ರಾಜಧಾನಿ ಬೆಂಗಳೂರಿನ ಅಭಿವೃದ್ಧಿ ಮತ್ತು ನಗರೀಕರಣದ ಹೆಸರಿನಲ್ಲಿ ಆಗುತ್ತಿರುವ ಅರಣ್ಯ ನಾಶ ತಪ್ಪಿಸಲು ಬಿಬಿಎಂಪಿ ‘ಸಿಟಿ ಟ್ರೀ ಮ್ಯಾನೇಜ್‌ಮೆಂಟ್‌ ಪ್ಲಾನ್‌’ ಸಿದ್ಧಪಡಿಸಲು ಚಿಂತನೆ ನಡೆಸಿದೆ. 

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಮಾ.01): ರಾಜಧಾನಿ ಬೆಂಗಳೂರಿನ (Bengaluru) ಅಭಿವೃದ್ಧಿ ಮತ್ತು ನಗರೀಕರಣದ ಹೆಸರಿನಲ್ಲಿ ಆಗುತ್ತಿರುವ ಅರಣ್ಯ ನಾಶ ತಪ್ಪಿಸಲು ಬಿಬಿಎಂಪಿ (BBMP) ‘ಸಿಟಿ ಟ್ರೀ ಮ್ಯಾನೇಜ್‌ಮೆಂಟ್‌ ಪ್ಲಾನ್‌’ ಸಿದ್ಧಪಡಿಸಲು ಚಿಂತನೆ ನಡೆಸಿದೆ. ಈಗಾಗಲೇ ನಗರದಲ್ಲಿ ಲಕ್ಷಾಂತರ ಸಂಖ್ಯೆಯ ಮರಗಳಿವೆ. ಕೆಲವು ಮಳೆ ಗಾಳಿಗೆ ಧರೆಗುರುಳಿದರೆ, ಮತ್ತೆ ಕೆಲವು ಅಭಿವೃದ್ಧಿ ಮತ್ತು ನಗರೀಕರಣದ ಹೆಸರಿನಲ್ಲಿ ಕೈಗೊಂಡ ಸ್ಮಾರ್ಟ್‌ ಸಿಟಿ ಯೋಜನೆ, ಮೆಟ್ರೋ, ವೈಟ್‌ಟಾಪಿಂಗ್‌, ಕೊಳವೆ ಅಳವಡಿಕೆ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಂದ ಮರದ ಬೇರುಗಳು ಸಡಿಲಗೊಂಡು ನಾಶ ಹೊಂದುತ್ತಿವೆ.

ಇನ್ನು 1985-86ರಲ್ಲಿ ನಗರದ ಪರಿಸರಕ್ಕೆ ಹೊಂದಿಕೊಳ್ಳದ ಕೆಲವು ಮರದ ತಳಿಗಳನ್ನು ನಾಟಿ ಮಾಡಲಾಗಿತ್ತು. ಇವು ಸಣ್ಣ ಮಳೆ ಗಾಳಿಗೆ ಧರೆಗುರುಳುತ್ತಿವೆ. ಈ ಎಲ್ಲಾ ಮರಗಳನ್ನು ಏಕಕಾಲಕ್ಕೆ ಕಡಿದು ಮಾವು, ಬೇವು, ಅರಳಿ ಸೇರಿದಂತೆ ಸ್ವದೇಶಿ ಮರ ಬೆಳೆಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ, ಬಿಬಿಎಂಪಿಯ ಅರಣ್ಯ ವಿಭಾಗ ಸಿಟಿ ಟ್ರೀ ಮ್ಯಾನೇಜ್‌ಮೆಂಟ್‌ ಪ್ಯಾನ್‌ ಸಿದ್ಧಪಡಿಸುವುದಕ್ಕೆ ಮುಂದಾಗಿದೆ.

ಪ್ಲಾನ್‌ನ ಪ್ರಯೋಜನ ಏನು?: ಅನಗತ್ಯವಾಗಿ ಮರ ಕತ್ತರಿಸುವ ಕಿರಿಕಿರಿ ಹಾಗೂ ಹೊಸದಾಗಿ ಸಸಿ ನಾಟಿ ಮಾಡುವುದು ತಪ್ಪಲಿದೆ. ನಗರದಲ್ಲಿ ಅರಣ್ಯ ಹೆಚ್ಚಲಿದೆ. ರಸ್ತೆ ಮತ್ತು ಪ್ರದೇಶಕ್ಕೆ ಹೊಂದಿಕೊಳ್ಳುವ ಮರಗಳನ್ನು ಮೊದಲೇ ನಿರ್ಧರಿಸಿ ಬೆಳೆಸುವುದಕ್ಕೆ ಅನುಕೂಲವಾಗಲಿದೆ. ಮರ ಧರೆಗುರುಳುವುದು ಹಾಗೂ ಇದರಿಂದ ಆಗುವ ಪ್ರಾಣ ಹಾನಿ ತಪ್ಪಿಸಬಹುದು ಎಂಬುದು ಅರಣ್ಯ ವಿಭಾಗದ ಅಧಿಕಾರಿಗಳು ಚಿಂತನೆ.

ACB Raids: ಬಿಬಿಎಂಪಿ ಭ್ರಷ್ಟರಿಗೆ ಎಸಿಬಿ ಶಾಕ್‌: 230 ಕೋಟಿ ಹಗರಣ ಪತ್ತೆ

ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ: ಈ ಬಗ್ಗೆ ಈಗಾಗಲೇ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪಾಲಿಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮುಂಬರುವ ಬಿಬಿಎಂಪಿ ಆಯವ್ಯಯದಲ್ಲಿ ಪ್ಲಾನ್‌ ರೂಪಿಸುವ ಬಗ್ಗೆ ಘೋಷಿಸುವ ನಿರೀಕ್ಷೆ ಇದೆ. ಜತೆಗೆ ಬೇಕಿರುವ .2 ಕೋಟಿ ಅನುದಾನ ಮೀಸಲಿಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಸ್ತಾವನೆಯಲ್ಲಿ ಏನಿದೆ?: ಪರಿಸರ ತಜ್ಞರು, ಭಾರತೀಯ ಅರಣ್ಯ ಸೇವೆಯ ನಿವೃತ್ತ ಅಧಿಕಾರಿಗಳು ಸೇರಿದಂತೆ ಐವರ ಸಮಿತಿ ರಚಿಸಬೇಕು. ಸಮಿತಿ ಸದಸ್ಯರಿಂದ ನಗರದ ವಾತಾವರಣಕ್ಕೆ ಹೊಂದಿಕೊಳ್ಳುವ ಮರಗಳ ಪಟ್ಟಿ, ಯಾವ ರಸ್ತೆಯಲ್ಲಿ (20, 30, 60 ಅಡಿ ರಸ್ತೆ) ಯಾವ ಮರ ಬೆಳೆಸಬೇಕು. ಸದ್ಯ ಇರುವ ಮರಗಳ ಪೈಕಿ ಆರೋಗ್ಯವಾಗಿರುವ ಮರ ಎಷ್ಟು, ಅಪಾಯಕಾರಿ ಮರ ಎಷ್ಟು, ಎಷ್ಟುಮರಗಳನ್ನು ಮರು ನಾಟಿ ಮಾಡಬಹುದು ಎಂಬುದರ ಕುರಿತು ಸಮಗ್ರ ವರದಿ ಪಡೆಯುವುದಾಗಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ಸಿಟಿ ಟ್ರೀ ಮ್ಯಾನೇಜ್‌ಮೆಂಟ್‌ ಪ್ಲಾನ್‌ ರಚನೆಯಿಂದ ನಗರದ ಅರಣ್ಯ ಸಂರಕ್ಷಣೆಗೆ ಹಾಗೂ ವ್ಯವಸ್ಥಿತವಾಗಿ ಮರ ಬೆಳೆಸಲು ಸಹಕಾರಿ ಆಗಲಿದೆ. ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆಯುಕ್ತರು ಅಂತಿಮ ನಿರ್ಧಾರ ತಿಳಿಸಲಿದ್ದಾರೆ.
-ಗೋವಿಂದ್‌ ರಾಜು, ಉಪ ಅರಣ್ಯ ಸಂರಕ್ಷಾಣಾಧಿಕಾರಿ

HD Kumaraswamy: ವಿಧಾನಸಭೆ, ಬಿಬಿಎಂಪಿ ಚುನಾವಣೆಗೆ ಜೆಡಿಎಸ್‌ ಸಿದ್ಧತೆ

Swachh Survekshan 2022 ಅಭಿಯಾನಕ್ಕೆ ಬಿಬಿಎಂಪಿ ಸಿದ್ಧತೆ: ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಈ ಬಾರಿಯೂ ಉತ್ತಮ ಪ್ರಶಸ್ತಿ ಗೆಲ್ಲುವುದಕ್ಕೆ ಬಿಬಿಎಂಪಿ ಸಾಕಷ್ಟುಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದರ ಭಾಗವಾಗಿ ಬಿಬಿಎಂಪಿ ಕೇಂದ್ರ ಕಚೇರಿ ಇರುವ ‘ನರಸಿಂಹರಾಜ ಚೌಕ’ವನ್ನು (ಎನ್‌ಆರ್‌ ಚೌಕ) ಅಜಾದಿ ಕಾ ಅಮೃತ್‌ ಮಹೋತ್ಸವ ವೃತ್ತ ಎಂದು ಆಯ್ಕೆ ಮಾಡಿಕೊಂಡಿದೆ.ಭಾರತ ಸ್ವಾತಂತ್ರ್ಯದ 75ನೇ ವರ್ಷದ ಆಚರಣೆಯ ಸ್ಮರಣಾರ್ಥ ಈ ಬಾರಿ ಸ್ವಚ್ಛ ಸರ್ವೇಕ್ಷಣದಲ್ಲಿ ಭಾಗವಹಿಸುವ ನಗರಗಳು ಒಂದೊಂದು ವೃತ್ತಗಳನ್ನು ಅಜಾದಿ ಕಾ ಅಮೃತ್‌ ಮಹೋತ್ಸವ ವೃತ್ತ ಎಂದು ಆಯ್ಕೆ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಅದರಂತೆ ಪಾಲಿಕೆ ತನ್ನ ಕೇಂದ್ರ ಕಚೇರಿ ಹಾಗೂ ‘ಕೆಂಪೇಗೌಡ ಗೋಪುರ’ ಇರುವ ಎನ್‌ಆರ್‌ ಚೌಕವನ್ನು ಆಯ್ಕೆ ಮಾಡಿಕೊಂಡಿದೆ.

ಚಿತ್ರಗಳ ಮೂಲಕ ಅನಾವರಣ: ಸ್ವಚ್ಛ ಬೆಂಗಳೂರು ಅನಾವರಣ: ವೃತ್ತದ ಕೆಂಪೇಗೌಡ ಗೋಪುರದ ಆವರಣದಲ್ಲಿ ನಗರದ ಸ್ವಚ್ಛತೆ, ತ್ಯಾಜ್ಯ ವಿಂಗಡಣೆ- ಸಂಸ್ಕರಣೆ, ಸಾಗಾಣಿಕೆಗೆ ಬಿಬಿಎಂಪಿ ಹಾಗೂ ಸಂಘ ಸಂಸ್ಥೆಗಳು ಕೈಗೊಂಡ ಕ್ರಮಗಳನ್ನು ಚಿತ್ರಗಳ ಮೂಲಕ ಅನಾವರಣ ಮಾಡಲಾಗುತ್ತಿದೆ. ಮಾಚ್‌ರ್‍ ಮೊದಲ ವಾರದಿಂದ ಸುಮಾರು 45 ದಿನಗಳ ವರೆಗೆ ಪ್ರದರ್ಶನ ಇರಲಿದೆ. ಎನ್‌ಆರ್‌ ಚೌಕವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.