ಆದಿಚುಂಚನಗಿರಿ ಶ್ರೀ ಮಠದಿಂದ ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಯ ಸಂಕಲ್ಪವನ್ನು ಮಾಡಲಾಗುತ್ತಿದೆ ಎಂದು ಆದಿಚುಂಚನಗಿರಿ ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಹೇಳಿದರು. 

ಕೋಲಾರ (ಸೆ.03): ಆದಿಚುಂಚನಗಿರಿ ಶ್ರೀ ಮಠದಿಂದ ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಯ ಸಂಕಲ್ಪವನ್ನು ಮಾಡಲಾಗುತ್ತಿದೆ ಎಂದು ಆದಿಚುಂಚನಗಿರಿ ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಹೇಳಿದರು. ನಗರದ ಬಿಜಿಎಸ್‌ ಪಿಯು ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಚೈತನ್ಯ ಪ್ರಸಾದ ಹೆಸರಲ್ಲಿ ಪಿಯು ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ನೊಂದ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರೀಮಠ ಮುಂದಾಗಿದೆ ಎಂದರು.

ಪದವಿ ತರಗತಿ ಆರಂಭಿಸಲು ಚಿಂತನೆ: ಬಿಜಿಎಸ್‌ ಪಿಯು ಕಾಲೇಜಿನಲ್ಲಿ ಬಿಎಸ್‌ಸಿ ಹಾಗೂ ಬಿಕಾಂ ಪದವಿಯ ತರಗತಿಗಳನ್ನು ಪ್ರಾರಂಭಿಸಲು ಚಿಂತಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅನ್ನವೇ ಪರಬ್ರಹ್ಮ ಹಸಿವಿನಿಂದ ನೊಂದವರಿಗೆ, ಅನ್ನವನ್ನು ನೀಡಿ ಸಾರ್ಥಕತೆ ಮೆರೆಯಿರಿ, ಬದಲಿಗೆ ತಿರಸ್ಕಾರ ಮಾಡುವ ಮನೋಭಾವ ಬಿಟ್ಟು ಪೂಜಿಸುವ ಮನೋಭಾವ ಬೆಳೆಸಿಕೊಳ್ಳಿ. 

ಕನಕಪುರದಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಚಿಂತನೆ: ಸಚಿವ ಶರಣ ಪ್ರಕಾಶ್‌ ಪಾಟೀಲ್‌

ಆದಿಚುಂಚನಗಿರಿ ಶ್ರೀ ಮಠವು ಅನ್ನದಾಸೋಹದಿಂದ ಇಂದು ವಿವಿಧ ದಾಸೋಹಗಳ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದು, ವಿದ್ಯಾರ್ಥಿಗಳು ಸಹ ಜವಾಬ್ದಾರಿ ಪಡೆಯುವ ಮೂಲಕ ಪಡೆದ ಸಹಾಯ ಪುನಹ ಸಮಾಜಕ್ಕೆ ಮತ್ತು ಶ್ರೀಮಠಕ್ಕೆ ನೀಡಿ, ಸೇವಾ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್‌, ಎಂಎಲ್‌ಸಿಗಳಾದ ಇಂಚರ ಗೋವಿಂದರಾಜು, ಎಂ.ಎಲ್‌.ಅನಿಲ್‌ಕುಮಾರ್‌, ಮುಖಂಡರಾದ ನಂದಿನಿ ಪ್ರವೀಣ್‌ಗೌಡ, ಕೃಷ್ಣಾರೆಡ್ಡಿ, ಕೆ.ವಿ.ಶಂಕರಪ್ಪ, ದೇವರಾಜ್‌, ಡಾ.ಚಂದ್ರಶೇಖರ್‌ ಇದ್ದರು.

ದೇಗುಲಗಳು ಹಿಂದು​ಗಳ ಸಂಸ್ಕೃ​ತಿಯ ಪ್ರ​ತಿ​ಬಿಂಬ: ದೇ​ವಾ​ಲ​ಯ​ಗಳು ಹಿಂದು​ಗಳ ಸಂಸ್ಕೃ​ತಿಯ ಪ್ರ​ತಿ​ಬಿಂಬ​ವಾ​ಗಿವೆ. ಇ​ದ​ರಿಂದ ಜೀ​ವ​ನ​ದಲ್ಲಿ ನೆ​ಮ್ಮದಿ ಮತ್ತು ಸಂಬಂಧ​ಗಳು ಗ​ಟ್ಟಿ​ಗೊ​ಳ್ಳಲು ಸಾ​ಧ್ಯ​ವಾ​ಗು​ತ್ತದೆ ಎಂದು ಶ್ರೀಆದಿಚುಂಚನಗಿರಿ ಮಹಾ ಸಂಸ್ಥಾನದ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ಸೋಮವಾರ ಶ್ರೀಬಸವೇಶ್ವರ ಸ್ವಾಮಿ ನೂತನ ದೇವಸ್ಥಾನ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಕಳಸಾರೋಹಣ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಜಗತ್ತು ವೈಜ್ಞಾನಿಕವಾಗಿ ಎಷ್ಟೇ ವೇಗವಾಗಿ ಮುಂದುವರೆದರೂ ದೇವರ ಮೇಲಿನಾ ಭಕ್ತಿ ಹಾಗೂ ಗುರು ಹಿರಿಯರಿಗೆ ನೀಡುವ ಗೌರವ ಎಂದು ಮರೆಯಬಾರದು ಎಂದರು.

ರಾಜೀವ್‌ ಗಾಂಧಿ ಮೆಡಿಕಲ್‌ ಕಾಲೇಜು ಇಲ್ಲೇ ಇರಲಿದೆ: ಶಾಸಕ ಇಕ್ಬಾಲ್‌ ಹುಸೇನ್‌

ಹಿಂದು ಧ​ಮ​ರ್‍ ಮತ್ತು ಸಂಸ್ಕೃತಿ ಉ​ಳಿವು ದೇ​ವಾ​ಲ​ಯ​ಗ​ಳಿಂದ ಮಾ​ತ್ರ​ವಾ​ಗಿದೆ. ಹೀ​ಗಾಗಿ ಮ​ನುಷ್ಯ ತಮ್ಮ ದೈ​ನಂದಿನ ಕೆ​ಲ​ಸ​ಗಳ ಮಧ್ಯೆ ಕೆಲ ಸ​ಮಯ ದೇ​ವರ ಪೂ​ಜೆಗೆ ಮೀ​ಸ​ಲಿ​ಡ​ಬೇಕು. ಇ​ದ​ರಿಂದ ಮಾ​ನ​ಸಿಕ ತೊ​ಳ​ಲಾ​ಟ​ದಿಂದ ಮು​ಕ್ತ​ರಾ​ಗಲು ಸಾ​ಧ್ಯ​ವಾ​ಗು​ತ್ತದೆ ಎಂ​ದ​ರು. ಪ್ರಸ್ತುತ ದಿನಗಳಲ್ಲಿ ಎಲ್ಲ ರೀತಿಯ ಸವಲತ್ತುಗಳು ಎಲ್ಲರಿಗೂ ಸಿಗುತ್ತಿದ್ದು ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಕೊಳ್ಳ​ಬೇಕು. ಮುಂದಿನ ದಿನಗಳಲ್ಲಿ ದೇಶ ಮತ್ತಷ್ಟುವೈಜ್ಞಾನಿಕವಾಗಿ ಹಾಗೂ ತಾಂತ್ರಿಕವಾಗಿ ಬೆಳೆಯುತ್ತದೆ. ಪ್ರಸ್ತುತ ಇರುವ ಮೊಬೈಲ್, ಕಂಪ್ಯೂಟರ್‌ ಗಳಿಗಿಂತಲೂ ಉತ್ತಮವಾದ ಸಾಧನೆಗಳು ತಯಾರಾಗಲಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸುವ ಜ್ಞಾನವನ್ನು ನಾವು ಪಡೆದುಕೊಳ್ಳಬೇಕಿದೆ ಎಂದರು.