Asianet Suvarna News Asianet Suvarna News

ಕಸ ಸಮಸ್ಯೆಗೆ ಶ್ರೀ ಸಾಮಾನ್ಯ ಸುಸ್ತು: ಭಾನುವಾರವೂ ಸಿಎಂ ಗಸ್ತು

ಬೆಂಗಳೂರಿನ ಹಲವು ರಸ್ತೆ, ಮಾರುಕಟ್ಟೆಗಳಲ್ಲಿ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗದೆ ಹಾಗೇ ಉಳಿಯುತ್ತಿದೆ. ಆಟೋ ಟಿಪ್ಪರ್‌ಗಳು ಕಸ ತುಂಬಿಕೊಂಡು ನಿಂತಲ್ಲೇ ನಿಂತಿವೆ. ಕೆಲವೆಡೆ ಕಸ ವಾಸನೆ ಬಿಡಿಯುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಭಾನುವಾರ ಕೂಡ ಸಮರ್ಪಕವಾಗಿ ಕಸ ವಿಲೇವಾರಿ ನಡೆಯುತ್ತಿಲ್ಲ. ಇದರಿಂದ ಖುದ್ದು ಸಿಎಂ ಗಸ್ತು ತಿರುಗಲು ನಿರ್ಧರಿಸಿದ್ದಾರೆ.

CM Yediyurappa to set aside Sundays to deal with Bengaluru garbage woes
Author
Bengaluru, First Published Sep 7, 2019, 6:57 PM IST

ಬೆಂಗಳೂರು, [ಸೆ.07]: ಬೆಂಗಳೂರಿನಲ್ಲಿ ಮತ್ತೆ ಕಸ ವಿಲೇವಾರಿ ಸಮಸ್ಯೆ ಉಂಟಾಗಿದ್ದು, ಇದನ್ನು ಸರಿಪಡಿಸಲು ಖುದ್ದು  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಖಾಡಕ್ಕೀಳಿದಿದ್ದಾರೆ.  

ತಮ್ಮ ಯೋಜನೆಗಳ ಭಾಗವಾಗಿ ಸಿಎಂ ಭಾನುವಾರಗಳನ್ನು ಬೆಂಗಳೂರಿಗೆ ಮೀಸಲಿಡಲು ನಿರ್ಧರಿಸಿದ್ದಾರೆ. ನಗರವನ್ನು ದುರ್ವಾಸನೆ ಬೀರದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆಗಳನ್ನು ಕಳುಹಿಸಲು ಅವರು ಬೆಂಗಳೂರಿನಾದ್ಯಂತ ಕ್ಷೇತ್ರ ಭೇಟಿ ನೀಡಲು ನಿರ್ಧರಿಸಿದ್ದಾರೆ.

ಮತ್ತೆ ಭುಗಿಲೆಳುತ್ತಾ ಕಸದ ಸಮಸ್ಯೆ?

ಹೌದು, ಕಸ ಸಮಸ್ಯೆ ಹಾಗೂ ಕಸ ಸಂಸ್ಕರಣ ಘಟಕಗಳಲ್ಲಿ ನಡೆಯುತ್ತಿರುವ ಅಕ್ರಮ ತಡೆಗಟ್ಟಲು ಹಾಗೂ ನಿರ್ವಹಣೆ ಬಗ್ಗೆ ನಿಗಾ ಇಡಲು ಸಿಎಂ ರೌಂಡ್ಸ್ ನಡೆಸಲಿದ್ದಾರೆ.  ಪ್ರತಿ ಭಾನುವಾರ ಮುಖ್ಯಮಂತ್ರಿಗಳು ಬೆಂಗಳೂರಿನ ವಿವಿಧ ಏರಿಯಾಗಳಗೆ ವಿಸಿಟ್ ಕೊಟ್ಟು ಅಲ್ಲಿನ ಸಮಸ್ಯೆಗಳನ್ನು ಅವಲೋಕಿಸಲಿದ್ದಾರೆ.  

ಈ ಬಗ್ಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಹಿತಿ ನೀಡಿರುವ ಸಿಎಂ, ಎರಡು ಬಸ್‌ನಲ್ಲಿ ಬೆಂಗಳೂರಿನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡ್ತೇವೆ. ಭಾನುವಾರ ಟ್ರಾಫಿಕ್ ಕಡಿಮೆ ಇರೋದ್ರಿಂದ ನಾಳೆ ಪರಿಶೀಲನೆ ಮಾಡುತ್ತೇನೆಂದು ಹೇಳಿದರು.

15-20 ಕಾರುಗಳನ್ನ ಬಿಟ್ಟು ಎರಡು ಬಸ್‌ನಲ್ಲಿ ತೆರಳಿ ಪರಿಶೀಲನೆ ಮಾಡುತ್ತೇನೆ.  ನಮ್ಮ ಜತೆ ಎಲ್ಲಾ ಅಧಿಕಾರಿಗಳು ಬರ್ತಾರೆ ಯಡಿಯೂರಪ್ಪ ತಿಳಿಸಿದರು.

ಭಾನುವಾರ ಭೇಟಿ ವೇಳೆ ಉದ್ಯಾನವನದಲ್ಲಿ ಸಾರ್ವಜನಿಕರ ಜತೆ ವಾಕಿಂಗ್ ಚಾಟಿಂಗ್ ಮಾಡಲಿದ್ದಾರೆ. ಪಾರ್ಕ್ ವಿಸಿಟ್ ಜೊತೆ ಸಾರ್ವಜನಿಕರ ಸಮಸ್ಯೆ ಆಲಿಸಲು ಸಿಎಂ ನಿರ್ಧರಿಸಿದ್ದಾರೆ. ಅಷ್ಟ ಅಲ್ಲದೇ ಯಾವ ಏರಿಯಾನಲ್ಲಿ ಯಾವ ಕಾಮಗಾರಿ ನಡೆದಿದೆ? ಯಾವುದು ಅರ್ಧಕ್ಕೆ ನಿಂತಿದೆ ಎನ್ನುವುದು ಪರಿಶೀಲನೆ ನಡೆಸಲಿದ್ದಾರೆ.   

ಉದ್ಯಾನ ನಗರಿಯಲ್ಲಿ ಪ್ರತಿದಿನ 5,700 ಟನ್ ಕಸವನ್ನು ಉತ್ಪಾತ್ತಿಯಾಗುತ್ತಿದ್ದು, ಇದರಲ್ಲಿ 400 ಟನ್ ಮಾತ್ರ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಹೋಗುತ್ತಿದೆ. ದೊಡ್ಡಬಳ್ಳಾಪುದ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆಗಾಗಿ ಸುಮಾರು 200 ಟನ್‌ಗಳನ್ನು ಕಳುಹಿಸಲಾಗುತ್ತದೆ.

ಇನ್ನುಳಿದ ಕಸವನ್ನು ಮತ್ತೆ ಬೆಲ್ಲಹಳ್ಳಿಗೆ ಘಟಕಕ್ಕೆ ಕಳುಹಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ರೆ, ಬೆಲ್ಲಹಳ್ಳಿ ಜನರು ವಿರೋಧಿಸುತ್ತಿರುವುದರಿಂದ ಪದೇ ಪದೇ ಸಮಸ್ಯೆಯ ಕೇಂದ್ರವಾಗುತ್ತಿದೆ.  ಇನ್ಮೇಲೆ ಪ್ರತಿ ಭಾನುವಾರ ಬಿಎಸ್ ಬಸ್ ನಲ್ಲಿ ಸಿಟಿ ರೌಂಡ್ಸ್ ಹಾಕಲಿದ್ದು, ಅವಾಗಾದರೂ  ಕಸದ ಜತೆಗೆ ರಸ್ತೆ ಗುಂಡಿಗಳು ಮುಚ್ಚಿಕೊಳ್ಳತ್ತಾವೆಯೇ ಎನ್ನುವುದನ್ನು ಕಾದುನೋಡಬೇಕಿದೆ.

ಇದೇ ಸುದ್ದಿಯನ್ನು ಇಂಗ್ಲೀಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios