Bengaluru:ಸಿಎಂ, ಡಿಸಿಎಂ ಯಾರೇ ಫ್ಲೆಕ್ಸ್, ಬ್ಯಾನರ್ ಹಾಕಿದ್ರೂ 50 ಸಾವಿರ ರೂ. ದಂಡ ಕಟ್ಬೇಕು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇನ್ನುಮುಂದೆ ಸಿಎಂ, ಡಿಸಿಎಂ ಯಾರದ್ದೇ ಆಗಲಿ ಫ್ಲೆಕ್ಸ್, ಬ್ಯಾನರ್ ಹಾಕಿದರೂ ಸಂಬಂಧಪಟ್ಟವರಿಗೆ 50 ಸಾಔಇರ ರೂ. ದಂಡ ವಿಧಿಸಲಾಗುವುದು.
ಬೆಂಗಳೂರು (ಆ.08): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳ ಹಾವಳಿ ಹೆಚ್ಚಾಗಿತ್ತು. ಈ ಬಗ್ಗೆ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ಫ್ಲೆಕ್ಸ್, ಬ್ಯಾನರ್ ಸೇರಿ ಎಲ್ಲ ಮಾದರಿಯ ಜಾಹಿರಾತು ಪ್ರದರ್ಶನಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಈಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಯಾವುದೇ ಸಚಿವರು, ಶಾಸಕರ ಬ್ಯಾನರ್ ಹಾಕಿದರೂ ಅಂಥವರಿಗೆ ಮುಲಾಜಿಲ್ಲದೇ 50 ಸಾವಿರ ರೂ. ದಂಡ ವಿಧಿಸಲಾಗುವುದು ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರಿನಲ್ಲಿ ಯಾರಾದರೂ ಫ್ಲೆಕ್ಸ್ ಹಾಕಿದ್ರೆ ಒಂದೊಂದು ಫ್ಲೆಕ್ಸ್ ಮೇಲೆ 50 ಸಾವಿರ ದಂಡ ವಿಧಿಸಲಾಗತ್ತದೆ. ನಂದೂ ಹಾಕುವಂತಿಲ್ಲ, ಮುಖ್ಯಮಂತ್ರಿಗಳದ್ದೂ ಹಾಕುವಂತಿಲ್ಲ. ಬಿಬಿಎಂಪಿ ಅವರು ಎಫ್‌ಐಆರ್ ಮಾಡ್ತಾರೆ, ದಂಡ ವಿಧಿಸುತ್ತಾರೆ. ಈವರೆಗೆ 59,419 ಸಾವಿರ ಅನಧಿಕೃತ ಫ್ಲೆಕ್ಸ್ ತೆರವು ಮಾಡಿದ್ದಾರೆ. ಈ ಸಂಬಂಧ ನಗರದಲ್ಲಿ 134 ದೂರುಗಳು ಬಂದಿದೆ. ಅದರಲ್ಲಿ 40 ಎಫ್ಐಆರ್ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.
Bengaluru: ಬಿಬಿಎಂಪಿ 500 ಗುತ್ತಿಗೆದಾರರಿಂದ ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಕೆ
ಆ.15ರೊಳಗೆ ಎಲ್ಲ ಜಾಹಿರಾತು ಪ್ರದರ್ಶನ ಬ್ಯಾನ್: ಆಗಸ್ಟ್ 15 ರೊಳಗೆ ಎಲ್ಲಾ ಫ್ಲೆಕ್ಸ್ ಬ್ಯಾನರ್, ಹೋರ್ಡಿಂಗ್ಸ್ ಬ್ಯಾನ್ ಮಾಡಲಾಗುತ್ತಿದೆ. ನಗರದಲ್ಲಿನ ಫ್ಲೆಕ್ಸ್, ಬ್ಯಾನರ್ ನೋಡಿ ನನಗೆ ಅಸಹ್ಯ ಆಗ್ತಿದೆ. ಇನ್ಮುಂದೆ ಯಾವ ಕಾರಣಕ್ಕೂ ಫ್ಲೆಕ್ಸ್ ಬ್ಯಾನರ್ ಹಾಕುವಂತಿಲ್ಲ. ಯಾರೂ ಕೂಡ ಬೆಂಗಳೂರು ವ್ಯಾಪ್ತಿಯಲ್ಲಿ ಹಾಕುವಂತಿಲ್ಲ. ಒಂದು ವೇಳೆ ಫ್ಲೆಕ್ಸ್ ಬ್ಯಾನರ್ ಹಾಕಿದ್ರೆ ಅವರ ಮೇಲೆ ಕ್ರಮ ಆಗಲಿದೆ. ಈಗಾಗಲೇ ಕೋರ್ಟ್ ನಲ್ಲಿ ಈ ಕುರಿತು ಅಫಿಡವಿಟ್ ಕೂಡ ಸಲ್ಲಿಸಿದ್ದೇವೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಉಳಿದಿರುವ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳನ್ನು ಮೂರು ವಾರದಲ್ಲಿ ತೆರವು ಮಾಡುತ್ತೇವೆ. ಇದಕ್ಕೆ ಪ್ರತ್ಯೇಕವಾಗಿ ಒಂದು ಪಾಲಿಸಿ ಮಾಡುತ್ತೇವೆ. ಅಲ್ಲೀತನಕ ಯಾವುದೇ ಫ್ಲೆಕ್ಸ್ ಬ್ಯಾನರ್ ಹಾಕುವಂತಿಲ್ಲ. ಒಂದು ವೇಲೆ ನಿಯಮ ಉಲ್ಲಂಘನೆ ಮಾಡಿದವರಿಗೆ ದುಬಾರಿ ದಂಡವನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದರು.
ಡಿಕೆಶಿ ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ: ಗುತ್ತಿಗೆದಾರ ಹೇಮಂತ್ ಸವಾಲು!
ಬಿಬಿಎಂಪಿ ಗುತ್ತಿಗೆದಾರರು ಎಲ್ಲಿ ಬೇಕಾದ್ರೂ ಕಂಪ್ಲೇಂಟ್ ಕೊಡ್ಲಿ: ಬಿಬಿಎಂಪಿ ಗುತ್ತಿಗೆದಾರರು ತಾವು ಮಾಡಿದ ಕೆಲಸಕ್ಕೆ ಬಿಲ್ ಪಾವತಿ ಮಾಡುತ್ತಿಲ್ಲವೆಂದು ರಾಜ್ಯಪಾಲರಿಗೆ ದೂರು ನೀಡುತ್ತಿದ್ದಾರೆ. ಈಗ ರಾಜ್ಯಪಾಲರು ಮಾತ್ರವಲ್ಲ ಮುಖ್ಯಮಂತ್ರಿಗಳಿಗೂ ಕಂಪ್ಲೈಂಟ್ ಕೊಡ್ಲಿ. ತಮಗೂ ಸಾಕಷ್ಟು ವರದಿ ಬಂದಿವೆ. ನೈಜತೆ ಪರಿಶೀಲಿಸಿ ಎಂದಿಂದ್ದಾರೆ. ಯಾರು ಕೆಲಸ ಮಾಡಿದ್ದಾರೆ ಅವರಿಗೆ ಕೊಡ್ತೇವೆ. ನನ್ನಗಮನಕ್ಕೆ ಹಲವು ನಕಲಿ ಬಿಲ್ ಗಮನಕ್ಕೆ ಬಂದಿವೆ. ಅಧಿಕಾರಿಗಳಿಗೆ ನಾನು ಸೂಚನೆ ಕೊಟ್ಟಿದ್ದೇನೆ. ಕೆಲವು ಬಿಬಿಎಂಪಿ ಗುತ್ತಿಗೆದಾರರು ಬ್ಲಾಕ್ ಮೇಲ್ ಅಲ್ಲ, ಪ್ರೀತಿ ತೋರಿಸ್ತಾರೆ ಎಂದು ಹೇಳಿದರು.
ರಾಜ್ಯಪಾಲರಿಗೆ ದೂರು ಕೊಟ್ಟ ಗುತ್ತಿಗೆದಾರರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ಮಾಡಿ 26 ತಿಂಗಳಾರದೂ ಬಿಲ್ ಪಾವತಿ ಮಾಡದ ಪ್ರಕರಣದ ಕುರಿತಂತೆ ಗುತ್ತಿಗೆದಾರರ ಸಂಘದಿಂದ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣ ಬಿಡುಗಡೆ ಮಾಡಲು ಶೇ.10 ರಿಂದ ಶೇ.15 ಕಮೀಷನ್ ನೀಡುವಂತೆ ಒತ್ತಾಯ ಮಾಡಿದ್ದಾರೆಂದು ಗುತ್ತಿಗೆದಾರರ ಸಂಘದಿಂದ ಆರೋಪ ಮಾಡಲಾಗಿದೆ. ಆದರೆ, ಈ ಬಗ್ಗೆ ಮಾತನಾಡಿದ ಡಿಕೆಶಿ ಯಾರಿಗಾದ್ರೂ ಕಂಪ್ಲೇಂಟ್ ಕೊಡ್ಲಿ ಎಂದು ಹೇಳಿಕೆ ನೀಡಿದ್ದು, ಇದು ಯಾವ ಮಟ್ಟಕ್ಕೆ ತಲುಪುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.