Asianet Suvarna News Asianet Suvarna News

ಕೋವಿಡ್ ಇಳಿಕೆ : ಕಾಸರಗೋಡು - ದ.ಕ. ಪ್ರವೇಶಕ್ಕೆ ಟೆಸ್ಟ್‌ ವಿನಾಯ್ತಿಗೆ ಮನವಿ

  • ಕಾಸರಗೋಡಿನ ಗಡಿನಾಡಿಗರಿಗೆ ಆರ್‌ಟಿಪಿಸಿಆರ್‌ ಟೆಸ್ಟಿನಿಂದ ವಿನಾಯಿತಿ ನೀಡುವಂತೆ ಮನವಿ
  • ಕಾಸರಗೋಡು ಜಿಲ್ಲೆಯ ದ.ಕ. ಅವಲಂಬಿತ ಗಡಿನಾಡಿಗರ ಸಹಯಾತ್ರಿ ತಂಡದಿಂದ ಜಿಲ್ಲಾಧಿಕಾರಿಗೆ ಗುರುವಾರ ಮನವಿ 
commuters seek Covid test exemption to enter Dakshina kannada From kasargodu snr
Author
Bengaluru, First Published Oct 2, 2021, 3:52 PM IST

 ಮಂಗಳೂರು (ಅ.02) :  ಕಾಸರಗೋಡಿನ (Kasaragodu) ಗಡಿನಾಡಿಗರಿಗೆ ಆರ್‌ಟಿಪಿಸಿಆರ್‌ (RTPCR) ಟೆಸ್ಟಿನಿಂದ ವಿನಾಯಿತಿ ನೀಡುವಂತೆ ಕಾಸರಗೋಡು ಜಿಲ್ಲೆಯ ದ.ಕ. ಅವಲಂಬಿತ ಗಡಿನಾಡಿಗರ ಸಹಯಾತ್ರಿ ತಂಡದಿಂದ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ (Dr. Rajendra), ಕಾಸರಗೋಡು ಜಿಲ್ಲೆಯ ಕೊರೋನಾ ಟೆಸ್ಟ್‌ ಪೊಸಿಟಿವಿಟಿ ರೇಟಿನ (Positivity Rate) ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕರ್ನಾಟಕದಲ್ಲಿ ಕೊರೋನಾ: ಇಲ್ಲಿದೆ ಅ.1ರ ಅಂಕಿ ಸಂಖ್ಯೆ

ಕಾಸರಗೋಡಿನ ಸಾವಿರಾರು ಮಂದಿ ಉದ್ಯೋಗ, ವಿದ್ಯಾಭ್ಯಾಸ, ವೈದ್ಯಕೀಯ ಹಾಗೂ ವ್ಯಾಪಾರ ವಹಿವಾಟುಗಳಿಗೆ ದ.ಕ. ಜಿಲ್ಲೆಯನ್ನು (Dakshina Kannada) ಅವಲಂಬಿಸಿದ್ದಾರೆ. ಕರ್ನಾಟಕ ಸರ್ಕಾರ ಕಾಸರಗೋಡಿಗರಿಗೆ ದ.ಕ. ಪ್ರವೇಶಿಸಲು ಆರ್‌ಟಿಪಿಸಿಆರ್‌ ನೆಗೆಟಿವ್‌ ರಿಪೋರ್ಟ್‌ ಕಡ್ಡಾಯಗೊಳಿಸಿದೆ. ಆರ್‌ಟಿಪಿಸಿಆರ್‌ ಟೆಸ್ಟ್‌ನ ಕಟ್ಟುಪಾಡುಗಳಿಂದ ಗಡಿನಾಡಿನ ಉದ್ಯೋಗ, ವಿದ್ಯಾರ್ಥಿ ಹಾಗೂ ವ್ಯಾಪಾರ ಮಾತ್ರವಲ್ಲದೆ ತುರ್ತು ವೈದ್ಯಕೀಯ ಸೇವೆಗಳಿಗೆ ತೆರಳುವವರಿಗೆ ಗಡಿ ಸಂಚಾರ ಮುಕ್ತಗೊಳಿಸಬೇಕು ಎಂಬ ಬೇಡಿಕೆಗಳನ್ನು ಸಹಯಾತ್ರಿ ತಂಡ ಜಿಲ್ಲಾಧಿಕಾರಿಗಳಿಗೆ ನೀಡಿದೆ.

ಕರ್ನಾಟಕ: ಸೆಪ್ಟೆಂಬರಲ್ಲಿ ದಾಖಲೆ ಜನಕ್ಕೆ ಲಸಿಕೆ

ಸಹಯಾತ್ರಿ ತಂಡದ ಲೋಕೇಶ್‌ ಜೋಡುಕಲ್ಲು, ಕೃಷ್ಣ ಕಿಶೋರ್‌ ಏನಂಕೂಡ್ಲು, ಶಿವಕೃಷ್ಣ ನಿಡುವಜೆ ಹಾಗೂ ಗಣೇಶ್‌ ಭಟ್‌ ವಾರಣಾಸಿ ತಂಡದಲ್ಲಿದ್ದರು.

ಕೋವಿಡ್ ಕೇಸ್ ಗಣನೀಯ ಇಳಿಕೆ :  ದ.ಕ.ಜಿಲ್ಲೆಯಲ್ಲಿ ಶುಕ್ರವಾರ 86 ಕೊರೋನಾ ಪಾಸಿಟಿವ್‌ ಕೇಸ್‌ (Positive Case) ಪತ್ತೆಯಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಕೋವಿಡ್‌ ಪಾಸಿಟಿವಿಟಿ ರೇಟ್‌ ಶೇ.0.89ಕ್ಕೆ ಇಳಿಕೆಯಾಗಿದೆ. ಶುಕ್ರವಾರ 91 ಮಂದಿ ಡಿಸ್ಚಾರ್ಜ್ ಆಗಿದ್ದು, ಪ್ರಸಕ್ತ 929 ಸಕ್ರಿಯ ಪ್ರಕರಣಗಳಿವೆ.

ಇಲ್ಲಿವರೆಗೆ ಒಟ್ಟು ಪಾಸಿಟಿವ್‌ ಕೇಸ್‌ 1,14,388ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 1,662 ತಲುಪಿದೆ. ಒಟ್ಟು 11,797 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಈಗಿನ ಕೇಸ್‌-86

ಈವರೆಗೆ ಕೇಸ್‌-1,14,388

ಈಗಿನ ಸಾವು-02

ಈವರೆಗೆ ಸಾವು-1,662

ಈಗಿನ ಚೇತರಿಕೆ-91

ಈವರೆಗೆ ಚೇತರಿಕೆ-11,797

ಈಗಿನ ಸಕ್ರಿಯ-929

ಕೇರಳದಲ್ಲಿ  ಹೆಚ್ಚಿನ ಕೇಸ್ : ಕೇರಳಲ್ಲಿ ಹೆಚ್ಚನ ಪ್ರಮಾಣದಲ್ಲಿ ಕೊರೋನಾ ಸೋಂಕು ಇದ್ದು ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮತ್ತೆ ಸೋಂಕು ಏರಬಹುದಾದ ಆತಂಕ ಹಿನ್ನೆಲೆ ರಾಜ್ಯ ಪ್ರವೇಶಿಸಲು ಟೆಸ್ಟ್ ಕಡ್ಡಾಯ ಮಾಡಲಾಗಿತ್ತು. ದಿನವು ಸಂಚರಿಸುವವರು 7 ದಿನಕ್ಕೊಮ್ಮೆ ಟೆಸ್ಟ್ ಮಾಡಿಸುವುದು ಕಡ್ಡಾಯವಾಗಿತ್ತು. ಈ ನಿಟ್ಟಿನಲ್ಲಿ ದಿನವೂ ಟೆಸ್ಟ್ ರಿಪೋರ್ಟ್ ತರುವುದು ಸಮಸ್ಯೆಯಾಗುತ್ತಿದೆ ಎಂದು ವಿನಾಯಿತಿಗಾಗಿ ಮನವಿ ಮಾಡಲಾಗಿದೆ. 

Follow Us:
Download App:
  • android
  • ios