ರಾಮನಗರ [ಡಿ.17]:  ರಾಮನಗರ ಜಿಲ್ಲಾ ಪಂಚಾಯತ್ ಗೆ ಇಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅಧ್ಯಕ್ಷತೆಯಲ್ಲಿ  ಚುನಾವಣೆ ನಡೆಯುತ್ತಿದೆ. 

ಅಧಿಕಾರ ಬಿಟ್ಟುಕೊಡಬೇಕಿದ್ದ ಹಿನ್ನೆಲೆಯಲ್ಲಿ ಉಪಾಧ್ಯಕ್ಷೆಯಾಗಿದ್ದ ವೀಣಾಕುಮಾರಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. 

ಈಗಾಗಲೇ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸಿನಿಂದ ತೀವ್ರ ಪೈಪೋಟಿ ನಡೆಸಲಾಗುತ್ತಿದೆ. ಡಿಕೆ ಸಹೋದರರ ಕ್ಷೇತ್ರವಾದ ಇಲ್ಲಿ ಚುನಾವಣೆ ಪ್ರತಿಷ್ಟೆಯ ಪ್ರಶ್ನೆಯೂ ಆಗಿದೆ. 

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸಿನಿಂದ ಆಕಾಂಕ್ಷಿಗಳಾಗಿ ಮಾಗಡಿಯ ನಾಗರತ್ನ, ಕನಕಪುರದ ಜಯರತ್ನ, ಉಷಾ  ನಡುವೆ ತೀವ್ರ ಪೈಪೋಟಿ ಇದ್ದು, ಉಷಾ ಹಾಗೂ ಜಯರತ್ನ ಅವರನ್ನು ಅಂತಿಮಗೊಳಿಸಲಾಗಿದೆ. ಇಬ್ಬರಲ್ಲಿ  ಓರ್ವರಿಗೆ ಉಪಾಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆ ಹೆಚ್ಚಾಗಿದೆ. 

ಗೂಂಡಾವರ್ತನೆ ಆರೋಪ : ಜೆಡಿಎಸ್ ಶಾಸಕರ ರಾಜೀನಾಮೆಗೆ ಹೆಚ್ಚಿದ ಒತ್ತಾಯ...

ಸೋಮವಾರ ರಾಮನಗರ ಜಿಲ್ಲಾ ಪಂಚಾಯತ್ ಚುನಾವಣೆ ಸಂಬಂಧ ಬೆಂಗಳೂರಿನಲ್ಲಿ ಸಭೆ ನಡೆಸಿ ಇಬ್ಬರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದ್ದು ಇಂದು ನಡೆಯುವ ಚುನಾವಣೆ ಯಾರಿಗೆ ಸ್ಥಾನ ಎನ್ನುವುದನ್ನು ನಿರ್ಧರಿಸಲಿದೆ. 

ಜಿಪಂ ಅಧ್ಯಕ್ಷರ ಆಯ್ಕೆಯಂತೆ ಉಪಾಧ್ಯಕ್ಷರ ಆಯ್ಕೆಯೂ ಸಹ ಡಿ.ಕೆ. ಸಹೋದರರ ಅಣತಿಯಂತೆಯೇ ನಡೆಯಲಿದೆ.  ಉಪಾಧ್ಯಕ್ಷರ ಆಯ್ಕೆಯೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.