ಚಿತ್ರದುರ್ಗ: ಹಾಸ್ಯ ಕಲಾವಿದ ಬರ್ಕತ್ ಅಲಿ ಚುನಾವಣಾ ರಾಯಭಾರಿಯಾಗಿ ನೇಮಕ
ಚಿತ್ರದುರ್ಗ ಜಿಲ್ಲೆಯಲ್ಲಿ 13,95,641 ಮತದಾರರು ಇದ್ದಾರೆ. 6,97,131 ಪುರುಷರು, 6,98,438 ಮಹಿಳಾ ಮತದಾರರು, 833 ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. ಏ.11 ರವರೆಗೆ ಮತಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ: ಡಿಸಿ ಜಿಆರ್ ಜೆ ದಿವ್ಯಪ್ರಭು
ಚಿತ್ರದುರ್ಗ(ಮಾ.30): ಜಿಲ್ಲೆಯಲ್ಲಿ ಒಟ್ಟು 1648 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಈವರೆಗೆ ಜಿಲ್ಲೆಯಲ್ಲಿ 13,95,641 ಮತದಾರರು ಇದ್ದಾರೆ. 6,97,131 ಪುರುಷರು, 6,98,438 ಮಹಿಳಾ ಮತದಾರರು, 833 ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. ಏ.11 ರವರೆಗೆ ಮತಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಅಂತ ಜಿಲ್ಲಾಧಿಕಾರಿ ಜಿಆರ್ ಜೆ ದಿವ್ಯಪ್ರಭು ಅವರು ತಿಳಿಸಿದ್ದಾರೆ.
ಇಂದು(ಗುರುವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಜಿಆರ್ ಜೆ ದಿವ್ಯಪ್ರಭು, ಜಿಲ್ಲೆಯಾದ್ಯಂತ ಸುಮಾರು 35 ಚೆಕ್ ಪೋಸ್ಟ್‌ಗಳನ್ನ ಸ್ಥಾಪಿಸಲಾಗಿದೆ. ಇಲ್ಲಿವರೆಗೂ ಜಿಲ್ಲೆಯಲ್ಲಿ 15,97,200ರೂ ಮೌಲ್ಯದ ವಸ್ತುಗಳು ಸೀಜ್ ಮಾಡಲಾಗಿದೆ. ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್‌ಗೆ ರಾಜ್ಯದಲ್ಲಿ ಅಧಿಕಾರ: ಮಾಜಿ ಸಚಿವ ಎಚ್.ಆಂಜನೇಯ
ಹಾಸ್ಯ ಕಲಾವಿದ ಬರ್ಕತ್ ಅಲಿ ಅವರನ್ನು ಚುನಾವಣಾ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಹಿರಿಯೂರಿನ ನಿವಾಸಿ ಹಾಸ್ಯ ಕಲಾವಿದ ಬರ್ಕತ್ ಅಲಿ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರ ವಾಗುವ ಕಾಮಿಡಿ ಶೋನಲ್ಲಿ ನಟಿಸಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.