Kolar : ಮಾವು ಬೆಳೆಗಾರರಿಗೆ ನಷ್ಟ ಪರಿಹಾರದ ಭರವಸೆ
ರೈತರಿಗೆ ಯಾವುದೆ ಕಾರಣಕ್ಕೂ ಅನ್ಯಾಯ ಆಗಲು ಸರ್ಕಾರ ಬಿಡುವುದಿಲ್ಲ ಅವರ ಹಿತ ಕಾಯುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜು ಭರವಸೆ ನೀಡಿದರು.
ಶ್ರೀ ನಿವಾಸಪುರ (ಜ. 06): ರೈತರಿಗೆ ಯಾವುದೆ ಕಾರಣಕ್ಕೂ ಅನ್ಯಾಯ ಆಗಲು ಸರ್ಕಾರ ಬಿಡುವುದಿಲ್ಲ ಅವರ ಹಿತ ಕಾಯುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜು ಭರವಸೆ ನೀಡಿದರು.
ತಾಲೂಕು ತಹಸೀಲ್ದಾರ್ ಕಚೇರಿ ಅವರಣದಲ್ಲಿ ಕಂದಾಯ ಇಲಾಖೆ ತೋಟಗಾರಿಕೆ ಇಲಾಖೆ ಬೆಳೆ ವಿಮೆ ಸಂಸ್ಥೆ ಹಾಗೂ ಮಾವು ಬೆಳೆಗಾರರು ಮತ್ತು ರೈತ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಅನ್ನದಾತನ ಕಷ್ಟಕ್ಕೆ ಜಿಲ್ಲಾಡಳಿತ ಸದಾ ಸ್ಪಂದಿಸುತ್ತದೆ. ತಾಂತ್ರಿಕ ಕಾರಣಗಳಿಂದ ಬೆಳೆ ವಿಮಾ ಸಂಸ್ಥೆ ವತಿಯಿಂದ ನೀಡಬೇಕಿದ್ದ ಮಾವು ಬೆಳೆಗಾರರ ಕ್ಲೇಮ್ ತಡವಾಗುತ್ತಿರುವ ಕುರಿತಂತೆ ವಿಮಾ ಸಂಸ್ಥೆ ಪ್ರತಿನಿಧಿ ಸಭೆಯಲ್ಲಿ ಭಾಗವಹಿಸಿ ಹೇಳಿದ್ದಾರೆ. ಸಂಸ್ಥೆಯ ನಿಯಮಗಳ ಅನ್ವಯ ತಾಂತ್ರಿಕ ಮಾನದಂಡಗಳನ್ನು ಇಟ್ಟುಕೊಂಡು ಫಸಲ್ ಭೀಮಾದಡಿ ಬೆಳೆ ವಿಮೆ ನೋಂದಣಿ ಮಾಡಿದ ಬೆಳೆಗಾರರಿಗೆ ಫಸಲು ನಷÜ್ಟದ ಕ್ಲೇಮ್ ಹಣ ಬಿಡುಗಡೆ ಮಾಡಿದೆ. ಈ ಬಗ್ಗೆ ಸಂಸ್ಥೆಯ ಮಾನದಂಡಗಳ ಬದಲಾವಣೆ ಕುರಿತಂತೆ ಚರ್ಚಿಸುವುದಾಗಿ ತಿಳಿಸಿದರು.
ತಹಶೀಲ್ದಾರ್ ಶೀರಿನ್ ತಾಜ್ ಮಾತನಾಡಿ, ಕಳೆದ ವಷÜರ್ ಮಾವು ಫಸಲು ಉದುರಿ ಹೋಗಿದ್ದ ಬೆಳೆ ನಷÜ್ಟದ ಹಣ ಬಿಡುಗಡೆ ಸಂಬಂದ ಹಣ ಬಾರದಿರುವ ಬೆಳೆಗಾರರಿಗೆ ಶೀಘ್ರದಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದರು.
ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಮಾತನಾಡಿ, ತಾಂತ್ರಿಕ ಲೆಕ್ಕಾಚಾರದ ಮಾನದಂಡಗಳನ್ನು ಇಟ್ಟುಕೊಂಡು ರೈತರಿಗೆ ಬೆಳೆ ವಿಮೆ ಹಣ ನೀಡದೆ ಸತಾಯಿಸುವುದು ಸರಿಯಲ್ಲ. ಈ ಬಗ್ಗೆ ಬೆಳೆ ವಿಮೆ ಸಂಸ್ಥೆ ನಿಮ್ಮ ನಿಯಮಾವಳಿಗಳನ್ನು ಬದಿಗಿಟ್ಟು ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಕಾರಿಗಳು ನೀಡುವಂತ ಮಾನದಂಡಗಳ ಅಧಾರದಂತೆ ಬೆಳೆ ವಿಮಾ ಕ್ಲೇಮ್ ಬಿಡುಗಡೆ ಮಾಡುವಂತೆ ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಮಾತನಾಡಿ, ಸರ್ಕಾರ ಮಾವು ನಷÜ್ಟದ ಹಣ ಪಾವತಿಸುವಲ್ಲಿ ತಾರತಮ್ಯ ಎಸಗುತ್ತಿದೆ, ಮಾವು ಬೆಳೆ ವಿಮೆಗೆ ಕಟ್ಟಿದ್ದ ವಿಮೆ ನೀಡುವಲ್ಲಿ ನೂರೆಂಟು ಸಬೂಬು ಹೇಳುತ್ತಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ತೋಟಗಾರಿಕೆ ಹಿರಿಯ ಸಹಾಯಕ ನಿರರ್ದೇಶಕ ಶ್ರೀನಿವಾಸನ್, ಮುಳಬಾಗುಲು ಡಿವೈಎಸ್ಪಿ ಜಯಶಂಕರ್,ಇನ್ಸೆ$್ಪಕ್ಟರ್ ನಾರಯಣಸ್ವಾಮಿ, ಕಂದಾಯ ನೀರಿಕ್ಷಕ ಮುನಿರೆಡ್ಡಿ, ರೈತ ಸಂಘದ ನಂಬಿಹಳ್ಳಿ ಶ್ರೀರಾಮರೆಡ್ಡಿ, ಬೈಚೇಗೌಡ, ಹಿರಿಯ ಕಾರ್ಮಿಕ ಮುಖಂಡ ಪಿ.ಆರ್.ಸೂರಿ, ಕಾರ್ಮಿಕ ಮುಖಂಡ ಕಾಶಿಂಗಡ್ದ ಫಾರೂಖ್ ಹಮಾಲಿ ಸಂಘದ ಮೂರ್ತಿ ಮುಂತಾದವರು ಇದ್ದರು.
ನೂರಾರು ರೈತರಿಂದ ಮುತ್ತಿಗೆ
ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ಮಾವು ಬೆಳೆಗಾರರು ಪಟ್ಟಣದ ಮುಳಬಾಗಿಲು ವೃತ್ತದಿಂದ ತಾಲೂಕು ಕಚೇರಿವರೆಗೂ ಪಾದಯಾತ್ರೆ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಕೋಲಾರ ಜಿಲ್ಲಾಕಾರಿ ವಿರುದ್ದ ಘೋಷÜಣೆಗಳನ್ನು ಕೂಗುತ್ತ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವ ತನಕ ಪ್ರತಿಭಟನೆ ಹಿಂಪಡಿಯುವದಿಲ್ಲವೆಂದು ಪಟ್ಟು ಹಿಡಿದು ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ತೀವ್ರತೆ ಅರಿತ ಪೋಲಿಸ್ ಇಲಾಖೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಶ್ರೀನಿವಾಸಪುರಕ್ಕೆ ಆಗಮಿಸಿ ರೈತರ ಮನವಿ ಸ್ವೀಕರಿಸಿದರು.
ಇದು ಅತ್ಯಂತ ದುಬಾರಿ ಮಾವು
ಜೈಪುರ (ಜುಲೈ 21): ಶುಕ್ರವಾರ (ಜುಲೈ 22, 2022) ರಾಷ್ಟ್ರೀಯ ಮಾವಿನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ರಾಜಸ್ಥಾನದಲ್ಲಿ ಬೆಳೆಯುವ ಅಂತಹ ಮಾವಿನ ಬಗ್ಗೆ ನಾವು ನಿಮಗೆ ಹೇಳುತ್ತೇವೆ ಅದು ಬಹಳ ವಿಶೇಷವಾದ ಮಾವಿನ ಹಣ್ಣು. ಈ ಮಾವು ಎಷ್ಟು ವಿಶೇಷ ಎಂದರೆ ಎರಡು ಕಿಲೋಗೆ ಮನೆ ಖರೀದಿಸಬಹುದು. ಕೋಟಾದಲ್ಲಿ ವಾಸವಾಗಿರುವ ರೈತ ಕಿಶನ್ ಸುಮನ್ ಅವರ ಹೊಲಗಳಲ್ಲಿ ಈ ವಿಶೇಷ ಮಾವು ಬೆಳೆಯಲಾಗುತ್ತಿದೆ. ಈ ಮಾವಿನ ಹೆಸರು ಮಿಯಾಜಾಕಿ ಮಾವು. ಇದು ವಿಶ್ವದ ಅತ್ಯಂತ ದುಬಾರಿ ಮಾವು ಎಂದು ಪರಿಗಣಿಸಲಾಗಿದೆ. ಕೋಟಾದಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ತನ್ನ ಗ್ರಾಮದಲ್ಲಿ ಕೃಷಿ ಮಾಡುತ್ತಿರುವ ಈ ರೈತ, ತನ್ನ ಕೃಷಿಯಿಂದ ರಾಜ್ಯದಲ್ಲಿ ಅನೇಕ ಬಹುಮಾನಗಳನ್ನು ಗೆದ್ದಿದ್ದಾನೆ. ಈ ರೈತ ಕೇವಲ ಎರಡು ವರ್ಷಗಳಲ್ಲಿ ಫಲ ನೀಡಲು ಆರಂಭಿಸುವ ಇಂತಹ ತಳಿಯನ್ನು ಸಿದ್ಧಪಡಿಸಿದ್ದಾನೆ. ರಾಷ್ಟ್ರೀಯ ಮಾವು ದಿನದಂದು ಈ ಮಿಯಾಜಾಕಿ ಮಾವು ಏಕೆ ವಿಶೇಷ ಇಲ್ಲಿದೆ ವರದಿ.
ಇದನ್ನು ತಳಿಯ ಮಾವನ್ನು ಸುಮಾರು ಮೂವತ್ತರಿಂದ ನಲವತ್ತು ವರ್ಷಗಳ ಹಿಂದೆ ಜಪಾನ್‌ನ ಮಿಯಾಜಾಕಿ ನಗರದಲ್ಲಿ ಕಂಡುಹಿಡಿಯಲಾಯಿತು, ಇದರಿಂದಾಗಿ ಇದಕ್ಕೆ ಮಿಯಾಜಾಕಿ ಎಂಬ ಹೆಸರು ಬಂದಿದೆ. ಆದರೆ ಅದನ್ನು ವಿಶೇಷ ಋತುವಿನಲ್ಲಿ ಮಾತ್ರವೇ ಈ ಮಾವು ಬೆಳೆಯುತ್ತದೆ. ಬಿಸಿಯಾದ ವಾತಾವರಣದಲ್ಲಿ ಈ ಮಾವು ಬೆಳೆಯೋದಿಲ್ಲ.