ಜಿಮ್‌ನಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ: ಕ್ಯಾಮೆರಾ ಅಳವಡಿಸಲು ಆಗ್ರಹ

ಜಿಮ್‌ ಸೆಂಟರ್‌ಗೆ ಬಂದ ಯುವತಿ ಜೊತೆ ಟ್ರೈನರ್ ಅಸಭ್ಯವಾಗಿ ವರ್ತಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಜಿಮ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಶುಕ್ರವಾರ ಸವಳಂಗ ರಸ್ತೆಯಲ್ಲಿರುವ ಜಿಮ್‌ ಸೆಂಟರ್‌ ಮುಂದೆ ಪ್ರತಿಭಟನೆ ನಡೆಯಿತು.

gym trainer misbehaves with lady customer in Shivamogga

ಶಿವಮೊಗ್ಗ(ಆ.31): ಜಿಮ್‌ ಸೆಂಟರ್‌ ತರಬೇತುದಾರರೊಬ್ಬರು ಜಿಮ್‌ಗೆ ಬರುವ ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿದ್ದಾರೆಂದು ಆರೋಪಿಸಿ ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಶುಕ್ರವಾರ ಸವಳಂಗ ರಸ್ತೆಯಲ್ಲಿರುವ ಜಿಮ್‌ ಸೆಂಟರ್‌ ಮುಂದೆ ಪ್ರತಿಭಟನೆ ನಡೆಸಲಾಯಿತು.

ಜಿಮ್‌ ಸೆಂಟರ್‌ಗೆ ನಗರದ ಅನೇಕ ಯುವಕ-ಯುವತಿಯರು ಅಭ್ಯಾಸಕ್ಕಾಗಿ ಬರುತ್ತಾರೆ. ಆದರೆ ಇಲ್ಲಿಯ ತರಬೇತುದಾರನೊಬ್ಬ ವಿದ್ಯಾರ್ಥಿಯೋರ್ವಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಿಸಿ ಕ್ಯಾಮೆರಾ ಅಳವಡಿಕೆಗೆ ಆಗ್ರಹ:

ನಗರದಲ್ಲಿರುವ ಎಲ್ಲ ಜಿಮ್‌ ಸೆಂಟರ್‌ಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿದ ಜಿಮ್‌ ಸೆಂಟರ್‌ ತರಬೇತುದಾರನ ಮೇಲೆ ಕ್ರಮ ಕೈಗೊಳ್ಳಬೇಕು. ಆ ಜಿಮ್‌ ಸೆಂಟರ್‌ನ್ನು ಮುಚ್ಚಬೇಕು ಎಂದು ಒತ್ತಾಯಿಸಿದರು.

ಶಿವಮೊಗ್ಗ: ಹಬ್ಬ ಆಚರಣೆಯಲ್ಲಿ ಡಿಜೆ, ಬೈಕ್ ರ‍್ಯಾಲಿಗಿಲ್ಲ ಅವಕಾಶ

ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಆರ್‌.ಗಿರೀಶ್‌, ಸಂದೇಶ್‌, ಪ್ರವೀಣ್‌, ಕಾರ್ತಿಕ್‌, ಋುತಿಕ್‌, ಸೂರ್ಯ, ಚೇತನ್‌, ವರುಣ್‌ ಸೇರಿದಂತೆ ಹಲವರಿದ್ದರು.

Latest Videos
Follow Us:
Download App:
  • android
  • ios