Asianet Suvarna News Asianet Suvarna News

ಬಿಜೆಪಿ ಮುಖಂಡ ಅರುಣ್ ಪುತ್ತಿಲ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

ತಾನು ದೂರು ನೀಡಿದಂತೆ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂದು ಪುತ್ತೂರು ನಗರ ಮತ್ತು ಮಹಿಳಾ ಪೊಲೀಸರ ವಿರುದ್ಧ ಆರೋಪಿಸಿದ್ದು, ಪುತ್ತಿಲ ವಿರುದ್ಧ ಕ್ರಮಕ್ಕೆ ಒತ್ತಾಸಿದ ಸಂತ್ರಸ್ತ ಮಹಿಳೆ 

Complaint to Human Rights Commission against BJP leader Arun Puttila grg
Author
First Published Sep 7, 2024, 10:44 AM IST | Last Updated Sep 7, 2024, 10:44 AM IST

ಪುತ್ತೂರು(ಸೆ.07): ಬಿಜೆಪಿ ಮುಖಂಡ ಅರುಣ್ ಕುಮಾರ್‌ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ ಆರೋಪ ಮಾಡಿದ್ದ ಸಂತ್ರಸ್ತ ಮಹಿಳೆ ಇದೀಗ ರಾಜ್ಯ ಮಾನವ ಹಕ್ಕುಗಳ ಆಯೋಗದ ಕದ ತಟ್ಟಿದ್ದು, ಪುತ್ತಿಲ ಹಾಗೂ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ತಾನು ದೂರು ನೀಡಿದಂತೆ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂದು ಪುತ್ತೂರು ನಗರ ಮತ್ತು ಮಹಿಳಾ ಪೊಲೀಸರ ವಿರುದ್ಧ ಆರೋಪಿಸಿದ್ದು, ಪುತ್ತಿಲ ವಿರುದ್ಧ ಕ್ರಮಕ್ಕೆ ಒತ್ತಾಸಿದ್ದಾರೆ. 

Breaking: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಬಿಜೆಪಿ ಮುಖಂಡ ಅರುಣ್ ಪುತ್ತಿಲ ವಿರುದ್ಧ ಎಫ್ಐಆರ್‌

ಈಗಾಗಲೇ ಮಹಿಳೆ ದೂರಿನನ್ವಯ ಪುತ್ತಿಲ ವಿರುದ್ಧ ಅತ್ಯಾಚಾರ ಪ್ರಕರಣ (ಐಪಿಸಿ 376) ದಾಖಲಿಸಿರುವ ಪೊಲೀಸರು, ಸೆ.3ರಂದು ಬೆಂಗಳೂರು ಹೊಟೇಲ್‌ನಲ್ಲಿ ಮಹಜರು ನಡೆಸಿದ್ದು, ಸೆ.2ರಂದು ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಬಳಿಕ ನ್ಯಾಯಾಧೀಶರ ಮುಂದೆ ಸಂತ್ರಸ್ತೆಯ ಹೇಳಿಕೆ ಪಡೆದುಕೊಳ್ಳಲಾಗಿದೆ.

Latest Videos
Follow Us:
Download App:
  • android
  • ios