Ganja Case: ಬೆಳಗಾವಿಯ ಟಿಳಕವಾಡಿ ಸಿಪಿಐ, ಇಬ್ಬರು ಸಿಬ್ಬಂದಿ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು

ಗಾಂಜಾ ಪ್ರಕರಣದ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಹಣ ಪಡೆದು FIR ದಾಖಲಸದೇ ಬಿಟ್ಟು ಕಳಿಸಿದ್ದಾರೆ ಎಂದು ಟಿಳಕವಾಡಿ ಸಿಪಿಐ ದಯಾನಂದ ಶೇಗುಣಸಿ ವಿರುದ್ಧ ಶ್ರೀರಾಮಸೇನೆ ಹಿಂದೂಸ್ಥಾನ್ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ್ ಗಂಭೀರ ಆರೋಪ ಮಾಡಿದ್ದಾರೆ.

Complaint to belagavi city police commissioner against two staff members of Tilakwadi CPI  in Ganja Case gow

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಫೆ.3): ಗಾಂಜಾ ಪ್ರಕರಣದ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಹಣ ಪಡೆದು FIR ದಾಖಲಸದೇ ಬಿಟ್ಟು ಕಳಿಸಿದ್ದಾರೆ ಎಂದು ಟಿಳಕವಾಡಿ ಸಿಪಿಐ ದಯಾನಂದ ಶೇಗುಣಸಿ ವಿರುದ್ಧ ಶ್ರೀರಾಮಸೇನೆ ಹಿಂದೂಸ್ಥಾನ್ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ್ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಇಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಜನವರಿ 23ರ ಮಧ್ಯರಾತ್ರಿ 12.30ರ ಸುಮಾರಿಗೆ ಆರ್‌ಪಿಡಿ ವೃತ್ತದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಹಿಡಿದು ಟಿಳಕವಾಡಿ ಠಾಣೆಗೆ ಕರೆತಂದಿದ್ದು, ಅವರ ಬಳಿ ಹಣ ಪಡೆದು FIR ದಾಖಲಿಸದೇ ಬಿಟ್ಟು ಕಳಿಸಿದ್ದಾರೆಂದು ರಮಾಕಾಂತ ಕೊಂಡೂಸ್ಕರ್ ಆರೋಪಿಸಿದ್ದಾರೆ. 

ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ರೆಡ್‌ಹ್ಯಾಂಡ್ ಆಗಿ ಇಬ್ಬರು ಆರೋಪಿಗಳನ್ನು ಹಿಡಿದು ಟಿಳಕವಾಡಿ ಠಾಣೆಗೆ ಕರೆದೊಯ್ದು ಆರೋಪಿಗಳ ಫೋಟೋ ಹಾಗೂ ಜಪ್ತಿಯಾದ ಗಾಂಜಾ ಫೋಟೋ ತಗೆದು ಬಳಿಕ ಅವರ ಬಳಿ ಹಣ ಪಡೆದು FIR ದಾಖಲಿಸಿಲ್ಲ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಮೇಲಾಧಿಕಾರಿಗಳ ಗಮನಕ್ಕೂ ತರದೇ ಸಿಪಿಐ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿ ಹಣ ಪಡೆದು ಬಿಟ್ಟು ಕಳಿಸಿದ್ದಾರೆಂದು ಆರೋಪಿಸಿದ್ದಾರೆ.

ಚಾರ್ಮಾಡಿ ಘಾಟ್ ಭಯಾನಕತೆ ಸ್ವರೂಪ, ಸುಂದರ ಬೆಟ್ಟದ ಪ್ರಪಾತ ಕೊಲೆಯಾದ ಶವಗಳಿಗೆ ಆಶ್ರಯವೇ!

ಮೂರರಿಂದ ನಾಲ್ಕು ಕೆಜಿ ಗಾಂಜಾ ಜಪ್ತಿ:
ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಮಾಕಾಂತ ಕೊಂಡೂಸ್ಕರ್, 'ಪೊಲೀಸರು ದಾಳಿ ಮಾಡಿದಾಗ ಕನಿಷ್ಠ ಮೂರ್ನಾಲ್ಕು ಕೆಜಿ ಗಾಂಜಾ ಸಿಕ್ಕಿತ್ತು. ಬಳಿಕ ಜಪ್ತಿ ಮಾಡಿದ ಗಾಂಜಾ ಸಮೇತ ಆರೋಪಿಗಳಿಬ್ಬರನ್ನು ಟಿಳಕವಾಡಿ ಪೊಲೀಸ್ ಠಾಣೆಗೆ ಕರೆದೊಯ್ದು ಅವರ ಫೋಟೋ ತಗೆದು ಎಫ್ಐಆರ್ ದಾಖಲಿಸದೇ ಆರೋಪಿಗಳ ಬಿಟ್ಟು ಕಳಿಸಿದ್ದಾರೆ. ಹಣ ಪಡೆದೇ ಆ ಆರೋಪಿಗಳನ್ನು ಬಿಟ್ಟು ಕಳಿಸಿರಬೇಕಲ್ಲ. ನಾನು ಎಲ್ಲ ಪೊಲೀಸರ ವಿರುದ್ಧ ಆರೋಪಿಸುತ್ತಿಲ್ಲ. ಕೆಲ ಪೊಲೀಸ್ ಅಧಿಕಾರಿಗಳು ಈ ರೀತಿ ಕೆಲಸ ಮಾಡುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತರ ಭೇಟಿಯಾಗಿ ಇಂತಹ ಅಧಿಕಾರಿಗಳಿಂದ ಇಲಾಖೆಯ ಹೆಸರು ಹಾಳಾಗುತ್ತಿದೆ. ರಾಜಕಾರಣಿಗಳ ಬೆಂಬಲ ಪಡೆದು ಈ ರೀತಿ ಕೆಲಸ ಮಾಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.

Mangaluru: ಹಾಡಹಗಲೇ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಸಿಬ್ಬಂದಿಯ ಬರ್ಬರ ಹತ್ಯೆ!

ತನಿಖೆ ಬಗ್ಗೆ ಎಡಿಜಿಪಿ ಅಲೋಕ್‌ಕುಮಾರ್ ಟ್ಚೀಟ್:
ಇನ್ನು ಜಪ್ತಿಯಾದ ಗಾಂಜಾ ಹಾಗೂ ಆರೋಪಿಗಳ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 'NO CORRUPTION BELAGAVI' ಟ್ವಿಟರ್ ಪೇಜ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿತ್ತು‌. ಇದಕ್ಕೆ ರಿಪ್ಲೈ ಮಾಡಿರುವ ಎಡಿಜಿಪಿ ಅಲೋಕ್‌ಕುಮಾರ್ ಎಫ್ಐಆರ್ ದಾಖಲಾಗಿದ್ದು, ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಪಾತ್ರದ ಬಗ್ಗೆ ತನಿಖೆ ನಡೆಸಲಾಗುವುದು' ಎಂದು ಟ್ಚೀಟ್ ಮಾಡಿದ್ದಾರೆ.

Latest Videos
Follow Us:
Download App:
  • android
  • ios