ತುಮಕೂರು, [ಡಿ.04] ಮುಖ್ಯಮಂತ್ರಿ ಎಚ್. ಡಿ, ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ್ ವಿರುದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿಗೌಡ  ಹರಿಹಾಯ್ದಿದ್ದಾರೆ.

ತುಮಕೂರಿನಲ್ಲಿ ಬರ ಅಧ್ಯಯನ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಎತ್ತಿನ ಹೊಳೆ ಯೋಜನೆಗೆ ನಿಗದಿಯಾದ ಹಣವೆಷ್ಟು? ಯೋಜನೆ ಜಾರಿ ವಿಳಂಬದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದ ನಷ್ಟ ಎಷ್ಟು? ಎಂದು ರಾಜ್ಯ ಮೈತ್ರಿ ಸರ್ಕಾರವನ್ನ ಪ್ರಶ್ನೆ ಮಾಡಿದರು.

"

ಸಮರೋಪಾದಿಯಲ್ಲಿ ಈ ನೀರಾವರಿ ಯೋಜನೆಗಳನ್ನು ಬರಪೀಡಿತ ಪ್ರದೇಶಗಳಲ್ಲಿ ಯಾಕೆ ಮಾಡೋದಿಲ್ಲ. ಕಣ್ಣೀರಿನ ರಾಜಕಾರಣ, ಜಾತಿ ರಾಜಕಾರಣ, ಎತ್ತಿಕಟ್ಟುವ ರಾಜಕಾರಣ ಬಿಡಿ. ಡಿಸಿಎಂ ಪರಮೇಶ್ವರ್ ಸಾಲು ಸಾಲು ವಾಹನಗಳನ್ನು ತಂದು ಬಿಲ್ಡಪ್ ರಾಜಕಾರಣ ಮಾಡ್ತಿರಲ್ಲ ಎಷ್ಟು ಸಚಿವರು ಬರ ಪ್ರವಾಸ ಮಾಡಿದ್ದಾರೆ...?ಕೃಷಿ ಸಚಿವರು ಎಲ್ಲಿದ್ದಾರೆ...? ಎಂದು ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬರಪೀಡಿತ 100 ತಾಲ್ಲೂಕುಗಳಲ್ಲಿ ಹಸುಗಳೆಷ್ಟಿವೆ, ಮೇವು ಬ್ಯಾಂಕ್ ಎಲ್ಲಿ ಸ್ಥಾಪನೆ ಮಾಡಿದ್ದೀರಾ? ಎಂದು ಸಿಎಂ ಹಾಗೂ ಡಿಸಿಎಂ ಪ್ರಶ್ನೆಗಳು ಸುರಿಮಳೆಗೈದರು.