Asianet Suvarna News Asianet Suvarna News

ಮಹಿಳೆಯ ವಾಟ್ಸಪ್‌ಗೆ ಹಸ್ತ ಮೈಥುನ ವಿಡಿಯೋ!

ಮಹಿಳೆಯ ವಾಟ್ಸಾಪ್‌ಗೆ ವ್ಯಕ್ತಿಯೋರ್ವ ಹಸ್ತಮೈಥುನದ ವಿಡಿಯೋ ಕಳಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ. 

Complaint Registered Against Man Who Sent Private Video
Author
Bengaluru, First Published Jan 11, 2020, 8:16 AM IST
  • Facebook
  • Twitter
  • Whatsapp

ಬೆಂಗಳೂರು[ಜ.11]:  ವಾಟ್ಸಪ್‌ ಮೂಲಕ ಮಹಿಳೆಯೊಬ್ಬರಿಗೆ ಹಸ್ತಮೈಥುನದ ವಿಡಿಯೋ ಕಳುಹಿಸಿ ಕಿರುಕುಳ ನೀಡುತ್ತಿದ್ದ ದುಷ್ಕರ್ಮಿ ವಿರುದ್ಧ ಜೆ.ಬಿ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜ.7ರಂದು ಸಂತ್ರಸ್ತೆಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಪ್‌ನಲ್ಲಿ ವಿಡಿಯೋ ಕಾಲ್‌ ಮಾಡಿದ್ದಾನೆ. ಆದರೆ ಅಪರಿಚಿತ ಸಂಖ್ಯೆಯಾದ ಕಾರಣಕ್ಕೆ ಅವರು ಕರೆ ಸ್ವೀಕರಿಸಿಲ್ಲ.

ಇದಾದ ಬಳಿಕ ಮತ್ತೆ ಆತನಿಂದ ಕರೆ ಬಂದಿದೆ. ಮರುದಿನ ಅದೇ ವ್ಯಕ್ತಿ ಹಸ್ತಮೈಥುನದ ವಿಡಿಯೋ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಅತ್ಯಾಚಾರ: 3 ವರ್ಷದ ಕಂದಮ್ಮನಿಗೆ ನಿತ್ಯ ನರಕ ಯಾತನೆ..

ಈ ಬಗ್ಗೆ ಸಂತ್ರಸ್ತೆ ದೂರು ನೀಡಿದ ಮೇರೆಗೆ ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು, ಮೊಬೈಲ್‌ ಸಂಖ್ಯೆ ಆಧರಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Follow Us:
Download App:
  • android
  • ios