ಬೆಂಗಳೂರು(ಡಿ.06): ‘ಬುರೆವಿ’ ಚಂಡಮಾರುತದ ಅಬ್ಬರ ಬಹುತೇಕ ಕ್ಷೀಣಿಸಿದ್ದರೂ ನಗರದಲ್ಲಿ ಚಳಿ ಹೆಚ್ಚಾಗಿದ್ದು, ಅಲ್ಲಲ್ಲಿ ಹಗುರ ಮಳೆ ಸುರಿದಿದೆ.

ಶನಿವಾರ ಬೆಳಗ್ಗೆಯಿಂದಲೇ ಹಲವು ಕಡೆಗಳಲ್ಲಿ ತುಂತುರು ಮಳೆ ಬಿದ್ದಿದೆ. ಕೆಲವು ಪ್ರದೇಶಗಳಲ್ಲಿ ಕ್ಷಣ ಕಾಲ ಬಿಸಿಲಿನ ದರ್ಶನವಾಗಿದ್ದು, ಬಿಟ್ಟರೆ ತಾಪಮಾನದಲ್ಲಿ ಗಣನೀಯ ಇಳಿಕೆ ಆಗಿದೆ. ಇದರಿಂದ ಎಲ್ಲೆಡೆ ವಾತಾವರಣ ಚಳಿ ಹಾಗೂ ಮೋಡ ಕವಿದ ಸ್ಥಿತಿ ಸಾಮಾನ್ಯವಾಗಿತ್ತು.

ಜನರೇ ಕೊರೆವ ಚಳಿ ಬಗ್ಗೆ ಎಚ್ಚರ! ಹೇಗೆ ಕಾಪಾಡಿಕೊಳ್ಳಬೇಕು ಆರೋಗ್ಯ..?

ರಾಜಾನುಕುಂಟೆಯಲ್ಲಿ ಮಾತ್ರ 4ಮಿ.ಮೀ. ಮಳೆಯಾಗಿದ್ದು, ದೊಡ್ಡಜಾಲ 3, ಹೆಸರಘಟ್ಟ ಹಾಗೂ ಚಿಕ್ಕನಾಯಕನಹಳ್ಳಿ ತಲಾ 2.5 ಮಿ.ಮೀ. ಹಗುರ ಮಳೆಯಾಗಿದೆ. ಉಳಿದಂತೆ ದೊಡ್ಡದಾಸನಾಪುರ, ಅರಕೆರೆ, ಶಿವಕೋಟೆ, ಐಟಿಸಿ ಜಾಲ, ಯಲಹಂಕ, ಹುಣಸಮಾರನಹಳ್ಳಿ, ಜಕ್ಕೂರು, ಯಶವಂತಪುರ, ಕಣ್ಣೂರು, ಕೆ.ಆರ್‌.ಪುರಂ, ಕುಶಾಲನಗರ, ಜ್ಞಾನಭಾರತಿ, ರಾಜಾಜಿನಗರ ಸೇರಿದಂತೆ ಇತರೆಡೆಗೆ ತುಂತುರು ಮಳೆ ಕಂಡು ಬಂತು. ಗರಿಷ್ಠ 23.5 ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

ಡಿ.6ರಂದು ತಾಪಮಾನ ಕ್ರಮವಾಗಿ 23 ಮತ್ತು 18 ಹಾಗೂ ಡಿ.7ರಂದು 25 ಮತ್ತು 19 ದಾಖಲಾಗಲಿದ್ದು, ಚಳಿ ತುಸು ಕಡಿಮೆಯಾಗುವ ಮುನ್ಸೂಚನೆ ದೊರೆತಿದೆ.