Asianet Suvarna News Asianet Suvarna News

ಮಂಗಳೂರು- ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕುಸಿತ

ಕುದುರೆಮುಖ ವನ್ಯಜೀವಿ ವಿಭಾಗವಾದ ಕಾರಣ ರಸ್ತೆ ಅಗಲೀಕರಣ ಮಾಡಲು ಅವಕಾಶ ಲ್ಲ. ಆದರೆ ಇದ್ದ ರಸ್ತೆಯನ್ನು ಎರಡು ಮೀಟರ್ ಅಗಲೀಕರಣಗೊಳಿಸಿದರೆ ಯಾವುದೇ ಮರಗಳನ್ನು ತೆರವುಗೊಳಿಸದೆ ಡಾಂಬರೀಕರಣಗೊಳಿಸಬಹುದು. ಶೃಂಗೇರಿ - ಕಾರ್ಕಳ ಮಧ್ಯೆ ಪ್ರಯಾಣಿಸಲು ಇದೇ ಮುಖ್ಯ ಹೆದ್ದಾರಿಯಾಗಿದೆ. ಬೃಹತ್ ಗಾತ್ರದ ವಾಹನಗಳು, ಲಾರಿಗಳು ಈ ಹೆದ್ದಾರಿಯಲ್ಲಿ ನಿತ್ಯ ಸಂಚರಿಸುತ್ತವೆ.

Collapse Between Mangaluru Solapur National Highway at Karkala in Udupi grg
Author
First Published Sep 22, 2023, 2:00 AM IST

ರಾಂ ಅಜೆಕಾರು

ಕಾರ್ಕಳ(ಸೆ.22): ಮಂಗಳೂರು- ಕಾರ್ಕಳ ಬಜಗೋಳಿ- ಮಾಳ- ಶೃಂಗೇರಿ ಮೂಲಕ ಸೋಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕೆರೆಕಟ್ಟೆಯಿಂದ 4 ಕಿ.ಮೀ. ದೂರದಲ್ಲಿ ರಸ್ತೆ ನಡುವೆ ಕುಸಿತ ಉಂಟಾಗಿದ್ದು, ಬೃಹತ್ ಗಾತ್ರದ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಹೆದ್ದಾರಿಯಲ್ಲಿ ಮಧ್ಯಭಾಗದಲ್ಲಿ ಕುಸಿತವಾಗಿರುವ ರಸ್ತೆಗೆ ಕೆರೆಕಟ್ಟೆಯ ಸ್ಥಳೀಯ ಪ್ರಯಾಣಿಕರು ಮರದ ಗೆಲ್ಲುಗಳನ್ನಿಟ್ಟು ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಇದರಿಂದ ಸಂಭಾವ್ಯ ಅಪಾಯಗಳು ತಪ್ಪುವಂತಾಗಿದೆ.

ರಸ್ತೆ ಅಪಾಯಕಾರಿ:

ಕುದುರೆಮುಖ ವನ್ಯಜೀವಿ ವಿಭಾಗವಾದ ಕಾರಣ ರಸ್ತೆ ಅಗಲೀಕರಣ ಮಾಡಲು ಅವಕಾಶ ಲ್ಲ. ಆದರೆ ಇದ್ದ ರಸ್ತೆಯನ್ನು ಎರಡು ಮೀಟರ್ ಅಗಲೀಕರಣಗೊಳಿಸಿದರೆ ಯಾವುದೇ ಮರಗಳನ್ನು ತೆರವುಗೊಳಿಸದೆ ಡಾಂಬರೀಕರಣಗೊಳಿಸಬಹುದು. ಶೃಂಗೇರಿ - ಕಾರ್ಕಳ ಮಧ್ಯೆ ಪ್ರಯಾಣಿಸಲು ಇದೇ ಮುಖ್ಯ ಹೆದ್ದಾರಿಯಾಗಿದೆ. ಬೃಹತ್ ಗಾತ್ರದ ವಾಹನಗಳು, ಲಾರಿಗಳು ಈ ಹೆದ್ದಾರಿಯಲ್ಲಿ ನಿತ್ಯ ಸಂಚರಿಸುತ್ತವೆ.

ಬೃಹತ್ ಅಲೆಗಳ ಹೊಡೆತಕ್ಕೆ ಕೊಚ್ಚಿಹೋಗುತ್ತಿದ್ದ ಐವರು ಪ್ರವಾಸಿಗರನ್ನ ರಕ್ಷಿಸಿದ ಲೈಫ್‌ ಗಾರ್ಡ್

ಅಪಾಯಕಾರಿ ಸೇತುವೆಗಳು:

ಈ ಹೆದ್ದಾರಿಯಲ್ಲಿ ಎಸ್‌.ಕೆ. ಬಾರ್ಡರ್‌ನಿಂದ ತನಿಕೋಡ್ ಗೇಟ್‌ವರೆಗೆ ಅಪಾಯಕಾರಿಯಾದ ಎರಡು ಸೇತುವೆಗಳಿವೆ. ಅದಕ್ಕೆ ಯಾವುದೇ ಸರಿಯಾದ ನಿರ್ವಹಣೆಯಿಲ್ಲ. ಸೇತುವೆ ಬದಿಯ ತಡೆಗೋಡೆ ಕೆಲವೆಡೆ ಕುಸಿತವಾಗುತ್ತಿದೆ.

ಅಪಾಯಕಾರಿ ರಸ್ತೆ ಅಂಚುಗಳು:

ಹೆದ್ದಾರಿ ಬದಿಯ ಅಂಚುಗಳು ಒಂದು ಅಡಿ ಆಳವಿದೆ. ಘನವಾಹನಗಳು ರಸ್ತೆಯಲ್ಲಿ ಸಂಚರಿಸುವಾಗ ರಸ್ತೆ ಬದಿಯಲ್ಲಿನ ಅಂಚುಗಳು ಅಪಾಯವನ್ನು ಆಹ್ವಾನಿಸುತ್ತವೆ. ಕಾರು, ಬೈಕುಗಳು, ಸಂಚರಿಸಲು ಕಷ್ಟವಾಗುತ್ತಿದೆ. ಕೆಲವೆಡೆ ಅಪಘಾತಗಳು ಸಂಭವಿಸುತ್ತವೆ.

ಕಾರ್ಕಳ- ಶೃಂಗೇರಿ ಸಂಪರ್ಕಿಸುವ ಈ ರಾಷ್ಟ್ರೀಯ ಹೆದ್ದಾರಿ 169 ಘನವಾಹನಗಳ ಸಂಚಾರಕ್ಕೆ ಸುಲಭ. ಹೆಬ್ರಿ ಅಗುಂಬೆ ಮೂಲಕ ಹಾದುಹೋಗುವ 169 ಎ ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಆಗುಂಬೆ ಹೆದ್ದಾರಿಯಲ್ಲಿ ಘನವಾಹನಗಳಿಗೆ ಪ್ರವೇಶವಿಲ್ಲ. ಆದ್ದರಿಂದ ಉಡುಪಿ ಚಿಕ್ಕಮಗಳೂರು ಸಂಪರ್ಕಿಸಲು ಘನ ವಾಹನಗಳು ರಾಷ್ಟ್ರೀಯ ಹೆದ್ದಾರಿ 169 ಅನ್ನು ಬಳಸ ಬೇಕಾಗಿದೆ. ಆಗುಂಬೆ ಘಾಟಿ ನಿರ್ವಹಣೆ ದೃಷ್ಟಿಯಿಂದ ಕೆಲವು ಬಾರಿ ಬಂದ್ ಮಾಡಲಾಗುತ್ತದೆ. ಆಗ ಲಘುವಾಹನಗಳು, ಘನವಾಹನಗಳು , ಪರ್ಯಾಯವಾಗಿ ಈ ಮಾಳ ಘಾಟ್‌ನ್ನು ಬಳಸಲೇ ಬೇಕಾದ ಅನಿವಾರ್ಯವಿದೆ.

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆಯಾಗುತಿದ್ದು ವಾಹನಗಳಲ್ಲಿ ಸಂಚರಿಸುವಾಗ ನಿಧಾನವಾಗಿ ಸಂಚರಿಸಬೇಕು. ಅಪಾಯಕಾರಿ ತಿರುವುಗಳು, ರಸ್ತೆ ಬದಿಗಳಲ್ಲಿ ಖಾಸಗಿ ಟಿಲಿಕಾಂ ಕಂಪೆನಿಯು ಕೇಬಲ್ ಅಳವಡಿಸುತಿದ್ದು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿರುತ್ತಾರೆ. ಕಾಮಗಾರಿ ನಡೆಸುವ ಮುನ್ನೆಚ್ಚರಿಕೆ ಬೋರ್ಡ್ ಗಳಿಲ್ಲ.‌ ಇದರಿಂದಾಗಿ ಮಾಳ ಘಾಟ್ ಮೂಲಕ ಎಸ್ ಕೆ ಬಾರ್ಡರ್ ಮೂಲಕ ಶೃಂಗೇರಿ / ಕುದುರೆಮುಖ ಮೂಲಕ ಕಳಸ ಪ್ರವೇಶಿಸುವ ಪ್ರಯಾಣಿಕರು ನಿಧಾನ ಚಲಿಸುವುದು ಒಳಿತು.

ಮನಸ್ವಿ ಕುಲಾಲ್ ಜೀವನದ ಮೌಲ್ಯ ತಿಳಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ !

ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡುವೆ ಸಾಗುವುದೇ ಸವಾಲು, ಬೃಹತ್ ಗಾತ್ರದ ವಾಹನಗಳು ಬಂದರೆ ಸೈಡ್ ಕೊಡುವುದೆ ಕಷ್ಟ . ಇದ್ದ ರಸ್ತೆಯನ್ನು ರಸ್ತೆಯ ಎರಡು ಬದಿಗಳಲ್ಲಿ ಎರಡು ಮೀಟರ್ ಅಗಲಿಕರಣಗೊಳಿಸಿದರೆ ಸಾಕು. ಆದರೆ ಮರಗಳನ್ನು ತೆರವು ಗೊಳಿಸುವುದು ಬೇಡ ಎಂದು ಪ್ರಯಾಣಿಕರಾದ ರಾಧಾಕೃಷ್ಣ ಮಣಿಪಾಲ್ ಹೇಳಿದ್ದಾರೆ. 

ಕುದುರೆಮುಖ ವನ್ಯಜೀವಿ ವಿಭಾಗ ಬಲು ಅಪರೂಪದ ಪರಿಸರವಾಗಿದೆ. ಇದ್ದ ರಸ್ತೆಯನ್ನು ಮಾತ್ರ ಅಗಲೀಕರಣಗೊಳಿಸಲಿ ಆದರೆ ಮರಗಳನ್ನು ಕಡಿಯಬಾರದು. ಪರಿಸರ ಉಳಿಸಬೇಕು. ಕುಸಿದ ರಸ್ತೆ , ಸೇತುವೆ ನಿರ್ವಹಣೆ ಮಾಡಲಿ ಎಂದು ಪರಿಸರವಾದಿ ಹರೀಶ್ ಶೆಟ್ಟಿ ಶಿರ್ಲಾಲು ತಿಳಿಸಿದ್ದಾರೆ. 

Follow Us:
Download App:
  • android
  • ios