ಶಿವಮೊಗ್ಗ: ಮುನ್ಸೂಚನೆ ಕೊಡದೇ ಬಂದ ಸಿಎಂ
ಉತ್ತರ ಕನ್ನಡಕ್ಕೆ ನೆರೆ ಪೀಡಿತ ಪ್ರದೇಶ ವೀಕ್ಷಿಸಲು ಹೊರಟಿದ್ದ ಸಿಎಂ ಯಡಿಯೂರಪ್ಪ ಅಚಾನಕ್ ಆಗಿ ಶಿವಮೊಗ್ಗದಲ್ಲಿ ಇಳಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಕಾರಣ ಹೆಲಿಕಾಪ್ಟರ್ ಹೋಗಲು ಸಾಧ್ಯವಿಲ್ಲ ಎಂಬ ಸಂದೇಶ ಬಂದಿತು. ತಕ್ಷಣವೇ ಶಿವಮೊಗ್ಗದಲ್ಲಿಯೇ ಅಧಿಕಾರಿಗಳ ಸಭೆ ನಡೆಸಲು ಸೂಚಿಸಿ ದಿಢೀರನೆ ಜಿಪಂ ಸಭಾಂಗಣಕ್ಕೆ ಬಂದರು. ಸಭೆ ಮುಗಿಸಿ ಮಧ್ಯಾಹ್ನ. 12.30 ರ ಸುಮಾರಿಗೆ ಹಾವೇರಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಿದರು.
ಶಿವಮೊಗ್ಗ (ಸೆ.01): ಉತ್ತರ ಕನ್ನಡಕ್ಕೆ ನೆರೆ ಪೀಡಿತ ಪ್ರದೇಶ ವೀಕ್ಷಿಸಲು ಹೊರಟಿದ್ದ ಸಿಎಂ ಯಡಿಯೂರಪ್ಪ ಅಚಾನಕ್ ಆಗಿ ಶಿವಮೊಗ್ಗದಲ್ಲಿ ಇಳಿದಿದ್ದಾರೆ. ಹವಾಮಾನ ಮಾಲೂಲಾಗಿದ್ದರೆ ಸಿಎಂ ಶನಿವಾರ ಉತ್ತರ ಕನ್ನಡಕ್ಕೆ ತೆರಳಬೇಕಿತ್ತು.
ಮುಖ್ಯಮಂತ್ರಿಗಳು ಉತ್ತರ ಕನ್ನಡ ನೆರೆ ಹಾವಳಿ ವೀಕ್ಷಿಸುವ ಸಂಬಂಧ ಹೆಲಿಕಾಪ್ಟರ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಹೊರಟಿದ್ದರು. ಆದರೆ ಇಂಧನ ತುಂಬಿಸಿಕೊಳ್ಳುವ ಸಲುವಾಗಿ ಶಿವಮೊಗ್ಗದಲ್ಲಿ ಮುಖ್ಯಮಂತ್ರಿಗಳಿದ್ದ ಹೆಲಿಕಾಪ್ಟರ್ ಇಳಿಯುವ ಕುರಿತು ಬೆಳಗ್ಗೆ ಮಾಹಿತಿ ಬಂದಿತು.
ಜನರಿಗೆ ಕಿರುಕುಳ ಕೊಟ್ರೆ ಕಲಬುರ್ಗಿಗೆ ಎತ್ತಂಗಡಿ: SP, ಅಧಿಕಾರಿಗಳಿಗೆ ಯಡಿಯೂರಪ್ಪ ಎಚ್ಚರಿಕೆ..!
ನಿಗದಿತ ವೇಳೆಯಾಗಿದ್ದ ಬೆಳಗ್ಗೆ 9.30 ರ ಬದಲಿಗೆ 10.30 ಕ್ಕೆ ಹೆಲಿಪ್ಯಾಡ್‌ಗೆ ಬಂದಿಳಿದರು. ಇಂಧನ ತುಂಬುವ ವೇಳೆಯಲ್ಲಿ ಪಕ್ಕದಲ್ಲಿಯೇ ಇದ್ದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಇತರೆ ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿಗಳು ಚರ್ಚೆ ನಡೆಸಿದರು. ಅಷ್ಟರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಕಾರಣ ಹೆಲಿಕಾಪ್ಟರ್ ಹೋಗಲು ಸಾಧ್ಯವಿಲ್ಲ ಎಂಬ ಸಂದೇಶ ಬಂದಿತು. ತಕ್ಷಣವೇ ಶಿವಮೊಗ್ಗದಲ್ಲಿಯೇ ಅಧಿಕಾರಿಗಳ ಸಭೆ ನಡೆಸಲು ಸೂಚಿಸಿ ದಿಢೀರನೆ ಜಿಪಂ ಸಭಾಂಗಣಕ್ಕೆ ಬಂದರು. ಸಭೆ ಮುಗಿಸಿ ಮಧ್ಯಾಹ್ನ. 12.30 ರ ಸುಮಾರಿಗೆ ಹಾವೇರಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಿದರು.
ಜಿಮ್‌ನಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ: ಕ್ಯಾಮೆರಾ ಅಳವಡಿಸಲು ಆಗ್ರಹ