ಬೀದರ್(ಫೆ.21):  ಅಧಿಕಾರದ ದಾಹಕ್ಕಾಗಿ ದುಷ್ಟರು ಆಸ್ಪತ್ರೆಯಲ್ಲಿದ್ದ ಆಕ್ಸಿಜನ್ ಪೈಪ್ ಕತ್ತರಿಸಿದ ಘಟನೆ ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹೌದು, ಆದರೆ, ಆಸ್ಪತ್ರೆಯ ನಿರ್ದೇಶಕರ ಸಮಯಪ್ರಜ್ಞೆಯಿಂದ ನಾಲ್ಕು ರೋಗಿಗಳ ಜೀವ ಉಳಿದಿದೆ.

ಈ ಮೂಲಕ ಅಮಾಯಕರನ್ನ ಬಲಿ ಪಡೆಯಲು ಹುನ್ನಾರ ನಡೆಯುತ್ತಿದೆಯಾ ಎಂಬ ಪ್ರಶ್ನೆಗಗಳು ಕಾಡಲಾರಂಭಿಸಿವೆ. ಬ್ರಿಮ್ಸ್ ಆಸ್ಪತ್ರೆಯ ವೈದ್ಯರ ಒಳ ಜಗಳ ಈಗ ರೋಗಿಗಳ ಪಾಲಿಗೆ ಮೃತ್ಯು ಆಗುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ. ಹೀಗಾಗಿ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಬ್ಬು ನಾಟಿ ಮಾಡಿ ಟ್ರ್ಯಾಕ್ಟರ್‌ ಓಡಿಸಿದ ಕೃಷಿ ಸಚಿವ ಪಾಟೀಲ್‌

ವೈದ್ಯರುಗಳ ನಡುವೆ ಪ್ರಭಾವಿ ಹುದ್ದೆಗಾಗಿ ಪೈ ಪೋಟಿ ನಡೆಯುತ್ತಿದ್ದು ಹೆಸರು ಕೆಡಿಸುವ ಹುನ್ನಾರದಿಂದ ಇಂತಹ ಕೃತ್ಯವೆಸಗಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ನಗರದ  ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರಿಂದ ತನಿಖೆ ಮುಂದುವರೆದಿದೆ.