ಹುಬ್ಬಳ್ಳಿ(ಡಿ.13):  ಮನೆ ಬಿಟ್ಟುಕೊಡುವಂತೆ ಇಲ್ಲಿನ ಹಳೆ ಹುಬ್ಬಳ್ಳಿ ಕೃಷ್ಣಾಪುರ ಗ್ರಾಮ ಆನಂದನಗರದ ಚಂದ್ರಶೇಖರ ಗುರುಪಾದಪ್ಪ ಬಿರಾದಾರ ಎಂಬುವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಹಳೆ ಹುಬ್ಬಳ್ಳಿ ಕಾನ್‌ಸ್ಟೇಬಲ್‌ ಲಕ್ಷ್ಮಣ ನಾಯ್ಕ ಮೇಲೆ ಅದೇ ಪೊಲೀಸ್‌ ಠಾಣೆಯಲ್ಲಿ ಪ್ರಮುಖ ಆರೋಪಿಯಾಗಿ ಪ್ರಕರಣ ದಾಖಲಾಗಿದೆ.

ಶ್ರೀಕಾಂತ ಕೊರಂಡವಾಡ, ಮಲ್ಲವ್ವ ಕೊರಂಡವಾಡ ಹಾಗೂ ಬಸವರಾಜ ಬುರ್ಲಿ ಇತರ ಆರೋಪಿಗಳು. ಶ್ರೀಕಾಂತ, ಮಲ್ಲವ್ವ ಮೂರು ವರ್ಷ ಲೀಸ್‌ ಮೇಲೆ ಗುರುಪಾದಪ್ಪ ಅವರ ಮನೆಯಲ್ಲಿ ಇದ್ದರು. ಅವಧಿ ಮುಗಿದರೂ ಮನೆಯನ್ನು ಬಿಟ್ಟುಕೊಟ್ಟಿಲ್ಲ.

ತಿಪ್ಪರಲಾಗ ಹಾಕಿದ್ರೂ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲ್ಲ: ಸಿದ್ದರಾಮಯ್ಯ

ಬದಲಾಗಿ ಬಸವರಾಜ ಜತೆ ಸೇರಿ ಕಾನ್‌ಸ್ಟೇಬಲ್‌ ಲಕ್ಷ್ಮಣ ಸಹಕಾರದಲ್ಲಿ ಗೂಂಡಾಗಳಿಂದ ಜೀವ ಬೆದರಿಕೆ, ಖೊಟ್ಟಿದಾಖಲೆ ಸಿದ್ಧಪಡಿಸಿ ಸಹಿ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ ಹಾಗೂ ಕ್ರಿಮಿನಲ್‌ ಕೇಸ್‌ ಹಾಕಿಸುವುದಾಗಿ ಹೆದರಿಸಿದ್ದಾರೆ ಎಂದು ಗುರುಪಾದಪ್ಪ ದೂರು ನೀಡಿದ್ದಾರೆ.