Asianet Suvarna News Asianet Suvarna News

ಅನೈತಿಕ ಮಾರ್ಗದಲ್ಲಿ ಅಧಿಕಾರ ಪಡೆಯಲು ಪೈಪೋಟಿ

ಸಮಾಜದಲ್ಲಿ ಇನ್ನೊಬ್ಬರ ಬದುಕನ್ನು ಕಸಿದುಕೊಂಡು ಅನೈತಿಕ ಮಾರ್ಗದಲ್ಲಿ ಶ್ರೀಮಂತರಾಗುವ ಮತ್ತು ಅಧಿಕಾರವನ್ನು ಪಡೆಯುವ ರೀತಿಯಲ್ಲಿ ಕೆಟ್ಟಪೈಪೋಟಿ ಹೆಚ್ಚಾಗುತ್ತಿದೆ ಎಂದು ಲೋಕಾಯುಕ್ತದ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.

Competition for power through unethical means snr
Author
First Published Mar 21, 2023, 7:15 AM IST

  ಮೈಸೂರು :  ಸಮಾಜದಲ್ಲಿ ಇನ್ನೊಬ್ಬರ ಬದುಕನ್ನು ಕಸಿದುಕೊಂಡು ಅನೈತಿಕ ಮಾರ್ಗದಲ್ಲಿ ಶ್ರೀಮಂತರಾಗುವ ಮತ್ತು ಅಧಿಕಾರವನ್ನು ಪಡೆಯುವ ರೀತಿಯಲ್ಲಿ ಕೆಟ್ಟಪೈಪೋಟಿ ಹೆಚ್ಚಾಗುತ್ತಿದೆ ಎಂದು ಲೋಕಾಯುಕ್ತದ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.

ಗ್ಲೋಬಲ್‌ ಎಜುಕೇಶನ್‌ ಟ್ರಸ್ಟ್‌ ಹಾಗೂ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನವು ಹೂಟಗಳ್ಳಿಯ ದಕ್ಷ ಕಾಲೇಜು ಸಭಾಂಗಣದಲ್ಲಿ ಪಿ. ಜಯಚಂದ್ರರಾಜು ಅವರ ‘ಇಂಡಿಯಾ ಅಂಡ್‌ ದಿ ಯುನೈಟೆಡ್‌ ನೇಷನ್ಸ್‌’ ಎಂಬ ಇಂಗ್ಲಿಷ್‌ ಪುಸ್ತಕವನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಕಾನೂನಿನ ಚೌಕಟ್ಟಿನಲ್ಲಿ ಶ್ರೀಮಂತರಾದರೆ, ಅಧಿಕಾರ ಪಡೆದರೆ ಅಪಾಯಕಾರಿ ಅಲ್ಲ. ಆದರೆ, ದುರಾಸೆಯ ಕಾರಣಕ್ಕೆ ತುಂಬಾ ಮಂದಿ ಅಡ್ಡ ಮಾರ್ಗ ಹಿಡಿದಿದ್ದಾರೆ. ಜೈಲಿಗೆ ಹೋಗಿ ಬಂದ ಭ್ರಷ್ಟಾಚಾರಿಗಳನ್ನು ಹಾರ ಹಾಕಿ ಭರ್ಜರಿಯಾಗಿ ಸ್ವಾಗತಿಸಿದರೆ ಕೆಟ್ಟಸಂದೇಶ ಕೊಡುತ್ತದೆ. ಯಾವುದೇ ಮುಲಾಜಿಲ್ಲದೆ ತಪ್ಪು ಮಾಡಿದವರನ್ನು ಸಮಾಜ ಬಹಿಷ್ಕರಿಸಬೇಕು ಎಂದು ಅವರು ಕರೆ ನೀಡಿದರು.

ತೃಪ್ತಿ ಎಂಬುದನ್ನು ಕಂಡುಕೊಳ್ಳದಿದ್ದರೆ ನೈತಿಕ ಜೀವನವೆಂಬುದು ಅಸಾಧ್ಯವಾಗುತ್ತದೆ. ಇತರರ ಕುರಿತು ಮಾನವೀಯತೆಯೇ ನಮ್ಮ ಬದುಕಿನ ಚಾಲಕ ಶಕ್ತಿಯಾಗಬೇಕು. ಇವೆರಡನ್ನೂ ಸಾಧಿಸದೇ ಮಾಡುವ ಕೆಲಸಗಳು ಸಮಾಜಕ್ಕೆ ಅಹಿತವಾಗುವ ಸಾಧ್ಯತೆಯೇ ಹೆಚ್ಚು. ಯುವಜನರು, ವಿದ್ಯಾರ್ಥಿಗಳು ತೃಪ್ತಿ ಮತ್ತು ಮಾನವೀಯತೆಯ ಗುಣ ಬೆಳೆಸಿಕೊಳ್ಳಬೇಕು ಎಂದರು.

ಇಡೀ ಸಮಾಜ ಸೇವೆಗಾಗಿ ಕಾಯುತ್ತಿದೆ. ವಿದ್ಯಾರ್ಥಿಗಳು ಈ ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕು. ಕುವೆಂಪು ಅವರು ಪ್ರತಿಪಾದಿಸಿದ ವಿಶ್ವಮಾನವ ಮೌಲ್ಯವನ್ನು ಪಾಲಿಸುವ ಮೂಲಕ ಶಾಂತಿ ಮತ್ತು ಸೌಹಾರ್ದ ವಾತಾವರಣ ನಿರ್ಮಿಸಲು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.

ವಿಧಾನ ಪರಿಷತ್ತು ಮಾಜಿ ಸದಸ್ಯ ಡಿ.ಎಸ್‌. ವೀರಯ್ಯ ಮಾತನಾಡಿ, ರಾಜಕೀಯ, ಮಾಧ್ಯಮ, ಸಾಹಿತ್ಯ ವ್ಯಾಪಾರೀಕರಣಗೊಂಡಿವೆ. ಅತಿಯಾದ ಆಸೆಯಿಂದ ಸಮಾಜ ರೋಗಗ್ರಸ್ತವಾಗಿದೆ. ಜಾತಿ ವ್ಯವಸ್ಥೆಯಿಂದ ಕೊಳೆತು ನಾರುತ್ತಿದೆ. ಆದರ್ಶಗಳು ಕಣ್ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಬುದ್ಧ, ಬಸವ, ಅಂಬೇಡ್ಕರ್‌, ಕುವೆಂಪು ಅವರ ಆದರ್ಶಗಳು ನಮಗೆ ಬೆಳಕಾಗಿವೆ ಎಂದರು.

ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಸ್‌.ಎ. ಮೋಹನ್‌ಕೃಷ್ಣ ಪುಸ್ತಕ ಕುರಿತು ಮಾತನಾಡಿದರು. ಸಾಹಿತಿ ಟಿ. ಸತೀಶ್‌ ಜವರೇಗೌಡ, ಮೂಗೂರು ಮಧು ದೀಕ್ಷಿತ್‌, ಪಿ. ಜಯಚಂದ್ರರಾಜು, ನಟಿ ಭಾರತಿ ಹೆಗಡೆ, ಸಮಾಜ ಸೇವಕ ಗೋವಿಂದಹಳ್ಳಿ ಕೃಷ್ಣೇಗೌಡ, ಪ್ರತಿಷ್ಠಾನದ ಅಧ್ಯಕ್ಷ ಗುಣವಂತ ಮಂಜು ಇದ್ದರು.

ಲೋಕಾಯುಕ್ತ ಅಧಿಕಾರ ಚಲಾಯಿಸಬೇಕು

  ಮೈಸೂರು :  ಲೋಕಾಯುಕ್ತಕ್ಕೆ ಈಗಲೂ ಪರಮಾಧಿಕಾರ ಇದೆ. ಅದರ ಜವಾಬ್ದಾರಿ ವಹಿಸಿಕೊಳ್ಳುವವರು ತಮ್ಮ ಅಧಿಕಾರವನ್ನು ಚಲಾಯಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಲೋಕಾಯಕ್ತಕ್ಕೆ ಅಧಿಕಾರ ಈಗಲೂ ಇದೆ. ಆದರೆ, ಸರ್ಕಾರ ಅವರಿಗೆ ಬೇಕಾದವರನ್ನು ಲೋಕಾಯುಕ್ತಕ್ಕೆ ಕಳುಹಿಸಲಾಗುತ್ತಿದೆ. ಅಧಿಕಾರದಲ್ಲಿ ಇದ್ದವರಿಗೆ ಬಲಿಷ್ಠ ಲೋಕಾಯುಕ್ತ ಬರುವುದು ಬೇಕಿಲ್ಲ. ಕರ್ನಾಟಕದ ಲೋಕಾಯುಕ್ತಕ್ಕೆ ಹೋಲಿಸಿದರೆ ದೇಶದಲ್ಲಿ ಬೇರೆ ಬಲಿಷ್ಠ ಸಂಸ್ಥೆಯೇ ಇಲ್ಲ ಎಂದರು.

ಕರ್ನಾಟಕದ ಲೋಕಾಯುಕ್ತಕ್ಕೆ ಬರುವ ಮೊದಲು ನಾನು ಕೂಪ ಮಂಡೂಕನಂತಿಂದ್ದೆ. ಅಲ್ಲಿಗೆ ಬಂದ ಮೇಲೆ ಸಮಾಜದಲ್ಲಿ ಎಂತಹ ಕಠಿಣ ಸಮಸ್ಯೆ ಇವೆ ಎನ್ನೋದು ಗೊತ್ತಾಯ್ತು. ಸಮಾಜದಲ್ಲಿ ಶ್ರೀಮಂತನಾಗಿದ್ದರೆ ಸಾಕು ಅವನಿಗೆ ಸಮಾಜ ಸಲಾಂ ಹೊಡೆಯುತ್ತದೆ. ಜೈಲಿಗೆ ಹೋಗಿ ಬರುವವರಿಗೆ ಇವತ್ತು ಅದ್ದೂರಿ ಸ್ವಾಗತ ಸಿಗುತ್ತದೆ. ಸಮಾಜದಲ್ಲಿ ಇವತ್ತು ಪ್ರಮಾಣಿಕತೆಗೆ ಬೆಲೆ ಇಲ್ಲ. ಒಂದು ದುರಾಸೆಯ ರೋಗ, ಮತ್ತಷ್ಟುಬೇಕು ಎನ್ನುವ ಆಸೆ. ಇಂದು ಮನುಷ್ಯನಿಗೆ ದುರಾಸೆ ಹೆಚ್ಚಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಅವರು ಅಸಮಾಧಾಮ ವ್ಯಕ್ತಪಡಿಸಿದರು.

50ರ ದಶಕದಲ್ಲಿ ಜೀಪ್‌ ಹಗರಣದಲ್ಲಿ ನಮ್ಮ ದೇಶಕ್ಕಾದ ನಷ್ಟನೂರಾರು ಕೋಟಿ. ನಂತರ ಕಾಮನ್‌ವೆಲ್ತ್‌ ಗೇಮ್‌ ಹಗರಣ, 2ಜಿ ಹಗರಣ ಬಂತು, ಕಲ್ಲಿದ್ದಲು ಹಗರಣ. ಹಗರಣಗಳಿಂದ ಲಕ್ಷಾಂತರ ಕೋಟಿ ರೂಪಾಯಿ ನಷ್ಟವಾಯಿತು. ಈಗ ಶೇ.40 ಕಮಿಷನ್‌ ಸರ್ಕಾರ ಅಂತಾರೆ, ಮೊದಲು ಶೇ.10 ಅಂತಿದ್ರು. ಅಡಿಕೆ ಕದ್ರೂ ಕಳ್ಳತನ, ಆನೆ ಕದ್ರೂ ಕಳ್ಳತನ. ಚೇನಾದಲ್ಲಿ ಭ್ರಷ್ಟರಿಗೆ ಗಲ್ಲು ಶಿಕ್ಷೆಯಿದೆ,

Follow Us:
Download App:
  • android
  • ios