* ನಿತ್ಯ ತಾಯಿಯೊಂದಿಗೆ ಚರ್ಚ್‌ಗೆ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದ ಬಾಲಕಿ* ತಾಯಿ ಎದುರೇ ದಿಢೀರ್‌ ಎಂದು ಬಾಲಕಿಗೆ ತಾಳಿ ಕಟ್ಟಿದ ಪಾದ್ರಿ* ಚರ್ಚ್‌ನ ಫಾದರ್‌ ವಿರುದ್ಧ ದೂರು

ಬಳ್ಳಾರಿ(ಜೂ.20): ದೇವರು ಹೇಳಿದ್ದಾನೆಂದು ನಂಬಿಸಿ ಪ್ರಾರ್ಥನೆಗೆಂದು ತೆರಳಿದ್ದ ಬಾಲಕಿಗೆ ಚರ್ಚ್‌ನ ಫಾದರ್‌ ಒಬ್ಬ ತಾಳಿ ಕಟ್ಟಿದ ಘಟನೆ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದಲ್ಲಿ ನಡೆದಿದ್ದು, ಆರೋಪಿ ಫಾದರ್‌ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 

ನಿತ್ಯ ಬಾಲಕಿ ತಾಯಿಯೊಂದಿಗೆ ಚರ್ಚ್‌ಗೆ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದಳು. ಮೇ 14ರಂದು ಚರ್ಚ್‌ಗೆ ತೆರಳಿದ್ದ ವೇಳೆ 33 ವರ್ಷದ ಫಾದರ್‌, ತಾಯಿ ಎದುರೇ ದಿಢೀರ್‌ ಎಂದು ತಾಳಿಕಟ್ಟಿದ್ದಾನೆ. ‘ಆ ದೇವರು ತಾಳಿ ಕಟ್ಟುವಂತೆ ಆದೇಶ ನೀಡಿದ್ದಾನೆ’ ಎಂದು ಹೇಳಿದ್ದಾನೆ. ಇದರಿಂದ ವಿಚಲಿತಳಾದ ತಾಯಿ ತಮ್ಮ ಸ್ವಗ್ರಾಮವಾದ ಬಲಕುಂದಿಗೆ ತೆರಳಿ ಕುಟುಂಬ ಸದಸ್ಯರು ಹಾಗೂ ಹಿರಿಯರಿಗೆ ತಿಳಿಸಿದ್ದಾಳೆ. 

ಬಳ್ಳಾರಿ: ಯುವತಿಯೊಂದಿಗೆ ಪರಾರಿ ಕೇಸ್‌ ಮಾಸುವ ಮುನ್ನವೇ ಮತ್ತೊಬ್ಬ ಫಾದರ್‌ನ ಕರ್ಮಕಾಂಡ..!

ಕೊನೆಗೆ ಚರ್ಚ್‌ನ ಫಾದರ್‌ ವಿರುದ್ಧ ದೂರು ನೀಡಲು ನಿರ್ಧರಿಸಿದ್ದು, ತೆಕ್ಕಲಕೋಟೆ ಠಾಣೆಗೆ ಆಗಮಿಸಿ ಶುಕ್ರವಾರ ದೂರು ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಸಿರಿಗೇರಿ ಠಾಣೆಗೆ ವರ್ಗಾಯಿಸಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.