಲಕ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಖುದ್ದು ಜಾರಿಯಾಗಿದ್ದರೂ ಭಗವಾನ್ ಆ ದಿನ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಇದರಿಂದ JMFC ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್  ಆದೇಶ ಮಾಡಿತ್ತು.

ಈ ಸಂಬಂಧ ಭಗವಾನ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಭಗವಾನ್ ಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿತ್ತು. 10 ದಿನಗಳ ಒಳಗಾಗಿ ಪೋಲಿಸ್ ಮುಂದೆ ಹಾಜರಾಗುವಂತೆ, ₹100000/ ವೈಯಕ್ತಿಕ ಬಾಂಡ್ ನೀಡುವಂತೆ 5 ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ  ಆದೇಶ ಮಾಡಿದ್ದರಿಂದ ಇಂದು ಭಗವಾನ್ ಸಾಗರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯ ವಿಚಾರಣೆ ನಡೆಸಿ ರೆಗ್ಯೂಲರ್ ಜಾಮೀನು ಅರ್ಜಿಯನ್ನು ಪುರಸ್ಕರಿಸಿದೆ.

ಸಾಹಿತಿ ಭಗವಾನ್ ಗೆ ಷರತ್ತು ಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಶಿವಮೊಗ್ಗ ಕೋರ್ಟ್‌ 

ಎಸ್‌ಎಫ್‌ಸಿ, ನಗರೋತ್ಥಾನ ಅನುದಾನ ಮಂಜೂರು: ಹಾಲಪ್ಪ
ಸಾಗರ:ಸ್ಥಳೀಯ ವಿಧಾನಸಭಾ ಕ್ಷೇತ್ರಕ್ಕೆ .10 ಕೋಟಿ ಎಸ್‌ಎಫ್‌ಸಿ ವಿಶೇಷ ಅನುದಾನ ಹಾಗೂ ನಗರೋತ್ಥಾನ ಯೋಜನೆಯಡಿ .16 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಎಚ್‌.ಹಾಲಪ್ಪ ಹೇಳಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸದರಿ ಅನುದಾನದಲ್ಲಿ ಸಾಗರ ನಗರಕ್ಕೆ .7 ಕೋಟಿ, ಜೋಗ್‌ ಕಾರ್ಗಲ್‌ಗೆ .2 ಕೋಟಿ ಮತ್ತು ಹೊಸನಗರಕ್ಕೆ .1 ಕೋಟಿ ಮೀಸಲಿಡಲಾಗಿದೆ. ಈ ಹಣದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಅಗತ್ಯವಿರುವ ಹಲವು ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುವುದು. ಎಲ್ಲ ಕಾಮಗಾರಿಗಳು ಬರುವ ಮಾಚ್‌ರ್‍ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಇದಲ್ಲದೆ ಶಿವಮೊಗ್ಗ ರಸ್ತೆಯಿಂದ ಸೊರಬ ರಸ್ತೆಯ ಬೈಪಾಸ್‌ ರಸ್ತೆ ಅಗಲೀಕರಣಕ್ಕೆ .3 ಕೋಟಿ ಮಂಜೂರಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಸಾಗರ - ಹೊಸನಗರ, ಸಾಗರ -ಸೊರಬ, ಪಟ್ಟಣದಿಂದ ಹುಲ್ಲತ್ತಿಯವರೆಗೆ ಎಲ್ಲ ರಸ್ತೆಗಳು ಮರುಡಾಂಬರೀಕರಣಗೊಳ್ಳಲಿದೆ. ಮಾರ್ಕೆಟ್‌ ರಸ್ತೆಯ ಅಗಲೀಕರಣ ಅತ್ಯಂತ ಭರದಿಂದ ಸಾಗಿದೆ. ಡಿ.25ರಂದು ಸಾಂಕೇತಿಕ ಉದ್ಘಾಟನೆ ಮಾಡುವ ಯೋಚನೆಯಿದೆ ಎಂದು ಹೇಳಿದರು.

ಸಾಗರ ಪಟ್ಟಣದಿಂದ ಕೆಳದಿ ಮಾರ್ಗ, ಭೀಮನಕೋಣೆ ಮಾರ್ಗ ಚತುಷ್ಪಥಗೊಳ್ಳಲಿದೆ. ಅಲ್ಲದೇ, ಸುಮಾರು 400 ಗ್ರಾಮೀಣ ರಸ್ತೆ ಕಾಮಗಾರಿಗಳು ನಡೆಯುತ್ತಿದೆ. ಮಾರಿಕಾಂಬ ಜಾತ್ರೆ ಸಲುವಾಗಿಯೂ ಅಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

BENGALURU CRIME: ಸುಂದರ ಕುಟುಂಬಕ್ಕೆ ಬಡತನದ ಶಾಪ: ಮಗಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ, ಉಪಾಧ್ಯಕ್ಷ ವಿ.ಮಹೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್‌, ಸದಸ್ಯರಾದ ಪ್ರೇಮ ಕಿರಣ್‌ ಸಿಂಗ್‌, ಆರ್‌.ಶ್ರೀನಿವಾಸ, ಮೈತ್ರಿ ಪಾಟೀಲ್‌, ಶ್ರೀರಾಮು, ದೇವೇಂದ್ರಪ್ಪ ಯಲಕುಂದ್ಲಿ, ವಿನಾಯಕ್‌ ರಾವ್‌, ರವೀಂದ್ರ ಬಸರಾಣಿ, ಸಂತೋಷ್‌ ಶೇಟ್‌, ಸರೋಜಮ್ಮ, ಭಾವನ ಇದ್ದರು.

Latest Videos
Follow Us:
Download App:
  • android
  • ios