ಅಲ್ಪ ಸಂಖ್ಯಾತರಿಗೆ ಜಾಗ ಮಾತ್ರವಲ್ಲ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನೀವು ಕೂಡ ಮುಸ್ಲಿಂ ಆಗಿಬಿಡಿ; ಕೆ.ಎಸ್. ಈಶ್ವರಪ್ಪ
ಪಶು ಇಲಾಖೆಯ ಜಾಗವನ್ನು ಮಾತ್ರ ಅಲ್ಪಸಂಖ್ಯಾತರಿಗೆ ಯಾಕೆ ಕೊಡ್ತೀರಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನೀವು ಕೂಡ ಮುಸ್ಲಿಂ ಆಗಿಬಿಡಿ ಎಂದು ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗ (ಫೆ.29): ಬೆಂಗಳೂರಿನಲ್ಲಿ ಕೋಟಿ ಕೋಟಿ ರೂ. ಬೆಲೆಬಾಳುವ ಸರ್ಕಾರದ ಪಶು ವೈದ್ಯಕೀಯ ಇಲಾಖೆಗೆ ಸೇರಿದ ಜಾಗವನ್ನು ಅಲ್ಪಸಂಖ್ಯಾತರ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಸರ್ಕಾರವನ್ನೇ ಮುಸ್ಲಿಮರಿಗೆ ಕೊಟ್ಟುಬಿಡಿ. ಜೊತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೀವೂ ಕೂಡ ಮುಸ್ಲಿಂಗೆ ಮತಾಂತರವಾಗಿಬಿಡಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕಾರಿಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಚಾಮರಾಜಪೇಟೆಯ ಪಶು ವೈದ್ಯಕೀಯ ಇಲಾಖೆ ಜಾಗವನ್ನ ಅಲ್ಪಸಂಖ್ಯಾತರ ಇಲಾಖೆ ಗೆ ಹಸ್ತಾಂತರಿಸುವ ಕ್ರಮ ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮುಸ್ಲಿಂ ಆಗಿಬಿಡಿ. ಇಡೀ ಸರ್ಕಾರವೇ ಮುಸಲ್ಮಾನರಿಗೆ ಕೊಟ್ಬಿಡಿ. ನೀವು ಅಲ್ಪಸಂಖ್ಯಾತರ ಓಲೈಕೆ ಮಾಡೋದಾದರೆ, ಎಲ್ಲಾ ಇಲಾಖೆಯನ್ನ ಮುಸ್ಲಿಂ ಅವರಿಗೆ ಕೊಡಿ. ಇಡೀ ಸರ್ಕಾರವೇ ಮುಸ್ಲಿಂ ಅವರಿಗೆ ಕೊಟ್ಟುಬಿಡಿ. ನಿಮಗೆ ಬೇರೆ ಬೇರೆ ಇಲಾಖೆ ಯಾಕೆ ಬೇಕು? ಎಂದು ಕಿಡಿ ಕಾರಿದ್ದಾರೆ.
ಜಾತಿ ಗಣತಿ ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ; 2 ಮೂಟೆಗಳಲ್ಲಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗಡೆ
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾಂದ್ ಘೋಷಣೆ ಕೂಗಿಲ್ಲ ಎಂದು ಕೆಲವು ಕಾಂಗ್ರೆಸ್ ನಾಯಕರು ಹೇಳುತ್ತಿದ್ದ ಬಗ್ಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಗೂಂಡಾ ರೀತಿ ಹೇಳ್ತಾ ಇದ್ದಾರೆ. ಹಾಗಾದ್ರೆ ಎಫ್ ಎಸ್ ಎಲ್ ರಿಪೋರ್ಟ್ ಯಾಕೆ ಕಾಯ್ತಾ ಇದ್ದೀರಾ? ರಾಜ್ಯ ಸರ್ಕಾರ ಈ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ಇವರಿಗೆ ಕಿವಿ, ಕಣ್ಣು ಇಲ್ವಾ? ಘೋಷಣೆ ಕೂಗಿರೋದನ್ನ ಇಡಿ ದೇಶ ನೋಡಿದೆ. ಸರ್ಕಾರ ಬದುಕಿದ್ರೆ, ತಕ್ಷಣ ಆರೋಪಿಗಳನ್ನ ಅರೆಸ್ಟ್ ಮಾಡಬೇಕು. ಘೋಷಣೆ ಕೂಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಒಬ್ಬ ಕಾಂಗ್ರೆಸ್ ನಾಯಕರು ಕೂಡ ಘೋಷಣೆ ಕೂಗಿದ್ದಾರೆ ಅಂತ ಒಪ್ಪಿಕೊಳ್ತಿಲ್ಲ. ಹಾಗಾದ್ರೆ ಇವರೆಲ್ಲರೂ ಪಾಕಿಸ್ತಾನ ಪರನಾ? ರಾಷ್ಟ್ರ ದ್ರೋಹಿಗಳ ಪರನಾ? ಎಂದು ಆಕ್ರೋಶ ಹೊರಹಾಕಿದರು.
ಚಿತ್ತಾಪುರ ನಮೋ ಭಾರತ್ ಕಾರ್ಯಕ್ರಮ ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್; ಚಕ್ರವರ್ತಿ ಸೂಲಿಬೆಲೆಗೂ ಪ್ರವೇಶ
ಬಿಜೆಪಿ ನಾಯಕರು ರಾಷ್ಟ್ರವಾದಿಗಳು ಎಂಬ ಮಹಮ್ಮದ್ ನಲಪಾಡ್ ಹೇಳಿರುವ ಮಾತು ಸತ್ಯ. ಈ ದೇಶದಲ್ಲಿ ರಾಷ್ಟ್ರೀಯವಾದಿಗಳು ಇರೋದು ಸತ್ಯ ಆಯ್ತು. ನಾವು ಇದೇ ವಿಚಾರ ಇಟ್ಟುಕೊಂಡು ಚುನಾವಣೆಗೆ ಹೋಗ್ತೀವಿ. ಸತ್ಯ ಅನ್ನೋದಾದ್ರೆ ನಮ್ಗೆ ಓಟ್ ಕೊಡಿ. ಪಾಕಿಸ್ತಾನ ಜಿಂದಾಬಾಂದ್ ಪರ ಘೋಷಣೆ ಸರಿ ಅಂದ್ರೆ ಕಾಂಗ್ರೆಸ್ ಅವರಿಗೆ ಓಟ್ ಕೊಡಿ. ಲಾಭ ಮಾಡಿಕೊಳ್ಳಬೇಕು ಅಂತೇನಿಲ್ಲ. ರಾಷ್ಟ್ರೀಯವಾದಿ ಪಕ್ಷ ಬಿಜೆಪಿ ಅನ್ನೋದು ಎಲ್ಲರಿಗೂ ಗೊತ್ತು. ನೀವು ಕೂಗಿದ್ರೆ ಅಂತೀರಲ್ಲಾ ನಿಮ್ಗೆ ಕಣ್ಣು ಕಿವಿ ಇಲ್ವಾ? ಯಾಕೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು, ಇವರಿಗೆ ಕೇಳಿಸಿಲ್ವಾ? ಈ ವಿಚಾರ ಇಟ್ಟುಕೊಂಡು ರಾಷ್ಟ್ರೀಯ ಸಿದ್ದಾಂತ ಇಟ್ಟುಕೊಂಡು ಚುನಾವಣೆ ಗೆ ಹೋಗ್ತೇವೆ ಎಂದು ಹೇಳಿದರು.