ಬೆಂಗಳೂರು,[ಮೇ.09]: ಬೀದಿ ನಾಯಿ ಸತ್ತಿದ್ದಕ್ಕೆ ಎನ್​ಜಿಓ ಮತ್ತು ಡಾಕ್ಟರ್​ ವಿರುದ್ಧ ಬೈಯ್ಯಪ್ಪನಹಳ್ಳಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಸುಷ್ಮಾ ಎಂಟರ್ ಪ್ರೈಸಸ್ ಎಂಬ ಹೆಸರಿನ ಎನ್​ಜಿಓ ಕಂಪನಿ ಕೆಲದಿನಗಳ ಹಿಂದೆ ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿ ಸಂತಾನಹರಣ ಚಿಕಿತ್ಸೆಗೆಂದು ಜೂಲಿ ಎಂಬ 7 ತಿಂಗಳ ಬೀದಿ ನಾಯಿಯೊಂದನ್ನ ಹಿಡಿದುಕೊಂಡು ಹೋಗಿದ್ದರು. 

ಹುಂಜಕ್ಕೆ ಟಿಕೆಟ್ ಕೊಟ್ಟ ನಿರ್ವಾಹಕ, ಸರಿಯಾದ ಉತ್ತರನ್ನೇ ಕೊಟ್ಟ ಪ್ರಯಾಣಿಕ

ಬಳಿಕ ಅದಕ್ಕೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿ ಮತ್ತೆ ಅದೇ ಸ್ಥಳಕ್ಕೆ ತಂದು ಬಿಟ್ಟು ಹೋಗಿದ್ದರು. ಆದ್ರೆ ಕೆಲ ದಿನಗಳ ಬಳಿಕ ನಾಯಿ ಸಾವನ್ನಪ್ಪಿದೆ. ಇದ್ರಿಂದ ಆಕ್ರೋಶಗೊಂಡ ಸ್ಥಳೀಯರು ವೈದ್ಯರ ಯಡವಟ್ಟಿನಿಂದ ನಾಯಿ ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾರೆ. 

ಅಲ್ಲದೇ ಈ ಸಂಬಂಧ ನವೀನ ಕಾಮತ್ ಎಂಬುವರು, ಎನ್​ಜಿಓ ಮುಖ್ಯಸ್ಥ ಅರುಣಾ ರೆಡ್ಡಿ ಹಾಗೂ ಶಸ್ತ್ರ ಚಿಕಿತ್ಸೆ ಮಾಡಿದ ಡಾಕ್ಟರ್ ವಿರುದ್ಧ ದೂರು ಬೈಯ್ಯಪ್ಪನಹಳ್ಳಿ ಪೊಲೀಸ್​ ಠಾಣೆಯಲ್ಲಿ ದಾಖಲಿಸಿದ್ದಾರೆ.

ಇದೇ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ